ಪ್ರೇಕ್ಷಕರ ಮನಸೂರೆಗೊಂಡ “ಗಿರ್ಮಿಟ್”
ಉಡುಪಿ -ಮಕ್ಕಳ ಅನೇಕ ಚಿತ್ರ ಬೆಳ್ಳಿ ತೆರೆಯ ಮೇಲೆ ಬಂದು ಪ್ರೇಕ್ಷಕರ ಮಚ್ಚುಗೆಯನ್ನ ಪಡೆದಿದೆ ಆದರೆ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಪ್ರಥಮವೆಂಬಂತೆ ಮಕ್ಕಳೇ ಪ್ರಧಾನವಾಗಿರುವ ಮಕ್ಕಳ ವಾಣಿಜ್ಯ ಚಿತ್ರ ಗಿರ್ಮಿಟ್ ಪ್ರೇಕ್ಷಕರ ಮನ ಸೂರೆ ಗೊಂಡಿದೆ .
ಮಾಸ್ , ಕಾಮಿಡಿ , ಪ್ರೇಮ್ ಕಹಾನಿಯನ್ನ ಬೆಳ್ಳಿತೆಯರೆಯ ಮೇಲೆ ಕಾಣುತ್ತಿದ್ದ ಚಿತ್ರಭಿಮಾನಿಗಳಿಗೆ ಗಿರ್ಮಿಟ್ ಹೊಸ ರುಚಿಯನ್ನ ನೀಡಿದೆ.
ಚಿತ್ರದ ಹೆಸರಿನ ಮೂಲಕ ಕುತೂಹಲ ಕೆರಳಿಸಿದ. ಗಿರ್ಮಿಟ್ ಮಕ್ಕಳ ಮೊದಲ ಕಮರ್ಷಿಯಲ್ ಚಿತ್ರವಾಗಿದೆ.ಶುಕ್ರವಾರ ನ. 8 ರಂದು ಬಿಗ್ ಸ್ಕ್ರೀನ್ ನಲ್ಲಿ ಕಾಣಿಸಿಕೊಂಡ ಈ ಚಿತ್ರಕ್ಕೆ ಪ್ರೇಕ್ಷಕರು ಬೆನ್ನು ತಟ್ಟಿದ್ದಾರೆ , ಹಾಡುಗಳು ಅದ್ಭುತವಾಗಿದ್ದು “ಧೂಮ್ ರಟ್ಟ” ಎಂಬ ಹಾಡನ್ನ ಪುನೀತ್ ರಾಜಕುಮಾರ್ ಹಾಡಿದ್ದು ಇದು ಸೋಶಿಯಲ್ ಮೀಡಿಯಾ ದಲ್ಲಿ ಸಕತ್ತ್ ಸೌಂಡ್ ಮಾಡಿದೆ. ಚಿತ್ರದ ಕಥೆಯು ವಿಭಿನ್ನವಾಗಿದ್ದು, ನಡು ನಡುವೆ ಬರುವ ಕುಂದಾಪುರ ಕನ್ನಡದ ಹಾಸ್ಯ ಪ್ರೇಕ್ಷಕರಿಗೆ ಕಚಗುಳಿ ಇಡುತ್ತದೆ. ಹಾಸ್ಯ , ಕಥೆ, ಫೈಟ್ ಹೀಗೆ ಎಲ್ಲವೂ ಸಮ ಪ್ರಮಾಣದಲ್ಲಿ ಗಿರ್ಮಿಟ್ ಪ್ರೇಕ್ಷಕರ ಪೈಸೆ ವಸೂಲ್ ಮಾಡಿ ಕೊಟ್ಟಿದ್ದೆ .
ಇದು ಸಂಗೀತ ನಿರ್ದೇಶಕ ರವಿ ಬಸ್ರೂರು ಮತ್ತು ತಂಡದ ಪ್ರಯತ್ನದ ಫಲವಾಗಿದ್ದು ಬಸ್ರೂರು ಅವರ ಶ್ರಮದ ನಾಲ್ಕನೇ ಚಿತ್ರವಾಗಿದೆ .ಟ್ರೈಲರ್ ಮೂಲಕ ಸದ್ದು ಮಾಡಿದ್ದ ಈ ಚಿತ್ರ ಬಿಡುಗಡೆಯಾದ ದಿನವೇ ಬರವಸೆಯನ್ನ ಮೂಡಿಸಿದೆ.
