ಅಪ್ಪ… ನೀನೇ ನನ್ನ ಹೀರೋ
“ವಿಶ್ವ ತಂದೆಯರ ದಿನ ” ಹಿಂದೂ ಸಂಸ್ಕೃತಿಯಲ್ಲಿ ಪ್ರತಿನಿತ್ಯ ತಂದೆ ತಾಯಿಂದರ ದಿನವೇ, ಹೆತ್ತವರಿಗೆ ಗೌರವ ಸಲ್ಲಿಸುವುದೇ ನಮ್ಮ ಸಂಸ್ಕೃತಿ. ಇಂದೊಂದು ವಿದೇಶಿ ಆಚರಣೆಯಾಗಿದ್ದು, ಇಪ್ಪತ್ತನೆಯ ಶತಮಾನದ ಆರಂಭದಿಂದ ತಂದೆಯ ದಿನಾಚರಣೆ ಆಚರಿಸಲ್ಪಡುತ್ತಿದೆ. . ಆಧುನಿಕ ಕಾಲದ ಟ್ರೆಂಡ್ ಎಂಬಂತ್ತೆ ಒಂದೊಂದು ದಿನ ಒಂದೊಂದು ಆಚರಣೆಯನ್ನು ಮಾಡಲಾಗುತ್ತಿದೆ.
“ವಿಶ್ವ ತಂದೆಯರ ದಿನ ” ಜಗತ್ತಿನ 52 ರಾಷ್ಟ್ರಗಳಲ್ಲಿ, ಪ್ರತಿ ವರ್ಷದ ಜೂನ್ ತಿಂಗಳ ಮೂರನೆ ಭಾನುವಾರದಂದೂ ಆಚರಿಸುತ್ತಾರೆ. ಉಳಿದ ಕಡೆಗಳಲ್ಲಿ ಇನ್ನಿತರ ದಿನಗಳಂದೂ ತಂದೆಯ ದಿನಾಚರಣೆ ಎಂದು ಆಚರಿಸಲಾಗುತ್ತದೆ. ಈ ದಿನ ತಂದೆಗೆ ಗೌರವ ಸಲ್ಲಿಸಲು ಮೀಸಲಾಗಿದೆ.
ಎಲ್ಲರ ಜೀವನದಲ್ಲೂ ತಂದೆ ತಾಯಿ ಬಹಳ ಮುಖ್ಯ ಪಾತ್ರ ವಹಿಸುತ್ತಾರೆ, ಜೀವನದ ಮೊದಲ ಮಾರ್ಗದರ್ಶಕನೇ ಅಪ್ಪ.. ಅಪ್ಪ ಎನ್ನುವ ಈ ಎರಡಕ್ಷರದಲ್ಲಿ ಅದೇನೋ ಅತೀವ ಪ್ರೀತಿ. ಅಪ್ಪನೊಂದಿಗೆ ಹೆಚ್ಚು ಸಲುಗೆ ಇಲ್ಲದಿದ್ದರು,ಅಪ್ಪನೇ ಎಲ್ಲಾ.
ಮನುಷ್ಯ ಹುಟ್ಟಿದಾಗಿನಿಂದ ಸಾಯುವ ತನಕ ತನ್ನ ಜೀವನದ ಉದ್ದಕ್ಕು ಒಂದಲ್ಲ ಒಂದು ಸಂಬಂಧಕ್ಕೆ ಅಂಟಿಕೊಂಡೆ ಜೀವನ ಸಾಗಿಸುತ್ತಾನೆ. ಅಂತಹ ಸಂಬಂಧದಲ್ಲಿ ಹೆತ್ತವರ ನಂಟಿಗೆ ವಿಶೇಷ ಸ್ಥಾನ. ಅದೇ ಅಪ್ಪ ಅಮ್ಮ ಇಲ್ಲವೆಂದರೇ ಆ ಮಗು “ಅನಾಥ ಮಗು” ಜೀವನ ಇಷ್ಟೇ.
