ಬಂಟ್ವಾಳ 11 ಮನೆಗಳಿಗೆ ಹಾನಿ
ಬಂಟ್ವಾಳ: ಮಂಗಳವಾರದಂದು ಬಂಟ್ವಾಳ ತಾಲೂಕಿನಾದ್ಯಂತ ಸಾಧಾರಣ ಮಳೆಯಾಗಿದೆ. ಸೋಮವಾರ ರಾತ್ರಿ ಸುರಿದ ಗಾಳಿ,ಮಳೆಗೆ ವಿವಿಧೆಡೆಯಲ್ಲಿ 11 ಹಾನಿ ಪ್ರಕರಣಗಳು ವರದಿಯಾಗಿವೆ.
ಇವುಗಳಲ್ಲಿ ಮೂರು ಮನೆಗಳಿಗೆ ತೀವ್ರ ಹಾನಿ, 7 ಮನೆಗಳಿಗೆ ಭಾಗಶಃ ಹಾನಿ ಹಾಗೂ ಒಂದು ತೋಟಗಾರಿಕಾ ಹಾನಿಯ ಬಗ್ಗೆ ವರದಿಯಾಗಿವೆ.
ಅರಳ ಗ್ರಾಮದ ಓಸ್ವಾಲ್ಡ್ ಪಿಂಟೋ ಎಂಬವರ ತೋಟಕ್ಕೆ ಹಾನಿಯಾಗಿದ್ದು, 16 ಸಾವಿರ ರೂ. ನಷ್ಟ, ಕುಕ್ಕಿಪಾಡಿ ಗ್ರಾಮದ ಅಪ್ಪಿ ಪೂಜಾರಿ ಎಂಬವರ ಮನೆ ಭಾಗಶಃ ಹಾನಿಯಾಗಿ 10 ಸಾವಿರ ರೂ.ನಷ್ಟ, ಎಲಿಯನಡುಗೋಡು ಗ್ರಾಮದ ಪುಷ್ಪಾ ಮನೆಗೆ ತೀವ್ರ ಹಾನಿಯಾಗಿದ್ದು, 30 ಸಾವಿರ ರೂ. ನಷ್ಟ, ಸಜಿಪನಡು ಗ್ರಾಮದ ಯಾಕುಬ್ ಎಂಬವರ ಮನೆಗೆ ಭಾಗಶಃ ಹಾನಿಯಾಗಿ 20 ಸಾವಿರ ರೂ. ನಷ್ಟ, ಸಜಿಪನಡು ಗ್ರಾಮದ ಗೌರಿ ಎಂಬವರ ಮನೆಗೆ ಮರಬಿದ್ದು ಪೂರ್ಣ ಹಾನಿಯಾಗಿ 80 ಸಾವಿರ ರೂ. ನಷ್ಟ ಸಂಭವಿಸಿದೆ.
ವಿಟ್ಲ ಕಸಬ ಗ್ರಾಮದ ಶಿವರಾಮ ಶರ್ಮಾ, ಯಾದವ, ಮಾಣಿ ಗ್ರಾಮದ ಶಾಂತ, ಕುಳ ಗ್ರಾಮದ ಟಿ.ಮುಹಮ್ಮದ್, ಕೆದಿಲ ಗ್ರಾಮದ ಅಬ್ದುಲ್ ಹಮೀದ್ ಎಂಬವರ ಮನೆಗಳಿಗೆ ಭಾಗಶಃ ಹಾನಿ, ಮಾಣಿ ಗ್ರಾಮದ ಅಕ್ಕಮ್ಮ ಎಂಬವರ ಮನೆಗೆ ತೀವ್ರ ಹಾನಿಯಾಗಿ ನಷ್ಟ ಸಂಭವಿಸಿದೆ ಎಂದು ಬಂಟ್ವಾಳ ತಹಶೀಲ್ದಾರ್ ಕಚೇರಿ ಪ್ರಕಟನೆ ತಿಳಿಸಿದೆ.