ನಿರಾಶ್ರಿತರಿಗೆ ಬಂಟ್ವಾಳ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಿಂದ ನೆರವು
ಬಂಟ್ವಾಳ;: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬಂಟ್ವಾಳ ಹಾಗೂ ಸಿದ್ದಕಟ್ಟೆ ಘಟಕದ ವತಿಯಿಂದ ಭಾನುವಾರ ಬಿ.ಸಿ ರೋಡ್ ಹಾಗೂ ಸಿದ್ದಕಟ್ಟೆ ಪರಿಸರದಲ್ಲಿ ಸಂತ್ರಸ್ತರಿಗೆ ನೆರವು ನೀಡುವ ನಿಟ್ಟಿನಲ್ಲಿ ಅಗತ್ಯ ವಸ್ತುಗಳು ಹಾಗೂ ನಿಧಿ ಸಂಗ್ರಹಿಸಲಾಯಿತು.
ಎಬಿವಿಪಿ ಯ ಈ ಕಾರ್ಯಕ್ಕೆ ಬಿ.ಸಿ ರೋಡು ಹಾಗೂ ಸಿದ್ದಕಟ್ಟೆ ಜನತೆ ಸ್ಪಂದಿಸುವ ಮೂಲಕ ಸಂತ್ರಸ್ತರ ನೆರವಿಗೆ ಕೈ ಜೋಡಿಸಿದ್ದಾರೆ. ಈ ಸಂದರ್ಭದಲ್ಲಿ ಧನ ಸಹಾಯ ಹಾಗೂ ಇತರೆ ಅಗತ್ಯ ವಸ್ತುಗಳನ್ನು ಸಂಗ್ರಹಿಸಿ,ನಿರಾಶ್ರಿತರಿಗೆ ತಲುಪಿಸುವ ಜೊತೆಗೆ ಬಂಟ್ವಾಳ ಪರಿಸರದಲ್ಲಿ ನೆರೆ ಸಂತ್ರಸ್ತರಾದವರಿಗೆ ಮದ್ಯಾಹ್ನದ ಭೋಜನದ ವ್ಯವಸ್ಥೆಯನ್ನು ಕೂಡಾ ಬಂಟ್ವಾಳ ಶಾಖೆಯ ವತಿಯಿಂದ ನೀಡಲಾಯಿತು.
ಈ ಕಾರ್ಯದಲ್ಲಿ ಎಬಿವಿಪಿ ಯ ಪ್ರಮುಖ ಕಾರ್ಯಕರ್ತರು ಹಾಜರಿದ್ದರು.. ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು ಜೀವ ನದಿಗಳು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿವೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತವು ದಿನದ 24 ಗಂಟೆಗಳ ಕಾಲವೂ ಪರಿಸ್ಥಿತಿಗಳನ್ನು ನಿಯಂತ್ರಿಸಲು ಮತ್ತು ದುರಂತಗಳನ್ನು ತಡೆಯುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿವೆ.
ಇದರ ಜೊತೆಗೆ *ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್* ಕೂಡಾ ಸಂತ್ರಸ್ತರ ನೆರವಿಗೆ ನಿಂತಿದ್ದು, ಜಿಲ್ಲೆಯ ನಾನಾ ಕಡೆಗಳಲ್ಲಿ ಸಂತ್ರಸ್ತರಿಗೆ ಅಗತ್ಯ ವಸ್ತುಗಳನ್ನು ಸಂಗ್ರಹಿಸಲು ಮುಂದಾಗಿದೆ ಎಂದು ಎಬಿವಿಪಿ ಮುಖಂಡರು ತಿಳಿಸಿದ್ದಾರೆ,