ವರುಷ ಕಳೆದರೂ ಮಾಸದ ನೆನಪು……
ಅದು ಜುಲೈ 19 2018 ಇಂದಿಗೆ ಸರಿಯಾಗಿ ಒಂದು ವರ್ಷ…. ಸೂರ್ಯೋದಯವಾಗಿ ಇನ್ನೇನು ಕೆಲವೇ ಕ್ಷಣಗಳಲ್ಲಿ ಎಲ್ಲರೂ ತಮ್ಮ ದಿನಚರಿಯನ್ನು ಪ್ರಾರಂಭಿಸುವರಿದ್ದರು……..ಅದಾಗಲೇ ಕೃಷ್ಣ ನಗರಿ ಉಡುಪಿಯಲ್ಲಿ ಒಂದು ಗಾಢ ಮೌನ ಕೋಲ್ಮಿಂಚಿನಂತೆ ಆವರಿಸ ತೊಡಗಿತ್ತು…….
ಆ ಅಪ್ರತಿಮ ಕಲಾವಿದ, ಸಮುದ್ರದ ಅಲೆಗಳೊಂದಿಗೆ ಸೆಣಸಾಡುತ್ತಿದ್ದ ಈಜುಪಟು ಅವತ್ತು ಕಾಲನ ಲೀಲೆಗೆ ಗಾಢ ನಿದ್ರೆಗೆ ಜಾರಿದ್ದರು…….
ಹೌದು…
ಉಡುಪಿಯಲ್ಲಿ ಅಸ್ಟಮಿಗೆ ಹೊಸ ಮೆರುಗು ತಂದು ಕೊಟ್ಟ ಪರಮಪೂಜ್ಯ ಶ್ರೀಗಳು, ಅಪ್ರತಿಮಾ ಕಲಾವಿದ
ಶಿರೂರು ಶ್ರೀ ಲಕ್ಷ್ಮಿವರ ತೀರ್ಥ ಶ್ರೀಪಾದರು ತನ್ನ ಕೊನೆ ಉಸಿರೆಳೆದು ಸ್ವರ್ಗದಲ್ಲಿ ಅವತ್ತಿನ ಹಾಜರಿ ಹಾಕಿದ್ದರೂ…
ಶೂದ್ರರ ಸ್ವಾಮೀಜಿ ಎಂದೇ ಖ್ಯಾತಿ ಪಡೆದ ಅವರು ಅದೆಷ್ಟೋ ಬಡ ಜನತೆ ಪಾಲಿನ ಆಶಾಕಿರಣವಾಗಿದ್ದರೂ……
ಅಷ್ಟಮಿಯ ಸಮಯದಲ್ಲಿ ಅದೆಷ್ಟೋ ಕಲಾವಿದರಿಗೆ ಬೃಹತ್ ವೇದಿಕೆ ಒದಗಿಸಿ ಕಲೆಗೆ, ಕಲಾವಿದರಿಗೆ ಗೌರವ ಒದಗಿಸಿದವರು ಪೂಜ್ಯ ಶ್ರೀಗಳು…….
ಅವತ್ತು ಏನಾಯಿತೋ ವಿಠ್ಠಲನಿಗೂ ಅವರ ಸೇವೆ ಸಾಕೆನಿಸಿತೋ ಏನೋ ತನ್ನಲ್ಲಿಗೆ ಬಹಳ ಬೇಗ ಕರೆದುಕೊಂಡು ಬಿಟ್ಟ ಅಷ್ಟಕ್ಕೂ ಅವರದ್ದು ಸಾಯುವ ವಯಸ್ಸು ಅಲ್ಲ……
ಅವರ ಸಾವಿನ ಸುದ್ದಿ ಕೇಳಿ ಧಾರ್ಮಿಕ ನಗರಿ ನೀರವ ಮೌನಕ್ಕೆ ಜಾರಿತ್ತು……..ರಥ ಬೀದಿಯಲ್ಲಿ ಕಾರ್ಮೋಡ ಆವರಿಸಿ ಸ್ಮಶಾನ ಮೌನಕ್ಕೆ ಸರಿದು ಬಿಟ್ಟಿತ್ತು………..
ಶಿರೂರು ಶ್ರೀಗಳನ್ನು ದ್ವೇಷಿಸುವ ವಸಾಹತು ಶಾಹಿ ವರ್ಗ ಅಂದು ಇತ್ತು ಇವತ್ತು ಇದೆ ಆದರೆ ಅದನ್ನು ಹೊರತು ಪಡಿಸಿ ಅವರನ್ನ ಪ್ರೀತಿಸುವ ಅಪಾರ ಭಕ್ತರು ಇವತ್ತಿಗೂ ಇದ್ದಾರೆ…….
