ನೀಲಾವರ ಗೋಶಾಲೆಗೆ ಹೊಸ ಅತಿಥಿ – ಪುಂಗನೂರು ತಳಿಯ ಗಂಡು ಕರು ಆಗಮನ
ಪೇಜಾವರ ಉಭಯ ಶ್ರೀಗಳ ನೇತೃತ್ವ ದಲ್ಲಿ 1800 ಕ್ಕೂ ಅಧಿಕ ಅನಾಥ ಹಸುಗಳ ಆಶ್ರಯಧಾಮವಾಗಿ ನಂದಗೋಕುಲ ಸದೃಶವಾಗಿ ನಡೆಸಲ್ಪಡುತ್ತಿರುವ ನೀಲಾವರ ಗೋಶಾಲೆಗೆ ಹೊಸ ಅತಿಥಿಯೊಂದರ ಪ್ರವೇಶವಾಗಿದೆ.
ಆಂಧ್ರಪ್ರದೇಶ ಮೂಲದ ಪುಂಗನೂರು ದೇಶೀ ತಳಿಯ ಅತ್ಯಂತ ಆಕರ್ಷಕವಾಗಿರುವ ಗಂಡು ಕರು ಇತ್ತೀಚೆಗೆ ಹೈದರಾಬಾದಿನಿಂದ ನೀಲಾವರ ಗೋಶಾಲೆಗೆ ಪ್ರಯಾಣಿಸಿ ಬಂದಿದೆ ( ಕರೆತರಲಾಗಿದೆ)
ಅತ್ಯಂತ ಗಿಡ್ಡ ಜಾತಿಯ ಪುಂಗನೂರು ಹಸುಗಳು ಮೂರು ಅಡಿಯಷ್ಟು ಮಾತ್ರ ಎತ್ತರ ಬೆಳೆಯುವ , ಚಿಕ್ಕ ಕೊಂಬುಗಳನ್ನು ಹೊಂದಿರುವ ವಿಶಿಷ್ಟ ಹಾಗೂ ಆಕರ್ಷಕ ತಳಿಯಾಗಿದ್ದು ಈಗ ಆಗಮಿಸಿರುವ ಕರುವು ಆರು ತಿಂಗಳ ಪ್ರಾಯದ್ದಾಗಿದೆ.
ಈಗಾಗಲೇ ಗೋಶಾಲೆಯಲ್ಲಿ ಅನೇಕ ದೇಶಿ ತಳಿಯ ಹಸು ಹಾಗೂ ಹೋರಿಗಳಿದ್ದು ಈಗ ಪುಂಗನೂರು ತಳಿಯ ಸೇರ್ಪಡೆಯಾದಂತಾಗಿದೆ.ಈ ಎಲ್ಲಾ ತಳಿಗಳ ನೈಸರ್ಗಿಕ ಸಂವರ್ಧನೆಯ ಬಗೆಗೂ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಆಶಯವನ್ನು ಹೊಂದಿದ್ದಾರೆ.