ಇತ್ತೀಚಿನ ದಿನಗಳಲ್ಲಿ ಬರಿಯ ಆಚರಣೆಯಾಗಿದ್ದು, ಆ ವಿಶೇಷ ದಿನದಂದು ಮಾತ್ರ ಪ್ರೀತಿ ಕಾಳಜಿ ಆಚರಣೆಗೆ ಸೀಮಿತವಾಗದೇ… ಜೀವನದ ಪ್ರತಿ ಕ್ಷಣದಲ್ಲೂ ಅಪ್ಪನ ಮೇಲಿನ ಪ್ರೀತಿ ಮಮತೆ ಕಡಿಮೆಯಾಗದಿರಲಿ.
ಆದ್ರೆ ಇತ್ತೀಚಿನ ದಿನಗಳ್ಲೂ ತಮ್ಮ ತಂದೆಯವರನ್ನೆ ರೋಲ್ ಮಾಡೆಲ್ ಆಗಿ ಅವರ ಹಾದಿಯನ್ನೇ ತುಳಿದರಿರುವ ಕೆಲ ಮಂದಿ ಇದ್ದಾರೆ ಅಂತಹ ಸಾಲಿನಲ್ಲಿ ಕರಾವಳಿ ಜನರಿಗೆ ಮಾದರಿಯಾಗಿರುವವರ ಮಾಹಿತಿ ಮುಂದೆ ಓದಿ
ರೋಲ್ ಮಾಡೆಲ್ ಆದ ಅಪ್ಪ
ಮಾಂಡವಿ ಹೆಸರನ್ನು ಕೇಳದವರು ಯಾರು ಇಲ್ಲ ಎಂದರೆ ಅತೀಶಯೋಕ್ತಿಯಲ್ಲ ಸಾವಿರಾರು ಕುಂಟುಂಬಗಳಿಗೆ ಉಡುಪಿಯನ್ನ ಪರಿಚಯಿಸಿದವರು ಮಾಂಡವಿ ಮಾಲಿಕರಾದ ಜೆರಿ ಡಾಯಸ್. ಉಡುಪಿಯಲ್ಲಿ ಸುಮಾರು 50 ಕ್ಕೂ ಹೆಚ್ಚು ವಸತಿ ಸಮುಚ್ಚಯವನ್ನ ಹೊಂದಿರುವವರು.
18 ವರ್ಷಗಳ ಕಾಲ ಸೌದಿಯಲ್ಲಿದ್ದು ನಂತರ ತನ್ನ ಊರಿನಲ್ಲಿ ತನ್ನದೆ ಆದ ಸ್ವಂತ ಉದ್ಯಮವನ್ನ ಹೊಂದಬೇಕು ಎಂಬ ಅದಮ್ಯ ಆಸೆಯಿಂದ ತನ್ನ ತಾಯಿನಾಡಿಗೆ ಮರಳಿ ತನ್ನ ಕನಸನ್ನ ನನಸು ಮಾಡಿಕೊಂಡವರು.. ಇವರಿಗೆ ಸಾಥ್ ನೀಡುತ್ತಿರುವವರು ಇವರ ಮಕ್ಕಳಾದ ಗ್ಲೆನ್ ಡಾಯಸ್ , ಜೇಸನ್ ಡಾಯಸ್ ತಮ್ಮ ತಂದೆಯ ಹೆಜ್ಜೆ ಯನ್ನು ಅನುಸರಿಸುತ್ತ ಹೆಗಲಿಗೆ ಹೆಗಲು ನೀಡಿದ್ದಾರೆ ಹಾಗು ಮಗಳಾದ ಲಾರಾ ಡಾಯಸ್ ವೃತ್ತಿಯಲ್ಲಿ ವೈದ್ಯೆಯಾದರು ಪ್ರಸ್ತುತ ತನ್ನ ತಂದೆಯ ಉದ್ಯಮದಲ್ಲಿ ಪಾಲುದಾರರು.. ಪ್ರಸ್ತುತ ಜೆರಿ ಡಾಯಸ್ ರವರು ಉಡುಪಿಯ ಬಿಲ್ಡರ್ಸ್ ಆಸೋಸಿಯೇಷನ್ನ ಉಡುಪಿಯ ಅಧ್ಯಕ್ಷರು .
