ಅಯೋಧ್ಯೆ ಮಹಾ ತೀರ್ಪು – ಸಾಮಾಜಿಕ ಜಾಲತಾಣಗಳ ಮೇಲೆ ಹದ್ದಿನ ಕಣ್ಣು
ನವದೆಹಲಿ – ಅಯೋಧ್ಯೆಯ ಮಹಾ ತೀರ್ಪು ಪ್ರಕಟವಾಗುವ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣಗಳ ಮೇಲೆ ಹದ್ದಿನ ಕಣ್ಣಿಡಲಾಗಿದೆ. ಪ್ರಚೋದನಾಕಾರಿ ಬರಹಗಳನ್ನು ಹಾಕಿದರೆ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿಯಲ್ಲಿ ಯಾವುದೇ ವಾರೆಂಟ್ ಇಲ್ಲದೆ ಬಂಧಿಸಬಹುದಾಗಿದೆ.ಈಗಾಗಲೇ ಅಯೋಧ್ಯೆ ಸೇರಿದಂತೆ ದೇಶದ ಸೂಕ್ಷ್ಮ ಪ್ರದೇಶಗಳಲ್ಲಿ ಕಮಾಂಡೋಗಳು ಹಾಗು ಅರೆ ಸೇನಾ ಪಡೆಗಳು ಅಯೋಧ್ಯೆಯಲ್ಲಿ ಬಿಡು ಬಿಟ್ಟಿವೆ . ಅಲ್ಲದೆ ಮುಂಜಾಗ್ರತಾ ಕ್ರಮವಾಗಿ ಕರ್ನಾಟಕ ರಾಜ್ಯದಾದ್ಯಂತ ರಜೆಯನ್ನು ಘೋಷಣೆ ಮಾಡಲಾಗಿದೆ
ಮೋದಿ ಟ್ವಿಟ್
ತೀರ್ಪು ಏನೇ ಬಂದರು ಶಾಂತಿ ಕಾಪಾಡಿ ಎಂದು ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ ಮಾಡುವ ಮೂಲಕ ದೇಶದ ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ
]