ಉಡುಪಿ : ಬಿಜೆಪಿ ನಗರಸಭಾ ಸದಸ್ಯನಿಂದ ಆರೋಗ್ಯಾಧಿಕಾರಿ ಮೇಲೆ ಗೂಂಡಾಗಿರಿ
ಉಡುಪಿ ನಗರ ಸಭೆಗೆ ಅದರದೇ ಆದ ವಿಶೇಷತೆಯಿದೆ, ರಾಷ್ಟ್ರದಾದ್ಯಂತ ರಾಜಕೀಯ ಧುರೀಣರು ಉಡುಪಿಯನ್ನ ನೆನೆಯುತ್ತಾರೆ ಆದರೆ ಇತ್ತೀಚಿಗೆ ಗೂಂಡಾ ಸಂಸ್ಕ್ರತಿ ಯನ್ನು ಬೆಳಿಸಿ ಜಿಲ್ಲೆಗೆ ಮಸಿ ಬಳಿಯುವ ಪ್ರಯತ್ನ ಜನಪ್ರತಿನಿದಿಗಳಿಂದ ನಡೆಯುತ್ತಿದೆ. ಇದಕ್ಕೆ ಇನ್ನೊಂದು ಉದಾಹರಣೆಯೆಂದರೆ ಇತ್ತೀಚಿಗೆ ನೂತನವಾಗಿ ನಗರಸಭೆಗೆ ಆಯ್ಕೆಯಾದ ಸದಸ್ಯನಿಂದ ಇಂದು ಕರ್ತವ್ಯನಿರತ ಅಧಿಕಾರಿಯ ಮೇಲೆ ನಡೆದ ಹಲ್ಲೆ.
ನಗರ ಸಭೆಯ ವಡಬಾಂಡೇಶ್ವರ ವಾರ್ಡ್ ನಲ್ಲಿ ನಿನ್ನೆ ರಾತ್ರಿ ಮರ ಬಿದ್ದಿದು, ಅದನ್ನು ತೆರವು ಗೊಳಿಸುವಂತೆ ವಾರ್ಡ್ ನ ಬಿಜೆಪಿಯ ಸದಸ್ಯ ಯೋಗೀಶ್ ಸಾಲ್ಯಾನ್ ಆರೋಗ್ಯಾಧಿಕಾರಿ ಪ್ರಸನ್ನ ರವರಿಗೆ ಫೋನ್ ಮೂಲಕ ತಿಳಿಸಿದ್ದು ಆದರೆ ಇಂದು ಬೆಳಿಗಿನವರೆಗೆ ಅದನ್ನ ತೆರವುಗೊಳಿಸದ ಕಾರಣ ಇಂದು ಬೆಳಿಗ್ಗೆ ನಗರ ಸಭೆಯ ಪ್ರಸನ್ನ ರವರ ಕಚೇರಿಗೆ ನುಗ್ಗಿದ ಯೋಗೀಶ್ ಈ ವಿಚಾರದ ಬಗ್ಗೆ ತಗಾದೆ ತೆಗೆದು, ಏಕಏಕಿ ಮುಖಕ್ಕೆ ಪಂಚ್ ಮಾಡಿ ಹಲ್ಲೆ ಮಾಡಿದ್ದಾರೆ, ಇದರಿಂದ ಪ್ರಸನ್ನ ರವರ ಬಲ ಕಣ್ಣಿಗೆ ತೀವ್ರ ತರದ ಪೆಟ್ಟು ಬಿದ್ದಿದು , ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ .. ಆಸ್ಪತ್ರೆಗೆ ಬಿಜೆಪಿ ಹಾಗು ಕಾಂಗ್ರೆಸ್ ನಗರಸಭಾ ಸದಸ್ಯರು ಭೇಟಿ ಮಾಡಿ ಅರೋಗ್ಯ ವಿಚಾರಿಸಿದರು
Uncultured Corporation Member. Should be dismissed from the office and Party too.