ಹೊಂಡಾ ಅಕ್ಟೀವ ಕಳವು ಆರೋಪಿ ಅಶ್ರಫ್ ರಿಪವಾನ್ ಬಂಧನ
ಸುಳ್ಯ: ಕೆಎ21ಎಸ್2222 ನಂಬರ್ನ ಹೊಂಡಾ ಅಕ್ಟೀವ ಕಳವು ಆರೋಪಿ ಅಶ್ರಫ್ ರಿಪವಾನ್ (23)ನನ್ನು ಪೊಲೀಸರು ಬಂಧಿಸಿದ್ದಾರೆ. ಗಾಡಿ ಸಮೇತ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು. ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ಸುಳ್ಯ ಕಸ್ಬಾ ಗ್ರಾಮದ ವಿಷ್ಣು ಸರ್ಕಲ್ ಎಂಬಲ್ಲಿ ಆರೋಪಿ ಅಶ್ರಫ್ ರಿಪವಾನ್ ವಾಸವಿದ್ದು, ದಿನಾಂಕ 5-7-2019 ರಂದು ಮಾನ್ಯ ಪುತ್ತೂರು ಉಪ ಅಧೀಕ್ಷಕ ರವರ ನಿರ್ದೇಶನದಂತೆ ಮತ್ತು ಮಾನ್ಯ ಸಿಪಿಐ ಸುಳ್ಯ ರವರ ಮಾರ್ಗದರ್ಶನದಂತೆ ಪಿ.ಎಸ್. ಐ ಹರೀಶ್ ಎಂ.ಆರ್ ಸುಳ್ಯ ಅಪರಾಧ ವಿಭಾಗದ ಪಿ.ಎಸ್.ಐ ರತ್ನ ಕುಮಾರ್ ಹಾಗೂ ಸಿಬ್ಬಂದಿಗಳಾದ ಉದಯ ಕೆ, ಮಹೇಶ್ ಕುಮಾರ್, ಪುನೀತ್ ಕುಮಾರ್ ಆರೋಪಿಯನ್ನು ಬಂಧಿಸಿದ್ದಾರೆ. ಸುಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.