ರಾಮಮಂದಿರಕ್ಕೆ ಮತ್ತೆ ಅಡ್ಡಿ? ಸುಪ್ರೀಂ ತೀರ್ಪು ಪ್ರಶ್ನಿಸಿ ಮೇಲ್ಮನವಿಗೆ ನಿರ್ಧಾರ!
ಲಖನೌ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುವುದಕ್ಕೆ ಮತ್ತೊಂದು ಅಡ್ಡಿ ಎದುರಾಗಿದ್ದು, ಕಳೆದ ವಾರ ರಾಮಲಲ್ಲಾನ ಪರವಾಗಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಲು ಅಖಿಲ ಭಾರತೀಯ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ನಿರ್ಧರಿಸಿದೆ.
ಉತ್ತರ ಪ್ರದೇಶದ ಲಖನೌ ನಲ್ಲಿ ನ.17 ರಂದು ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಮಂಡಳಿಯ ನಿರ್ಧಾರದ ಬಗ್ಗೆ ಮಾಹಿತಿ ನೀಡಿರುವ ಅಖಿಲ ಭಾರತೀಯ ಮುಸ್ಲೀಂ ವೈಯಕ್ತಿಕ ಕಾನೂನು ಮಂಡಳಿಯ ಕಾರ್ಯದರ್ಶಿ ಜಫಾರ್ಯಾಬ್ ಜಿಲಾನಿ 5 ಎಕರೆ ಜಾಗ ನೀಡುವ ಸುಪ್ರೀಂ ಕೋರ್ಟ್ ನ ತೀರ್ಪು ನಮಗೆ ಸಮ್ಮತವಲ್ಲ. ಇಸ್ಲಾಮಿಕ್ ಕಾನೂನು ಶರಿಯತ್ ನ ಪ್ರಕಾರ ನಾವು ಮಸೀದಿ ನಿರ್ಮಿಸುವುದಕ್ಕೆ ಬೇರೆ ಯಾವುದೇ ಸ್ಥಳವನ್ನೂ ಒಪ್ಪಿಕೊಳ್ಳುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ನಮ್ಮ ಮೇಲ್ಮನವಿ ಶೇ.100ಕ್ಕೆ 100 ರಷ್ಟು ತಿರಸ್ಕೃತಗೊಳ್ಳುತ್ತದೆ. ಇದು ಗೊತ್ತಿದ್ದರೂ ನಾವು ಮೇಲ್ಮನವಿ ಸಲ್ಲಿಸುತ್ತೇವೆ ಇದು ನಮ್ಮ ಹಕ್ಕು ಎಂದು ಮೌಲಾನ ಅರ್ಶದ್ ಮದನಿ ಹೇಳಿದ್ದಾರೆ