ಬದನೆಕಾಯಿ ಟೊಮೊಟೊ ಗೊಜ್ಜು

ಮನೆಗೆ ದಿಡೀರ್ ಆಗಿ ಅತಿಥಿಗಳು ಬಂದರೆ ಅತಿ ಸುಲಭವಾಗಿ ಮಾಡುವ ಅಡುಗೆ ಇದು ನೀವು ಒಮ್ಮೆ ಟ್ರೈ ಮಾಡಿ

ಬೇಕಾಗುವ ಸಾಮಗ್ರಿಗಳು
ಬದನೆಕಾಯಿ
ಟೊಮೆಟೊ
ಹಸಿ ಮೆಣಸು
ಈರುಳ್ಳಿ
ಕೊತ್ತಂಬರಿ ಸೊಪ್ಪು
ಬೆಳ್ಳುಳ್ಳಿ
ಕರಿಬೇವು
ಎಣ್ಣೆ
ಸಾಸಿವೆ
ಕಡಲೆ ಬೇಳೆ
ಉದ್ದಿನ ಬೇಳೆ
ಉಪ್ಪು
ಮಾಡುವ ವಿಧಾನ
ನೀರಿಗೆ ಹಸಿ ಮೆಣಸು ಬದನೆಕಾಯಿ ಟೊಮೆಟೊ ಹಾಕಿ ಐದು ನಿಮಿಷ ಬೇಯಿಸಿ ತಣಿಯಲು ಬಿಡಿ ,ಬೇಯಿಸಿದ ಬದನೆಕಾಯಿ ಮಿಶ್ರಣಕ್ಕೆ ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು, ರುಚಿಗೆ ತಕಷ್ಟು ಉಪ್ಪು ಹಾಕಿ ೧/೨ ಕಪ್ಪಿನಷ್ಟು ಎಣ್ಣೆ ಹಾಕಿ ಅದು ಬಿಸಿಯಾದ ಮೇಲೆ ಸಾಸಿವೆ ,ಕಡ್ಲೆಬೇಳೆ ಉದ್ದಿನಬೇಳೆ, ಕರಿಬೇವು ಹಾಕಿ ಕುದಿಸಿ, ನಂತರ ರುಬ್ಬಿದ ಮಸಾಲೆ ಗೆ ಹಾಕಿ ಬಾಡಿಸಿದರೆ ರುಚಿಯ ಬದನೇಕಾಯಿ ಗೊಜ್ಜು ರೆಡಿ …

ಶುಭವಾಣಿ ಅಡಿಗ
ಬೆಂಗಳೂರು

Leave a Reply

Your email address will not be published. Required fields are marked *

error: Content is protected !!