ಬ್ಯಾಂಕಿಂಗ್ ಸೇವೆ ಸಾರ್ವಜನಿಕ ಉಪಯುಕ್ತತೆಗೆ ಸೇರ್ಪಡೆ: ಕೇಂದ್ರ ಆದೇಶ
ನವದೆಹಲಿ: ಬ್ಯಾಂಕ್ ಉದ್ಯಮವನ್ನು ಮುಂದಿನ ಆರು ತಿಂಗಳ ಕಾಲ ಸಾರ್ವಜನಿಕ ಉಪಯುಕ್ತ ಸೇವೆ ಎಂದು ಕೇಂದ್ರ ಸರ್ಕಾರ ಘೋಷಿಸಿದೆ.
ಈ ಆದೇಶ ಏಪ್ರಿಲ್ 21ರಿಂದ ಅಕ್ಟೋಬರ್ 21ರವರೆಗೆ ಅನ್ವಯವಾಗಲಿದೆ. ಕೊರೋನಾ ವೈರಸ್ ಸೊಂಕಿನ ಹಿನ್ನೆಲೆಯಲ್ಲಿ ಬ್ಯಾಂಕಿಂಗ್ ವಲಯವನ್ನು ಸಾರ್ವಜನಿಕ ಉಪಯುಕ್ತದ ಸೇವೆಯಡಿ ತಂದಿರುವುದರಿಂದ ಬ್ಯಾಂಕ್ ಉದ್ಯೋಗಿಗಳು ಈ ಅವಧಿಯಲ್ಲಿ ಯಾವುದೇ ಪ್ರತಿಭಟನೆಗಳಲ್ಲಿ ತೊಡಗಿಸಿಕೊಳ್ಳುವಂತಿಲ್ಲ.
ಈ ಕುರಿತು ಹಣಕಾಸು ಸೇವೆಗಳ ಇಲಾಖೆ ಏ.20ರಂದು ಆದೇಶ ಹೊರಡಿಸಿತ್ತು. ಆದರೆ, ಈ ಆದೇಶಕ್ಕೆ ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳು ಎದುರಾಗಿದೆ. ಸರ್ಕಾರ ಬ್ಯಾಂಕ್ ಉದ್ಯೋಗಿಗಳ ಮೂಲ ಹಕ್ಕುಗಳನ್ನು ನಿರ್ಲಕ್ಷಿಸಿದೆ ಎಂದು ಜನರು ಆರೋಪಿಸಿದ್ದಾರೆ.