ಬಹರೈನ್ ಬಿಲ್ಲವಾಸ್ ; ಡಿಸೆಂಬರ್ 12 ರಂದು “ತುಳುವ ಸಂಭ್ರಮ 2019 “

ಬಹರೈನ್- ಗುರು ಸೇವಾ ಸಮಿತಿ ಬಹರೈನ್ ಬಿಲ್ಲವಾಸ್ , ದ್ವೀಪ ರಾಷ್ಟ್ರಗಳಲ್ಲಿ ತುಳುನಾಡಿನ ಸೊಬಗನ್ನು ಪಸರಿಸುವ ಕಾರ್ಯಕ್ರಮ “ತುಳುವ ಸಂಭ್ರಮ 2019 ” ಕಾರ್ಯಕ್ರಮವು ಡಿಸೆಂಬರ್ 12 ರಂದು ಸಂಜೆ 5 ಗಂಟೆಗೆ ಸರಿಯಾಗಿ ಬಹರೈನ್ ನ ಇಂಡಿಯನ್ ಕ್ಲಬ್ ನಲ್ಲಿ ಅದ್ದೂರಿಯಾಗಿ ನಡೆಯಲಿದ್ದು,


ಈ ಕಾಯಕ್ರಮದ ಗೌರವ ಅತಿಥಿಗಳು ಭಾರತದಿಂದ ಭಾಗವಹಿಸಲಿದ್ದು , ವಿವಿಧ ಗಲ್ಫ್ ರಾಷ್ಟ್ರಗಳಿಂದ ಅತಿಥಿಗಳು ಈ ಕಾರ್ಯಕಮದಲ್ಲಿ ಪಾಲ್ಗೊಳಲಿದ್ದಾರೆ. ತುಳುವಿನ ಪ್ರಸಿದ್ಧ ಕಲಾವಿದರಾದ ನವೀನ ಡಿ ಪಡೀಲ್,   ಭೋಜರಾಜ್ ವಾಮಂಜೂರು , ಶೋಭರಾಜ್ ಪಾವೂರು ಸಂಗೀತ ನಿರ್ದೇಶಕ ಗುರು ಬಾಯರ್ ನ್ನೊಳಗೊಂಡ ಹಾಸ್ಯ ನಾಟಕ ಅಲಿ ಬಾಬಾ vs ಗೋಲಿ ಬಾಬಾ ಎಂಬ ನಗೆ ನಾಟಕ ಪ್ರದರ್ಶನಗೊಳ್ಳಲಿದೆ. ಸ್ಥಳೀಯ ಪ್ರತಿಭೆಗಳಿಂದ ಅನೇಕ ಮನರಂಜನಾ ಕಾರ್ಯಕರಮಗಳು ನಡೆಯಲಿದೆ. ಈ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳಬೇಕಾಗಿ ಬಹರೈನ್ ಬಿಲ್ಲವಾಸ್ ನ ಅಧ್ಯಕ್ಷರಾದ ಸುರೇಂದ್ರ ಉದ್ಯಾವರ್ ವಿನಂತಿಸಿಗೊಂಡಿದ್ದಾರೆ .

Leave a Reply

Your email address will not be published. Required fields are marked *

error: Content is protected !!