ಆನೇಕ ಜನ ಕಾರ್ಮಿಕರಿಗೆ ಆಶ್ರಯದಾತರು , ಆನೇಕ ಬಡ ಕುಟುಂಬಗಳಿಗೆ ಉಚಿತವಾಗಿ ಮನೆಗಳನ್ನ ನಿರ್ಮಿಸಿ ಕೊಟ್ಟವರು ಇವರು… ತಮ್ಮ ತಂದೆಯ ಮಾರ್ಗದರ್ಶನದಲ್ಲಿ ಬೆಳೆಯುತ್ತಿರುವ ಇವರ ಮಕ್ಕಳಿಗೆ ಜೆರಿ ಡಾಯಸ್ ರವರು ರೋಲ್ ಮಾಡೆಲ್….
ಅಪ್ಪನೇ ಹೀರೋ ಆದರು
ಹೋಟೆಲ್ ಉದ್ಯಮ ಎನ್ನುವುದು ಒಂದು ಚಾಲೆಂಜ್. ಅನೇಕ ಸಮಸ್ಯೆಗಳ ನಡುವೆ ಈ ಉದ್ಯಮವನ್ನ ಉಳಿಸಿ ಬೆಳೆಸುವುದು ಒಂದು ಸವಾಲಾಗಿ ಉಳಿದಿದೆ.. ಪಡುಬಿದ್ರೆಯಲ್ಲಿ ನವರಂಗ್ ಪ್ಯಾಮಿಲಿ ರೆಸ್ಟೋರೆಂಟ್ ಪ್ರಾರಂಭಿಸಿ ಅದು ಪಡುಬಿದ್ರೆ ಜನರ ಮನೆ ಮಾತಗುವಂತೆ ಮಾಡಿದವರೇ ವೈ ಸುಕುಮಾರ್, ಜನಪ್ರಿಯ ರಾಜಕಾರಣಿಯೂ. ಜೆಸಿಐ ಎಂಬ ಸಂಸ್ಥೆಯಲ್ಲಿ ಉನ್ನತ ಹುದ್ದೆಯನ್ನ ಅಲಂಕರಿಸಿದವರು ಸಾಮಾಜಿಕ ಕಾರ್ಯದಲ್ಲೂ ತಮ್ಮನ ತಾವು ತೊಡಗಿಸಿಕೊಂಡವರು.
ಪಡುಬಿದ್ರೆ ಪಂಚಾಯತ್ನ ಉಪಾಧ್ಯಕ್ಷರು ತಮ್ಮ ಬಿಡುವಿಲ್ಲದ ಕೆಲಸಗಳ ನಡುವೆ ತಮ್ಮ ಮಗನ ಜೊತೆಗಾರಿಕೆ ಕೆಲಸಗಳನ್ನ ನಿರಾಳಾಗಿಸಿದೆ. ಆನೇಕ ವರ್ಷಗಳಿಂದ ತನ್ನ ತಂದೆಯ ಹಾದಿಯನ್ನ ತುಳಿದ ಅವರ ಮಗ ಸಂಜಿತ್ ಎರ್ಮಾಳ್ ನಿಟ್ಟೆಯಲ್ಲಿ ಇಂಜಿನಿಯರಿಂಗ್ ಕಲಿತ ಪ್ರತಿಬಾನ್ವಿತ ವಿದ್ಯಾರ್ಥಿ..ತನ್ನ ವಿದ್ಯಾಬ್ಯಾಸದ ನಂತರ ತನ್ನ ತಂದೆಯ ವೃತ್ತಿ ಬದುಕನ್ನೆ ಅಯ್ಕೆ ಮಾಡಿಕೊಂಡು ಮುದುವರೆಯುತ್ತಿರುವ ಸಂಜಿತ್ ಇವನಿಗಂತೂ ಇವನ ತಂದೆಯೆ ಹೀರೋ.
