ಬೈಕ್ – ರಿಕ್ಷಾ ಮುಖಾಮುಖಿ ಹಿರಿಯ ಯಕ್ಷಗಾನ ಕಲಾವಿದ ಶ್ರೀಪಾದ ಹೆಗಡೆ ಗಂಭೀರ
ಭೀಕರ ರಸ್ತೆ ಅಫಘಾತದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಶ್ರೀಪಾದ ಹೆಗಡೆ ಹಡಿನಬಾಳ(66)ರವರು ಗಂಭೀರ ಗಾಯಗೊಂಡು ಉಡುಪಿಯ ಖಾಸಗಿ ಅಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಯನ್ನ ಪಡೆಯುತ್ತಿದ್ದಾರೆ.ಉತ್ತರಕನ್ನಡ ಜಿಲ್ಲೆಯ ಅರೇಂಗಡಿ-ಚಂದಾವರ ನಡುವಿನ ಕಡತೋಕ ಕ್ರಾಸ್ನಲ್ಲಿ ಜೂ.೧೭ರಂದು ಮಗನ ಜೊತೆಯಲ್ಲಿ ಬೈಕಿನಲ್ಲಿ ಹೋಗುತ್ತಿದ್ದ ಸಂದರ್ಭ ಎದುರಿನಿಂದ ಬಂದ ರಿಕ್ಷಾ ಡಿಕ್ಕಿ ಹೊಡೆದ ಪರಿಣಾಮ ಹೆಗೆಡೆಯವರು ರಸ್ತೆಗೆ ಎಸೆಯಲ್ಪಟ್ಟು ತಲೆಗೆ ಗಂಭೀರ ಗಾಯವಾಗಿದ್ದು ಉಡುಪಿಯ ಆದರ್ಶ ಅಸ್ಪತ್ರೆಯಲ್ಲಿ ತೀವ್ರಾ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಯ ವಿವರ- ಮನೆಯಲ್ಲಿ ಪ್ರತಿ ವರ್ಷವೂ ಮಣ್ಣಿನಲ್ಲಿ ಗಣಪತಿ ಮೂರ್ತಿ ರಚಿಸುವ ಶ್ರೀಪಾದ ಹೆಗಡೆ ವಾಡಿಕೆಯಂತೆ ರಚನೆಗೂ ಮುನ್ನ ದಿವಗಿ ಹಾಗು ಗೋರೆ ಮಠಕ್ಕೆ ತೆರಳಿ ಮಂತ್ರಕ್ಷಾತೆ ಪಡೆದುಕೊಳ್ಳುತ್ತಿದ್ದರು. ಇದಕ್ಕಾಗಿ ಪುತ್ರ ಶ್ರೀಶ ಹೆಗಡೆ ಜೊತೆ ಬೈಕಿನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಕಡತೋಕ ಸಮೀಪ ಆಟೋರಿಕ್ಷಾ ಚಾಲಕ ಅಡ್ಡ ರಸ್ತೆಯಿಂದ ನೇರವಾಗಿ ಮುಖ್ಯರಸ್ತೆಗೆ ನುಗ್ಗಿಸಿದ ಪರಿಣಾಮ ಬೈಕಿಗೆ ಡಿಕ್ಕಿ ಹೊಡೆಯಿತು ಇದರ ಪರಿಣಾಮ ಶ್ರೀಪಾದರು ರಸ್ತೆಗೆ ಅಪ್ಪಳಿಸಿದರು ಕೂಡಲೆ ಅವರನ್ನು ಹೊನ್ನಾವರದ ಸರಕಾರಿ ಅಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಉಡುಪಿಯ ಅದರ್ಶ ಅಸ್ಪತ್ರೆಗೆ ಕರೆತರಲಾಯಿತು.
ಪ್ರಸ್ತುತ ಅತಿಥಿ ಕಲಾವಿದರಾಗಿ ಸೇವೆ ಸಲ್ಲಿಸುತ್ತಿರುವ ಇವರು ಕೊಂಡಾಕುಳಿಯಲ್ಲಿ ಕುಟುಂಬಸ್ಥರೊಂದಿಗೆ ವಾಸವಾಗಿದ್ದಾರೆ.
ಅಜ್ಜಿ,ಶೂರ್ಪನಖಿ,ಅಂಬೆ,ಕಾಶಿಮಣಿ ಹೀಗೆ ಅನೇಕ ಪಾತ್ರಗಳಿಗೆ ಜೀವ ನೀಡಿದವರು. ಅಮೃತೇಶ್ವರಿ,ಪೆರ್ಡೂರು,ಶಿರಸಿ ಮಾರಿಕಾಂಬ, ಸಾಲಿಗ್ರಾಮ,ಇಡಗುಂಜಿ, ನೀಲಾವರ ಮೇಳದಲ್ಲಿ ಕಲಾಸೇವೆ ಸಲ್ಲಿಸಿದ್ದರು.