ಗದ್ದೆಯಿಂದ ತೆನೆ ಹೊತ್ತು ಸಂಭ್ರಮಿಸಿದ ವಿದ್ಯಾರ್ಥಿಗಳು

ಉಡುಪಿ : ನಿಟ್ಟೂರು ಪ್ರೌಢ ಶಾಲೆಯ ೧೦ನೇ ತರಗತಿಯ 57 ವಿದ್ಯಾರ್ಥಿಗಳು ಮಕ್ಕಳ ದಿನಾಚರಣೆಯ ಪೂರ್ವ ದಿನ ಸನಿಹದ ಕಕ್ಕುಂಜೆ ಗದ್ದೆಯಲ್ಲಿ ತಾವು ನಾಟಿ ಮಾಡಿದ ಗದ್ದೆಗೆ ತೆರಳಿ ತೆನೆಯನ್ನು ಗದ್ದೆಯಿಂದ ಹೊತ್ತು ತಂದು ಅಂಗಳದಲ್ಲಿ ಬತ್ತವನ್ನ ಬೇರ್ಪಡಿಸಿ ಸಂತೋಷ ಪಟ್ಟರು . ಕಳೆದ 5 ವರ್ಷಗಳಿಂದ ಈ ರೀತಿ ಕೃಷಿ ಚಟುವಟಿಕೆ ಬಗ್ಗೆ ಪ್ರಾಯೋಗಿಕವಾದ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳನ್ನು ಶಾಲಾ ಮುಖ್ಯೋಪಾಧ್ಯಾಯ ಮುರಲಿ ಕಡೆಕಾರ್ ನೇತೃತ್ವದಲ್ಲಿ ತೊಡಗಿಸಿಕೊಂಡು, ಕೃಷಿ ಬಗ್ಗೆ ಗೌರವಭಾವ ಮೂಡಿ ಉಣ್ಣುವ ಅನ್ನದ ಮಹತ್ವವನ್ನು ಪರಿಣಾಮಕಾರಿಯಾಗಿ ತಿಳಿಸಲಾಗುತ್ತಿದೆ. ಶ್ರೀಮತಿ ಸತ್ಯಮ್ಮ ನಾಯ್ಕರ 4 ಗದ್ದೆಗಳಿಂದ(1/2 ಎಕ್ರೆ) ಭತ್ತ ಸಂಗ್ರಹಿಸಲಾಯಿತು. ಕಟಾವು ಮಾಡುವ ವಿಧಾನವನ್ನು ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ಮಾಡಿಸಲಾಯಿತು.

ಕೃಷಿಕರಾದ ಚಂದ್ರಶೇಖರ್, ವಾಸುದೇವ, ಶ್ರೀನಿವಾಸ, ಸುನೀತ್ ಹಾಗೂ ಅಧ್ಯಾಪಕರುಗಳಾದ ಅನಸೂಯ, ಶೃಂಗೇಶ್ವರ, ಸೀಮಾ, ರಾಮದಾಸ್, ಅಶೋಕ್, ಗುಣನಿಧಿ ಹಾಗೂ ನಾಗರತ್ನ ಈ ಕೃಷಿ ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ ಸಕ್ರಿಯವಾಗಿ ಪಾಲ್ಗೊಂಡು ಕೃಷಿ ಪಾಠ ಯಶಸ್ವಿಯಾಗಲು ಸಹಕರಿಸಿದರು. ಸಾಮಾಜಿಕ ಕಾರ್ಯಕರ್ತ ಶ್ರೀ ಪೆರಂಪಳ್ಳಿ ವಾಸುದೇವ ಭಟ್‌ರವರು ಭೇಟಿ ನೀಡಿ ಮಕ್ಕಳನ್ನು ಪ್ರೋತ್ಸಾಹಿಸಿದರು.

Leave a Reply

Your email address will not be published. Required fields are marked *

error: Content is protected !!