ಪ್ರವಾಸಕ್ಕೆ ಬಂದ ವಿದ್ಯಾರ್ಥಿ ಸಮುದ್ರ ಪಾಲು

ಮಲ್ಪೆ : ಪ್ರವಾಸಕ್ಕೆಂದು ಬಂದ ಚನ್ನಪಟ್ಟಣ ದ ಯುವಕನೊರ್ವ ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಘಟನೆ ಶನಿವಾರ ಮಲ್ಪೆಯಲ್ಲಿ ನಡೆದಿದೆ. ಮ್ರತ ಯುವಕ ಐಟಿಐ ವಿದ್ಯಾರ್ಥಿ ದೀಪಕ್ (19)ಎಂದು ತಿಳಿದು ಬಂದಿದೆ.

ಚನ್ನಪಟ್ಟಣದಿಂದ 13 ಜನ ತಂಡವೊಂದು ಮಡಿಕೇರಿಯಿಂದ ಮಲ್ಪೆಗೆ ಪ್ರವಾಸಕ್ಕೆಂದು ಬಂದಿದ್ದು ಇಂದು ಮಲ್ಪೆ ಕಡಲ ತೀರಕ್ಕೆ ಈಜಲೆಂದು ಸಮುದ್ರ ಕ್ಕೆ ಇಳಿದು ಎಲ್ಲರೂ ನೀರಿನಲ್ಲಿ ಮೋಜು ಮಾಡುತ್ತಿದ್ದರು, ಸಮುದ್ರ ಪ್ರಕ್ಷುಬ್ಧ ವಾಗಿದೆಂದು ಹೊಯ್ಸಳ ಪೊಲೀಸರು, ಲೈಫ್ ಗಾರ್ಡ್ ಸಿಬ್ಬಂದಿ ಗಳು ಎಷ್ಟೇ ಮನವಿ ಮಾಡಿದರೂ ಕೆಳದ ಪ್ರವಾಸಿಗರು ನೀರಿನಲ್ಲಿ ಈಜಾಡುತ್ತಿದ್ದರು.

ಸಂಜೆಯಾಗುತ್ತಿದ್ದಂತೆ ಈ ತಂಡದ ಸದಸ್ಯ ದೀಪಕ್ ಇವರೊಂದಿಗೆ ‌ಇಲ್ಲದಿರುವುದನ್ನು ನೋಡಿ ಲೈಫ್ ಗಾರ್ಡ್ ಹಾಗೂ ಪೊಲೀಸರಿಗೆ ಮಹಿತಿ ನೀಡಿದರು.
ಸಮುದ್ರ ಪ್ರಕ್ಷುಬ್ಧವಾಗಿದ್ದರಿಂದ ಮ್ರತ ದೇಹ‌ ಪತ್ತೆ‌ ಹಚ್ಚಲು ಸಾಧ್ಯವಿಲ್ಲವೆಂದು ಮಲ್ಪೆ ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!