ಬಂಟ್ವಾಳ:ಕೊಳಲಗೇರಿಯಲ್ಲಿ ಅಕ್ಷರ ಕ್ರಾಂತಿಗೆ ಮುನ್ನಡಿ !

ಬಂಟ್ವಾಳ: ಪೊಳಲಿ ಕ್ಷೇತ್ರದಿಂದ ಜು.21 ರಂದು ಹೊರಟ ಭಾರತ ಶಿಕ್ಷಣ ಯಾತ್ರೆ ಹರಿಯಾಣ ರಾಜ್ಯ ತಲುಪಿದ್ದು ಇಲ್ಲಿನ ಕೊಳೆಗೇರಿಯಲ್ಲಿ ಅಕ್ಷರ ಕ್ರಾಂತಿಗೆ ಮುನ್ನುಡಿ ಬರೆದಿದೆ.
ಇಲ್ಲಿನ ರೇವಾಡಿ ಜಿಲ್ಲೆಯ  ಧಾರುಹೇಡಾ ಎಂಬಲ್ಲಿನ ಟೌನ್ ಪಾರ್ಕ್ ಬಳಿಯ ಕೊಳೆಗೇರಿಗೆ  ಸೋಮವಾರ ಸ್ಥಳೀಯ ಶಿಕ್ಷಣಾಭಿಮಾನಿಗಳೊಂದಿಗೆ ಭಾರತ ಶಿಕ್ಷಣ ರಥಯಾತ್ರೆಯ ತಂಡ ಭೇಟಿತು. ಇಲ್ಲಿನ ಇನ್ನೂರ ಐವತ್ತಕ್ಕಿಂತಲೂ ಅಧಿಕ ಜೋಪಡಿಗಳಲ್ಲಿ ವಾಸಿಸುತ್ತಿರುವ ನಿವಾಸಿಗಳ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದು ಕನಿಷ್ಟ ಶಿಕ್ಷಣವನ್ನು ಪಡೆಯುವಲ್ಲಿ ವಿಫಲರಾಗಿದ್ದಾರೆ.
  ಪಾಲಕರಲ್ಲಿ ಮಕ್ಕಳ ಶಿಕ್ಷಣದ   ಬಗ್ಗೆ ಅರಿವು ಹಾಗೂ ಆಸಕ್ತಿ ಇಲ್ಲದೇ ಇರುವುದರಿಂದ ಶಾಲೆಯಲ್ಲಿ ಇರಬೇಕಾದ ಮೂರರಿಂದ ಹನ್ನೆರಡು ವರ್ಷ ಪ್ರಾಯದ ಎಳೆಯ ಮಕ್ಕಳು ಬೀದಿಯಲ್ಲಿ ತಿರುಗಾಡುತ್ತಿದ್ದಾರೆ. ಶಾಲೆಗೆ ಹೋಗಬೇಕೆನ್ನುವ ಆಸೆ ಮಕ್ಕಳಲ್ಲಿ ಇದ್ದರೂ ಕೂಡ ಪೋಷಕರೇ ಮಕ್ಕಳ ಪಾಲಿಗೆ ಮುಳ್ಳಾಗಿರುವುದು ಶಿಕ್ಷಣ ಯಾತ್ರೆಯ ತಂಡದ ಅಧ್ಯಯನದಿಂದ ತಿಳಿದು ಕೊಂಡಿದೆ. ಮಕ್ಕಳಿಗೆ ಶಿಕ್ಷಣದ ಅವಶ್ಯಕತೆಯ ಬಗ್ಗೆ  ತಂಡ ಪಾಲಕರಿಗೆ ಮನವರಿಕೆ ಮಾಡಿದ್ದು ಮಕ್ಕಳನ್ನು ಶಾಲೆಗೆ ಕಳುಹಿಸಿ ಶಿಕ್ಷಣ ನೀಡುವಂತೆ ಜಾಗೃತಿ ಮೂಡಿಸಿತು.
ಭಿಕ್ಷಾಟನೆ, ಬಾಲಕಾರ್ಮಿಕತೆ:
12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ದುಡಿಸಬಾರದು ಎನ್ನುವ ಕಾನೂನು ದೇಶದಲ್ಲಿ ಜಾರಿಯಲ್ಲಿದ್ದರೂ ಹಣ ಸಂಪಾದನೆಗಾಗಿ ಮಕ್ಕಳನ್ನು ದುಡಿಸುತ್ತಿದ್ದಾರೆ. ತಂದೆ ತಾಯಿಯೇ ಮಕ್ಕಳನ್ನು ಭಿಕ್ಷಾಟನೆಗೆ ತಳ್ಳಿ  ಆ ಮೂಲಕ ಬರುವ ಆದಾಯವನ್ನು ತಮ್ಮ ದಿನಖರ್ಚಿಗೆ, ಕುಡಿತಕ್ಕೆ ಬಳಸಿಕೊಳ್ಳುತ್ತಿದ್ದಾರೆ.‌ ಹರಿಯಾಣ ರಾಜ್ಯದಲ್ಲಿ ಸರಕಾರಿ ಶಾಲೆಗಳಲ್ಲಿ ಉಚಿತ ಶಿಕ್ಷಣ, ಸಮವಸ್ತ್ರ, ಭೋಜನ ಸೌಲಭ್ಯಗಳಿದ್ದು ಮಕ್ಕಳನ್ನು ಕರೆತರುವ ಪ್ರಯತ್ನವನ್ನು ಶಿಕ್ಷಕರು, ಶಿಕ್ಷಣಾಭಿಮಾನಿಗಳು ಮಾಡಿದರೂ ಕೂಡ ತಮ್ಮ ಅನುಕೂಲಕ್ಕಾಗಿ ಕೊಳೆಗೇರಿಗಳು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿರುವುದನ್ನು ತಂಡ ತನ್ನ ಅಧ್ಯಯನದಿಂದ ಕಂಡುಕೊಂಡಿದೆ.
ಈ ಸಚಿತ್ರ ವರದಿಯನ್ನು ಆ. 1 ರಂದು ದೆಹಲಿ ಜಂತರ್ ಮಂತರ್ ನಲ್ಲಿ ನಡೆಯಲಿರುವ ಪ್ರತಿಭಟನೆಯ ವೇಳೆ ಕೇಂದ್ರ ಸರಕಾರಕ್ಕೆ ಸಲ್ಲಿಸಿ ಕೊಳೆಗೇರಿಗಳ ಜೀವನ ಸುಧಾರಣೆ ಮಾಡಿ ಮಕ್ಕಳಿಗೆ ಶಿಕ್ಷಣ ಕೊಡಿಸವಂತೆ ಆಗ್ರಹಿಸಲು ಭಾರತ ಶಿಕ್ಷಣ ಯಾತ್ರೆ ತಂಡ ತೀರ್ಮಾನಿಸಿದೆ. ಇಂತಹ ಪರಿಸ್ಥಿತಿ ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಇದ್ದು ಶಿಕ್ಷಣ ವಂಚಿತ ಮಕ್ಕಳು ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಆತಂಕ ಇದೆ,  ಈ ಮಕ್ಕಳಿಗೂ ಉತ್ತಮ ಶಿಕ್ಷಣ ನೀಡಿ ಸುಶಿಕ್ಷಿತ ಸಮಾಜ ನಿರ್ಮಾಣ ಮಾಡಬೇಕುವೆನ್ನುವ ಒತ್ತಾಯವನ್ನು ಶಿಕ್ಷಣ ತಂಡ ಮಾಡಲಿದೆ.
ಸರಕಾರಿ ಶಾಲೆ ಭೇಟಿ:

