ವಿದ್ಯಾರ್ಥಿಗಳೇ ಶಿಕ್ಷಣದೊಂದಿಗೆ ದೇಶ ಪ್ರೇಮ ಬೆಳೆಸಿಕೊಳ್ಳಿ: ಕೋಟ ಶ್ರೀನಿವಾಸ್ ಪೂಜಾರಿ
ಉಡುಪಿ : ಶಿಕ್ಷಣದ ಗುರಿ ಕೇವಲ ಜ್ನಾನ ಸಂಪಾದನೆಗೆ ಸೀಮಿತವಾಗಿರಬಾರದು. ದೇಶ ಪ್ರೇಮ, ನೈತಿಕ ಮೌಲ್ಯ ಮತ್ತು ಸಾಮಾಜಿಕ ಕಾಳಜಿಯಿಲ್ಲದ ಶಿಕ್ಷಣ ದುರಂತಕ್ಕೆ ಕಾರಣವಾದೀತು ಎಂದು ರಾಜ್ಯ ಬಂದರು ಮೀನುಗಾರಿಕೆ ಹಾಗು ಮುಜರಾಯಿ ಸಚಿವರಾದ ಕೋಟ ಶ್ರೀನಿವಾಸ್ ಪೂಜಾರಿ ನುಡುದರು.
ಅವರು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಕರ್ನಾಟಕ ರಾಜ್ಯ ಸಂಸ್ಥೆ ಹಾಗೂ ಉಡುಪಿ ಜಿಲ್ಲಾ ಸಂಸ್ಥೆಯ ಮತ್ತು ಕಲ್ಲ್ಯಾಣಪುರ ಸ್ಥಳೀಯ ಸಂಸ್ಥೆಯ ಸಹಯೋಗದೊಂದಿಗೆ ಮಿಲಗ್ರಿಸ್ ಕಾಲೇಜಿನಲ್ಲಿ ಆಯೋಜಿಸಲಾದ ರಾಜ್ಯ ಮಟ್ಟದ ರೇಂಜರಿಂಗ್ ಶತಮಾನೋತ್ಸವ, ರೋವರ್‍ಸ್-ರೇಂಜರ್‍ಸ್ ಮೂಟ್ ಮತ್ತು ರೋವರ್ ಸ್ಕೌಟ್ ಲೀಡರ್ -ರೇಂಜರ್ ಲೀಡರ್‌ಗಳ ಸಮಾವೇಶದಲ್ಲಿ ಅವರು ಮಾತನಾಡಿದರು. ವಿದ್ಯ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾದ ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳಿಗೆ ಬೇಕಾದ ಎಲ್ಲಾ ಅಗತ್ಯ ನೆರವನ್ನು ಸರಕಾರ ನೀಡಲಿದೆ ಎಂದು ಅವರು ನುಡಿದರು.
ಇದೇ ಸಂದರ್ಭದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆವತಿಯಿಂದ ಸಚಿವರನ್ನು ಸನ್ಮಾನಿಸಲಾಯಿತು. ಸ್ಕೌಟ್ಸ್ ಆಯುಕ್ತರಾದ ಡಾ| ವಿಜೇಂದ್ರ ವಸಂತ್ ಸ್ವಾಗತಿಸಿದರೆ . ಕಾರ್ಯಕ್ರಮ ಸಂಘ್‌ಟಕರಾದ ಡಾ ಜಯರಾಮ್ ಶೆಟ್ಟಿಗಾರ್ ವಂದಿಸಿದರು. ಆನಂದ ಅಡಿಗ ಕಾರ್ಯಕ್ರಮ ನಿರೂಪಿಸಿದರು. ಐ.ಕೆ. ಜಯಚಂದ್ರ, ಶ್ರೀಮತಿ ಜ್ಯೋತಿ ಪ್ರಭಾಕರ್ ಭಟ್, ಬಿ.ವಿ. ರಾಮಲತಾ, ಶ್ರೀಮತಿ ರಾಧಾ ವೆಂಕಟೇಶ್, ಶ್ರೀಮತಿ ಜಾನಕಿ ವೇಣುಗೋಪಾಲ್, ಮೊದಲಾದವರು ಉಪಸ್ತಿತರಿದ್ದರು.