ಪಕ್ಕಾ ಮಾಸ್ ಸಿನಿಮಾದಂತೆ ಕಂಡು ಬಂದಿರುವ ಈ ಚಿತ್ರದಲ್ಲಿ ಮಕ್ಕಳ ಅಭಿನಯ ಮನೋಜ್ಞವಾಗಿದೆ. ಪ್ರಾರಂಭದಲ್ಲಿ ಮಕ್ಕಳ ಚಿತ್ರದಂತೆ ಕಂಡರೂ ಚಿತ್ರ ಸಾಗುತ್ತಿದ್ದಂತೆ ನುರಿತ ನಟರ ಅಭಿನಯದ ಚಿತ್ರ ನೋಡಿದಂತೆ ಆಗುವುದಂತೂ ಸತ್ಯ. ಯಶ್ , ರಾಧಿಕಾ ಪಂಡಿತ್, ಶಿವರಾಜ್ ಕೆ ಆರ್ ಪೇಟೆ ,ಸಾಧು ಕೋಕಿಲ , ರಂಗಾಯಣ ರಘು ಹೀಗೆ ಕನ್ನಡದ ಮೇರು ನಟರು ಈ ಮಕ್ಕಳಿಗೆ ಹಿನ್ನೆಲೆ ಧ್ವನಿ ನೀಡಿರುವುದು ಈ ಚಿತ್ರದ ವಿಶೇಷವಾಗಿದೆ. ಈ ಚಿತ್ರದ ವಿಶೇಷವೆಂದರೆ ಈ ಚಿತ್ರದಲ್ಲಿ ಮಕ್ಕಳೇ ನಾಯಕ, ನಾಯಕಿ, ಖಳ ನಾಯಕ, ಅಕ್ಕ ,ಅಜ್ಜಿ ಅಪ್ಪ ಅಮ್ಮ ಎಲ್ಲ ಇದು ಭಾರತೀಯ ಚಿತ್ರ ರಂಗದಲ್ಲಿಯೇ ಹೊಸ ಪ್ರಯತ್ನ. ನಾಯಕನ ವಿಸಿಲ್ ಚಪ್ಪಾಳೆ ಬೀಳುವ ಪಂಚಿಂಗ್ ಡೈಲಾಗ್ ಗಳು , ನವಿರಾದ ಪ್ರೇಮ, ಹೀರೊ ವಿಲನ್ ನ ಹೊಡೆದಾಟ ಎಲ್ಲವೂ ಈ ಸಿನಿಮಾದಲ್ಲಿ ಇದೆ. ಪುಟಾಣಿ ಮಕ್ಕಳು ದೊಡ್ಡವರ ಕಾಸ್ಟ್ಯೂಮ್ ನಲ್ಲಿ ಗಮನ ಸೆಳೆದಿದ್ದಾರ.
ಚಿತ್ರದಲ್ಲಿ ನಾಯಕನಾಗಿ ಉಡುಪಿಯ ಆಶ್ಲೇಷ್ ರಾಜ್ ನಟಿಸಿದರೆ , ನಾಯಕಿಯಾಗಿ ಶ್ಲಾಘ ಸಾಲಿಗ್ರಾಮ , ಹಾಗು ಚಿತ್ರದಲ್ಲಿ ಆರಾಧ್ಯ ಶೆಟ್ಟಿ, ತನಿಶಾ ಕೋನಿ, ಜಯೇಂದ್ರ, ನಾಗರಾಜ್ ಜಪ್ತಿ, ಆದಿತ್ಯ ಕುಂದಾಪುರ ಮತ್ತು ಸಿಂಚನಾ ಕೋಟೇಶ್ವರ ಮೊದಲಾದ ಕಲಾವಿದರು ಅಭಿನಯಿಸಿ ಗಮನ ಸೆಳೆದಿದ್ದಾರೆ.. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅರ್ಪಿಸುವ ಈ ಚಿತ್ರವು ಓಂಕಾರ್ ಮೂವೀಸ್ ಬ್ಯಾನರ್ ನಡಿ ನಿರ್ಮಾಣವಾಗಿದೆ. ಚಿತ್ರಕ್ಕೆ ಎನ್ ಎಸ್ ರಾಜ್ ಕುಮಾರ್ ಬಂಡವಾಳ ಹೂಡಿದ್ದಾರೆ. ಸೂರಜ್ ಚೌಧರಿ ಮತ್ತು ನರೇನ್ ಚಂದ್ರ ಚೌಧರಿಯು ಸಹ ನಿರ್ಮಾಪಕರಾಗಿದ್ದಾರೆ. ಪ್ರಮೋದ್ ಮರವಂತೆ, ಕಿನ್ನಲ್ ರಾಜ್, ಸಂದೀಪ್ ಶಿರಸಿ, ಸುಚನ್ ಶೆಟ್ಟಿ ಮತ್ತು ಮಂಜುನಾಥ್ ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಸಂಗೀತ ನಿರ್ದೇಶಕ ರವಿ ಹೊಸ ಪ್ರಯತ್ನಕ್ಕೆ ಅಭಿಮಾನಿ ದೇವರುಗಳು ಶಹಬಾಸ್ ನೀಡಿದ್ದಾರೆ. ಮಕ್ಕಳ ಅಭಿನಯವನ್ನ ನೋಡಿ ಮಂತ್ರಮುಗ್ದರಾಗಿದ್ದರೆ
ಚಿತ್ರವು ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ, ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ತೆರೆಯ ಮೇಲೆ ಬಂದಿದೆ.