ಪುದು ಪಂಚಾಯತ್ ಸದಸ್ಯನ ಕೊಲೆ ಯತ್ನ ಒಂಭತ್ತು ಆರೋಪಿಗಳ ಬಂಧನ
ಉಡುಪಿ : ಮಲ್ಪೆ ಬಂದರಿನ ಮರಿನಾ ಐಸ್ ಪ್ಲಾಂಟ್ ಎದುರು ಜೂನ್ 7ರಂದು ಮುಂಜಾನೆ 04:30 ಗಂಟೆಗೆ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಪುದು ಗ್ರಾಮ ಪಂಚಾಯತ್ ಸದಸ್ಯ ಕೊಲೆ ಯತ್ನ ಪ್ರಕರಣದಲ್ಲಿ ಭಾಗಿಯಾದ ಎಲ್ಲಾ ಆರೋಪಿಗಳನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.ಪರಂಗಿಪೇಟೆಯ ಮೀನು ವ್ಯಾಪಾರಿ ,ಪುದು ಗ್ರಾಮ ಪಂಚಾಯತ್ ಸದಸ್ಯ ಮಹಮ್ಮದ್ ರಿಯಾಜ್ನನ್ನು ಮಾರಕಾಸ್ತ್ರಗಳಿಂದ ತಲೆ, ಕತ್ತು, ಕೈ ಮತ್ತು ಕಾಲುಗಳಿಗೆ ಹಲ್ಲೆ ಮಾಡಿ ಕೊಲೆ ಮಾಡಲು ಪ್ರಯತ್ನಿಸಿದ ಒಂಬತ್ತು ಮಂದಿಯನ್ನು ಮಲ್ಪೆ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಇಸ್ಮಾಯಿಲ್ ನಿರ್ಮಿಸುತ್ತಿದ್ದ ಕಟ್ಟಡದ ನೀರಪೇಕ್ಷಣ ಪತ್ರ ನೀಡಲು ಪಂಚಾಯತ್ ಸದಸ್ಯನಾದ ರಿಯಾಜ್ ತಡೆವೊಡ್ಡುತ್ತಿದ್ದ ಕಾರಣಕ್ಕೆ ಮಾರ್ನಮಿನಕಟ್ಟೆ ತೌಸೀರ್ ಗೆರಿಯಾಜ್ ಹತ್ಯೆಗೆ ಸುಫಾರಿ ನೀಡಿದ್ದ.
ಈ ಪ್ರಕರಣದಲ್ಲಿ ಆರೋಪಿಗಳ ಮತ್ತು ವಾಹನದ ಪತ್ತೆ ಬಗ್ಗೆ ನಗರ ವೃತ್ತ ಹಾಗೂ ಡಿ.ಸಿ.ಐ.ಬಿ ಉಡುಪಿಯ ಅಧಿಕಾರಿ ಹಾಗೂ ಸಿಬ್ಬಂದಿಯವರ 2 ಪ್ರತ್ಯೇಕ ತಂಡಗಳನ್ನು ರಚಿಸಿದ್ದು ಈ ಎರಡು ತಂಡಗಳು ಹೆಚ್ಚುವರಿ ಪೊಲೀಸು ಅಧೀಕ್ಷಕರಾದ ಶ್ರೀ ಕುಮಾರಚಂದ್ರ ಕೆ.ಎಸ್.ಪಿ.ಎಸ್ ಮತ್ತು ಪೊಲೀಸು ಉಪಾಧೀಕ್ಷಕರು ಉಡುಪಿ ಉಪ ವಿಭಾಗ ಶ್ರೀ ಜೈ ಶಂಕರ್ ಟಿ.ಆರ್ರವರ ಮಾರ್ಗದರ್ಶನದಲ್ಲಿ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳಾದ ಪರಂಗಿಪೇಟೆಯ ಮಹಮ್ಮದ್ ಇಸ್ಮಾಯಿಲ್ (47 )ಮಹಮ್ಮದ್ ಗೌಸ್ (33 )ಒಳಚ್ಚಿಲ್ನ ಅಬ್ದುಲ್ ಕೈಸ್ (61 ) ಮಹಮ್ಮದ್ ಆಶೀಕ್ ಯಾನೆ ಕೋಚಿ, ( 22) ಮೊಂಟೆಪದವು ಮಹಮ್ಮದ್ ಮುನೀಜ್ (21 ) , ಮುಡಿಪುವಿನ ಅನ್ಸಾರ್ (22) ಮಾರ್ನಮಿ ಕಟ್ಟೆ ತೌಸೀರ್ ಯಾನೆ ಪತ್ತೊಂಜಿ, (25) ಅಡ್ಯಾರ್ ಮಹಮ್ಮದ್ ತೌಸಿಪ್ ಯಾನೆ ತಚ್ಚು (25 ), ಫರಂಗಿಪೇಟೆಮಹಮ್ಮದ್ ಮುಸ್ತಾಕ್ ಯಾನೆ ಮಿಸ್ತಾ ಯಾನೆ ಬಾಬಿ (23 ) ಇವರನ್ನು ಬಂಧಿಸಿದ ಪೊಲೀಸರು ಕೃತ್ಯಕ್ಕೆ ಬಳಸಿದ ಒಂದು ಲಾರಿ, ಒಂದು ಕಾರು ಹಾಗೂ 3 ತಲವಾರುಗಳನ್ನು ವಶಕ್ಕೆ ಪಡೆದಿದ್ದಾರೆ.
ಪ್ರಕರಣದಲ್ಲಿ ದಸ್ತಗಿರಿ ಮಾಡಿರುವ ಆರೋಪಿಗಳೆಲ್ಲರೂ ಮಂಗಳೂರು ಜಿಲ್ಲೆಯವರಾಗಿದ್ದು, ಆರೋಪಿಗಳ ಪೈಕಿ ಮೊಹಮ್ಮದ್ ತೌಸೀರ್ @ ಪತ್ತೊಂಜಿಯ ಮೇಲೆ ಬಂಟ್ವಾಳ ಗ್ರಾಮಾಂತರ, ಕಂಕನಾಡಿ ಪೊಲೀಸ್ ಠಾಣೆ, ಕದ್ರಿ ಪೊಲೀಸ್ ಠಾಣೆಗಳಲ್ಲಿ ಕೊಲೆಯತ್ನ, ಹಲ್ಲೆ ಮುಂತಾದ 5 ಪ್ರಕರಣಗಳು, ಆರೋಪಿ ಮಹಮ್ಮದ್ ತೌಸಿಪ್ ಯಾನೆ ತಚ್ಚುನ ಮೇಲೆ ಕದ್ರಿ ಪೊಲೀಸ್ ಠಾಣೆ, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ, ಪೂಂಜಾಲಕಟ್ಟೆ ಪೊಲೀಸ್ ಠಾಣೆ ಮತ್ತು ಮಂಗಳೂರು ಉರ್ವಾ ಪೊಲೀಸ್ ಠಾಣೆಗಳಲ್ಲಿ ಸುಲಿಗೆ, ದರೋಡೆ, ಕೊಲೆಯತ್ನ ಪ್ರಕರಣಗಳಲ್ಲಿ ಹಾಗೂ ಆರೋಪಿ ಮಹಮ್ಮದ್ ಮುಸ್ತಾಕ್ ಯಾನೆ ಮಿಸ್ತಾ ಯಾನೆ ಬಾಬಿ ಮೇಲೆ ಕೋಣಾಜೆ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿರುತ್ತದೆ. ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದು, ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