ಭಾರತ ಶಿಕ್ಷಣ ಯಾತ್ರೆ ತಂಡ ಬಳಿಕ ಹರಿಯಾಣದ ದಾರುಹೇಡದ ಸರಕಾರಿ ಬಾಲಕಿಯರ ಮಾಧ್ಯಮಿಕ ಶಾಲೆ, ರಾಜಕೀಯ ವರಿಷ್ಠ ಮಾಧ್ಯಮಿಕ ಶಾಲೆಗಳಿಗೆ ಭೇಟಿ ನೀಡಿ ಶಿಕ್ಷಣ ಯಾತ್ರೆಯ ಉದ್ದೇಶದ ಬಗ್ಗೆ ತಿಳಿಸಿತು. ಈ ಸಂದರ್ಭ ಶಿಕ್ಷಣಾಭಿಮಾನಿಗಳಾದ ಅಶ್ವಿನ್ ಜೋಷಿ, ದಿನೇಶ್, ಶೇರ್ ಸಿಂಗ್, ಅಶೋಕ್ ಜೋಷಿ, ಸುರೇಶ್ ಶೇನಿ, ರಾಹುಲ್ ಜೋಷಿ, ಲಕ್ಷ್ಮಣ್ ಅಗರ್ ವಾಲ್, ಶೀಶಾರಾಮ್ ಮೊದಲಾದವರು ಹಾಜರಿದ್ದರು. ಸ್ಥಳೀಯ ಮುಖಂಡರಾದ ಅಶೋಕ್ ಜೋಷಿ ಬೆಳಿಗ್ಗೆ ಧ್ವಜಾರೋಹಣ ನೆರವೇರಿಸಿದರು.-

Leave a Reply

Your email address will not be published. Required fields are marked *

error: Content is protected !!