ಫೋಕಸ್ ರಾಘು ಕಿರೀಟಕ್ಕೆ ಮತ್ತೊಂದು ಗರಿ

ಉಡುಪಿ- ಫೋಟೊಗ್ರಫಿ ವಲಯದಲ್ಲಿ ಪ್ರಾನ್ಸಿನ ಪ್ರತಿಷ್ಠಿತ ಅಂತರರಾಷ್ಟ್ರೀಯ [Federation Internationale de l’ Art Photographique ಫೋಟೊಗ್ರಫಿ ಸಂಸ್ಥೆಯಿಂದ AFIAP Distinction ಎಂಬ ಗೌರವ ಉಡುಪಿಯ ಫೋಕಸ್ ರಾಘುರವರಿಗೆ ಒಲಿದಿದೆ

ವೃತ್ತಿಪರ ಛಾಯಾಗ್ರಾಹಕ, 19 ವರ್ಷಗಳಿಂದ ತನ್ನ ಹವ್ಯಾಸವಾಗಿ ಪಿಕ್ಟೋರಿಯಲ್, ವನ್ಯಜೀವಿ, ಟ್ರಾವಲ್ ಮತ್ತು ಸ್ಟ್ರೀಟ್ ಛಾಯಾಗ್ರಾಹಣವನ್ನು ಮಾಡುತ್ತಿರುವ ಇವರು , 15ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಪ್ರಶಸ್ತಿಗಳು ಮತ್ತು 50 ಕ್ಕೂ ಹೆಚ್ಚು ರಾಷ್ಟ್ರ ಮತ್ತು ರಾಜ್ಯಮಟ್ಟದ ಪ್ರಶಸ್ತಿಗಳನ್ನು ಗಳಿಸಿರುವ ಇವರು ,ಮೂರು ಸಲ ಉಡುಪಿ ಮತ್ತು ಮಣಿಪಾಲದಲ್ಲಿ ರಾಜ್ಯ ಮಟ್ಟದಲ್ಲಿ ಇವರ ಛಾಯಾಚಿತ್ರಗಳ ಪ್ರದರ್ಶನವನ್ನು ಏರ್ಪಡಿಸಿ ಛಾಯಾಸಕ್ತರ ಮೆಚ್ಚುಗೆಯನ್ನು ಗಳಿಸಿದ್ದಾರೆ . ವಿಶ್ವ ಫೋಟೊಗ್ರಫಿ ವಲಯದಲ್ಲಿ ಪ್ರಾನ್ಸಿನ ಪ್ರತಿಷ್ಠಿತ ಅಂತರರಾಷ್ಟ್ರೀಯ [Federation Internationale de l’ Art Photographique ಫೋಟೊಗ್ರಫಿ ಸಂಸ್ಥೆಯಿಂದ AFIAP Distinction [Artist Federation Internationale de l’ Art Photographique ] ಗೌರವವನ್ನು ಇವರ ಪಾಲಿಗೆ ಒಲಿದು ಬಂದಿದೆ . ಈ ಗೌರವದ ಹಿನ್ನೆಲೆಯಲ್ಲಿ ಇವರ ಕಲಾತ್ಮಕ ಛಾಯಾಚಿತ್ರಗಳು ಭಾರತ, ಸಿಂಗಪುರ್, ಪ್ರಾನ್ಸ್, ಇಂಗ್ಲೇಂಡ್, ಅಮೇರಿಕ, ಶ್ರೀಲಂಕಾ,ಗ್ರೀಕ್ ,ಕೆನಡಾ ,ಚೀನಾ ಮುಂತಾದ ದೇಶಗಳ ಛಾಯಾಚಿತ್ರ ಸ್ಪರ್ಧೆಗಳಲ್ಲಿ ಆಯ್ಕೆಯಾಗಿದ್ದು ಪ್ರದರ್ಶನಗೊಂಡಿವೆ. ಕಲಾತ್ಮಕ ಪಿಕ್ಟೋರಿಯಲ್ ಛಾಯಾಗ್ರಾಹಣ ವಿಭಾಗದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಆಯ್ದ ಛಾಯಾಗ್ರಾಹಕರ ಸಾಧನೆ ಪರಿಗಣಿಸಿ ಈ ಪ್ರತಿಷ್ಠಿತ ಗೌರವವನ್ನು ನೀಡಲಾಗುತ್ತದೆ. ಕರಾವಳಿ ಭಾಗದಲ್ಲಿ ಈ AFIAP Distinction ಪಡೆದ ಮೂರನೇ ಛಾಯಾಗ್ರಾಹಕ ಇವರಾಗಿದ್ದಾರೆ.

ಇವರ ಕ್ರಿಯಾಶೀಲತೆಯನ್ನು ಪರಿಗಣಿಸಿ ಪ್ರತಿಷ್ಠಿತ ನಿಕೋನ್ ಕ್ಯಾಮೆರಾ ಕಂಪೆನಿಯು ಇವರನ್ನು ಕರ್ನಾಟಕ ರಾಜ್ಯಕ್ಕೆ nikon  influencer  ಆಗಿ ನೇಮಕ ಮಾಡಿ ಹಳ್ಳಿ ಪ್ರತಿಭೆಯ ಪರಿಶ್ರಮಕ್ಕೆ ದೊಡ್ಡ ಗೌರವವನ್ನು ನೀಡಿದೆ..ಇವರು ಖ್ಯಾತ ಛಾಯಾಗ್ರಾಹಕ ಗುರುದತ್ ಕಾಮತ್ ಅವರ ಶಿಷ್ಯರಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!