ನಗರದ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಜಿಲ್ಲಾಧಿಕಾರಿಗೆ ಮನವಿ
ಉಡುಪಿ: ನಗರಸಭೆಯ ಕಾಂಗ್ರೆಸ್ ನ ಚುನಾಯಿತ ಜನಪ್ರತಿನಿಧಿಗಳು ಸೋಮವಾರ ನೂತನ ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿದರು .ಈ ಸಂದರ್ಭ ನಗರಸಭೆ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಉಂಟಾಗುತ್ತಿರುವ ಸಮಸ್ಯೆಯ ಬಗ್ಗೆ ಮನವಿ ನೀಡಿದರು .
ನಗರದಲ್ಲಿ ನೂತನ ಕಟ್ಟಡಗಳಿಗೆ ಆನ್ಲೈನ್ ತಂತ್ರಾಂಶದಲ್ಲಿ ಸಮಸ್ಯೆ ಯಿಂದಾಗಿ ಯಾವುದೇ ಹೊಸ ಕಟ್ಟಡಗಳಿಗೆ ಪರವಾನಿಗೆ ಇಲ್ಲದೆ ವಿದ್ಯುತ್ ಸಂಪರ್ಕಕ್ಕೆ ನಿರಾಪೇಕ್ಷಣ ಪತ್ರ ದೊರಕುವುದಿಲ್ಲ, ಮೂವತ್ತೈದು ವಾರ್ಡ್ನಲ್ಲಿ ದಾರಿದೀಪ ತೊಂದರೆ.ಮುಖ್ಯ ರಸ್ತೆ ಜಂಕ್ಷನ್ ಗಳಲ್ಲಿ ಡಿವೈಡರ್ ನಲ್ಲಿ ಹೈಮಾಸ್ಟ್ ದ್ವೀಪ ಉರಿಯದೆ ಇರುವುದು , ರಸ್ತೆ ಇಕ್ಕೆಲಗಳಲ್ಲಿ ಗಿಡಗಂಟೆ ಬೆಳೆದಿದ್ದು ಅದನ್ನು ಸ್ವಚ್ಛಗೊಳಿಸದೆ ಮುಂಬರುವ ಚೌತಿ ಹಬ್ಬಕ್ಕೆ ಸಿದ್ಧತೆಗೆ ಸಮಸ್ಯೆಯಾಗುವ ಬಗ್ಗೆ ,ಮುಖ್ಯ ರಸ್ತೆಯ ಒಳಚರಂಡಿ ವ್ಯವಸ್ಥೆ ಹದಗೆಟ್ಟು ಪಾದಚಾರಿಗಳಿಗೆ, ದ್ವಿಚಕ್ರ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ.
ಇದರಿಂದ ನಗರ ವ್ಯಾಪ್ತಿಯಲ್ಲಿ ಅನೇಕ ಸಾಂಕ್ರಾಮಿಕಗಳು ಹರಡುವ ಭೀತಿಯಲ್ಲಿದೆ .ಆದ್ದರಿಂದ ತಕ್ಷಣ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.ಈ ಸಂದರ್ಭ ನಗರಸಭೆ ಸದಸ್ಯರಾದ ರಮೇಶ್ ಕಾಂಚನ್, ಅಮೃತಾ ಕೃಷ್ಣಮೂರ್ತಿ, ವಿಜಯ ಪೂಜಾರಿ ,ಸೆಲಿನಾ ಕರ್ಕಡ , ಮಾಜಿ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಮಾಜಿ ಸದಸ್ಯರಾದ ಶಶಿರಾಜ್ ಕುಂದರ್ ,ಆರ್ ಕೆ ರಮೇಶ್, ಶಾಂತಾರಾಮ್ ಸಾಲ್ವಂಕರ್ , ಸಂಧ್ಯಾ ತಿಲಕ್ ರಾಜ್ ಉಪಸ್ಥಿತರಿದ್ದರು .