ಬಾರ್ಕೂರು ತಾಪಂ ಉಪಚುನಾವಣೆಯಲ್ಲಿ ಬಿಜೆಪಿಗೆ ಪ್ರಚಂಡ ಗೆಲುವು
ಉಡುಪಿ ತಾಲೂಕು ಪಂಚಾಯತ್ ನ ಬಾರ್ಕೂರು ತಾಪಂ.. ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಹನೇಹಳ್ಳಿ ನಲ್ಕುದ್ರು ಚಂದ್ರಶೇಖರ ಶೆಟ್ಟಿ ಗೆಲುವು ಸಾಧಿಸಿದ್ದಾರೆ. ಚುನಾವಣೆಯಲ್ಲಿ ಒಟ್ಟು 3612 ಮತಗಳು ಚಲಾವಣೆಯಾಗಿದ್ದು ಎದುರಾಳಿ ಅಭ್ಯರ್ಥಿ ಕಾಂಗ್ರೆಸ್ ಪಕ್ಷದ ಜಾನ್ ಪಿಕಾರ್ಡೋ 672 ಮತಗಳನ್ನು ಪಡೆದರೆ ,ಜೆಡಿಎಸ್ ಅಭ್ಯರ್ಥಿ ಶೋಭಾ ಪಿರ್ನಾಂಡಿಸ್ 128 ಮತಗಳನ್ನು ಪಡೆದರು, ಬಿಜೆಪಿ ಅಭ್ಯರ್ಥಿ ಚಂದ್ರಶೇಖರ ಶೆಟ್ಟಿ 2393 ಮತಗಳನ್ನು ಪಡೆದು ಸುಮಾರು 1677 ಮತಗಳ ಅಂತರದಿಂದ ಗೆಲವು ಸಾಧಿಸಿದ್ದಾರೆ.
ಚಂದ್ರಶೇಖರ ಶೆಟ್ಟಿಯವರು ಈ ಹಿಂದೆ 2 ಬಾರಿ ಹನೆಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು ಹನೆಹಳ್ಳಿ ನಲ್ಕುದ್ರು ಕಂಬಿಗರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
ಎಲ್ಲೆಲ್ಲಿ ಉಪಚುನಾವಣೆ ? – ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕಿನ ಉಡುಪಿ ತಾಲೂಕು ಪಂಚಾಯತ್ ನ 4 ನೇ ಬಾರ್ಕೂರು ಕ್ಷೇತ್ರದ ತೆರವಾಗಿರುವ 1 ಸ್ಥಾನಕ್ಕೆ ಹಾಗೂ ಬ್ರಹ್ಮಾವರ ತಾಲೂಕಿನ ಬಿಲ್ಲಾಡಿ ಗ್ರಾಮ ಪಂಚಾಯತಿಯ ಒಂದು ಸದಸ್ಯ ಸ್ಥಾನ, ಕಾಪು ತಾಲೂಕಿನ ಕಟಪಾಡಿ ಗ್ರಾಮ ಪಂಚಾಯತಿಯ ಒಂದು ಸದಸ್ಯ ಸ್ಥಾನ, ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮ ಪಂಚಾಯತಿಯ ಒಂದು ಸದಸ್ಯ ಸ್ಥಾನ ಹಾಗೂ ಕಲ್ಯಾ ಗ್ರಾಮ ಪಂಚಾಯತ್ ನ 3 ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ನಡೆದಿದೆ.