ಕೃಷಿಕನಾಗಲು ತಂದೆಯೇ ಪ್ರೇರಣೆ
ಮಕ್ಕಳು ಬೆಳೆದರೆ ಸಾಕು ಅವರನ್ನ ಡಾಕ್ಟರೋ ಎಂಜಿನಿಯರ್ ಮಾಡಬೇಕು ಎನ್ನುವ ತಂದೆತಾಯಿಗಳೇ ಹೆಚ್ಚಾಗಿ ಇರುವ ಸಂದರ್ಭದಲ್ಲಿ ಇಲ್ಲೊಂದು ಕುಟುಂಬ ಅದಕ್ಕೆ ವ್ಯತಿರಿಕ್ತವಾಗಿದೆ. ಸುಮಾರು 50 ವರ್ಷದಿಂದ ಭೂಮಿ ತಾಯಿಯನ್ನ ನಂಬಿಕೊಂಡು ಬಂದಿರೋದು ಪೆರ್ನಾಂಡಿಸ್ ಕುಟುಂಬ.. ಕೃಷಿ ಹಿನ್ನೆಲೆಯಲ್ಲಿಯೆ ಬದುಕು ಸಾಗಿಸುತ್ತಿದ್ದ ಇವರ ಸಂಸಾರದ ನೊಗವನ್ನ ರಾಬರ್ಟ್ ಪೆರ್ನಾಂಡಿಸ್ ಎಳೆಯುತ್ತಿದ್ದರು.
ಕೊನೆಯ ಮಗನಾದ ರೊಯ್ಸ್ ಮರ್ವಿನ್ ಫೆರ್ನಾಂಡಿಸ್ ಬೆಂಗಳೂರಿನಲ್ಲಿ ಸ್ವಂತ ಉದ್ಯಮವನ್ನ ನಡೆಸುತ್ತಿದ್ದು ತಾಯಿಯ ಅಗಲುವಿಕೆಯ ನಂತರ ತನ್ನ ಊರಿಗೆ ಮರಳಿ ಕೃಷಿ ಭೂಮಿಯಲ್ಲಿ ತರಹ ತರಹದ ಹಣ್ಣು ತರಕಾರಿಗಳನ್ನ ಬೆಳೆಸಿ ಅದರ ಜೊತೆಗೆ ಹೈನುಗಾರಿಕೆಯನ್ನು ಮಾಡಿ ತಮ್ಮ ಕೃಷಿಗೆ ಸಾವಯವ ಗೊಬ್ಬರವನ್ನ ಬಳಸುತ್ತಿದ್ದಾರೆ… ತನ್ನ ತಂದೆಯೊಂದಿಗೆ ಈಗ ಮಗನು ಒಬ್ಬ ಪ್ರಗತಿಪರ ಕೃಷಿಕರ ಸಾಲಿಗೆ ಸೇರಿದ್ದಾರೆ.
ಹೀಗೆ ತಮ್ಮ ತಂದೆಯನ್ನು ನಾಯಕರನಾಗಿ ತಮ್ಮ ಜೀವನದಲ್ಲಿ ಕಾಣುತ್ತಿರುವನ ಇವರುಗಳು ತಮ್ಮ ತಂದೆಯ ತೋರಿಸಿಕೊಟ್ಟ ದಾರಿಯಲಿ ಸಾಗುತ್ತಿದ್ದಾರೆ ಇವರಿಗೆ ಯಶಸ್ಸು ಸಿಗಲಿ ಎಂಬುದೆ ನಮ್ಮ ಹಾರೈಕೆ