ಅಷ್ಠಮಿ ಬಂದ ಕೂಡಲೇ ಮೊದಲು ನೆನಪಿಗೆ ಬರುವುದು ಶಿರೂರು ಶ್ರೀಗಳು……..
ಸದಾ ಮುಖದಲ್ಲಿ ಮಂದಹಾಸ ದೊಂದಿಗೆ ತನ್ನ ದೈತ್ಯ ಜೀವವನ್ನು ಹೊತ್ತುಕೊಂಡು ಮೂಢನಂಬಿಕೆಯನ್ನು ಮುರಿದು ಎಲ್ಲಾ ಜಾತಿ ವರ್ಗದವರೊಂದಿಗೆ ಬೆರೆಯುತ್ತಿದ್ದ ಸ್ವಾಮೀಜಿ ಅಂದು ಶರಶೈಯೆಯಲ್ಲಿ ಮಲಗಿದ್ದರೂ………
ದಷ್ಟ ಪುಷ್ಟರಾಗಿ ಆರೋಗ್ಯವಂತಾಗಿದ್ದ ಸ್ವಾಮೀಜಿ ಯ ಸಾವು ಇಂದಿಗೂ ಅವರ ಕೋಟ್ಯಾನುಕೋಟಿ ಭಕ್ತರಲ್ಲಿ ಅನುಮಾನಗಳು ಬೂದಿ ಮುಚ್ಚಿದ ಕೆಂಡದಂತಿದೆ………
ಅವರ ಸಾವಿಗೆ ಕೇವಲ ಅಭಿಮಾನಿಗಳು, ಭಕ್ತರು ಮಾತ್ರವಲ್ಲದೇ…….. ಅವರ ಎಲ್ಲಾ ಪಯಣಕ್ಕೆ ಸಾಥ್ ನೀಡುತ್ತಿದ್ದ ಅವರ ಪಾಜೆರೋ ಕಾರ್ ಯಜಮಾನನ ಸಾವಿಗೆ ದುಃಖಿಸದೆ ಇರದು………
ರಥ ಬೀದಿಯ ಪ್ರತಿ ಮೂಲೆಯು, ಪಾರ್ಕಿಂಗ್ ಪ್ರದೇಶದ ಪ್ರತಿ ಕಂಬಗಳು ಮಥುರಾ ಹೋಟೆಲ್ ನ ಗೋಡೆಗಳು ಅವರ ಸಾವಿಗೆ ಕಣ್ಣಿರುಸಿದ್ದು ಸತ್ಯ……
ಅವರ ಅನ್ನ ಉಂಡ ಕೆಲವರು ಅವರ ಬೆನ್ನಿಗೆ ಚೂರಿ ಹಾಕಿದರೆ……. ?ಅಥವಾ ಅವರ ಸಾವು ಸಹಜವೇ……….!!!!.ಅಸಹಜವೇ….? ನಾ ಅರಿಯೇನು…..
ಸ್ವಾಮೀಜಿ ನಿಮ್ಮ ಸಾವಿಗೆ ಸರಿಯಾದ ನ್ಯಾಯ ದೊರಕಲಿ ಎಂದು ಇಂದಿಗೂ ಪ್ರಾರ್ಥಿಸುತ್ತಿರುವ ಅಪಾರ ಭಕ್ತ ಸಾಗರ ಇಂದಿಗೂ ಜೀವಂತ ಇದೆ……… ನಿಮ್ಮ ಸಾವಿನ ನ್ಯಾಯ ತೀರ್ಮಾನ ಮನುಷ್ಯ ನಿರ್ಮಿತ ನ್ಯಾಯಾಲಯದಲ್ಲಿ ಅಗದಿದ್ದರೇನು…….ದೇವರ ನ್ಯಾಯದಲ್ಲಿ ಆಗುವುದು ಎಂಬ ನಂಬಿಕೆಯೊಂದಿಗೆ ಭಕ್ತ ಸಾಗರ ಕಾಯುತ್ತಿದೆ…….
ವಿಠ್ಠಲ ನ್ಯಾಯ ಕೊಡುವೆಯಾ………
ರಕ್ಷಿತ್ ಭಂಡಾರಿ