ಸರಕಾರಿ ನೌಕರರ ಸಂಘದ ವಾರ್ಷಿಕ ಮಹಾಸಭೆ
ಬಂಟ್ವಾಳ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಬಂಟ್ವಾಳ ತಾಲೂಕು ಶಾಖೆಯ ವತಿಯಿಂದ ನಿವೃತ್ತ ಸರಕಾರಿ ನೌಕರರಿಗೆ ಮತ್ತು ಸಾಧಕರಿಗೆ ಅಭಿನಂದನಾ ಸಮಾರಂಭ ಹಾಗೂ ಸರಕಾರಿ ನೌಕರರಿಗೆ ಕಾನೂನು ಮಾಹಿತಿ ಕಾರ್ಯಾಗಾರವನ್ನೊಳೊಗೊಂಡ ,2018-19 ನೇ ಸಾಲಿನ ವಾರ್ಷಿಕ ಮಹಾಸಭೆಯು ಬಿ.ಸಿ.ರೋಡಿನ ಸರಕಾರಿ ನೌಕರರ ಸಭಾಭವನದಲ್ಲಿ ಶನಿವಾರ ನಡೆಯಿತು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ರಾಜಕಾರಣಿಗಳಿಗಿಂತ ಹೆಚ್ಚಿನ ಜವಾಬ್ದಾರಿ ಸರಕಾರಿ ನೌಕರರ ಮೇಲಿದೆ. ಅಧಿಕಾರಿಗಳು ಸರಕಾರಿ ಸೇವೆ ದೇವರ ಸೇವೆಯೆಂದು ಅರಿತುಕೊಂಡು ಕಾನೂನಿ ಚೌಕಟ್ಟಿನೊಳಗೆ ಮಾನವೀಯತೆಯನ್ನು ಬೆಳೆಸಿಕೊಂಡಾಗ ಉತ್ತಮ, ಪ್ರಮಾಣಿಕ ಸೇವೆ ನೀಡಲು ಸಾಧ್ಯ ಎಂದರು.ಅತಿಥಿಯಾಗಿದ್ದ ತಹಶೀಲ್ದಾರ್ ರಶ್ಮಿ. ಎಸ್.ಅರ್.ಮಾತನಾಡಿ ಸಂಘಟನೆಯಿಂದ ಮಾತ್ರ ಯಶಸ್ಸು ಗಳಿಸಲು ಸಾಧ್ಯ ಎಂದರು .
ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ ಅವರು ಶುಭಾಶಂಸನೆಗೈದರು.
ತಾಪಂ ಉಪಾಧ್ಯಕ್ಷ ಅಬ್ಬಾಸ್ ಆಲಿ, ಕ್ಷೇತ್ರ ಶಿಕ್ಷಣಾಧಿಕಾರಿ ಜ್ಙಾನೇಶ್,ಬಂಟ್ವಾಳ ತಾ.ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ್ ಮಾಂಬಾಡಿ,ಬಂಟ್ವಾಳ ತಾಲೂಕು ಸಮುದಾಯ ಆರೋಗ್ಯ ಕೇಂದ್ರದ ವೈದ್ಯರಾದ ಸುರೇಂದ್ರ ನಾಯಕ್,ಬಂಟ್ವಾಳ ತಾಲೂಕು ಪಿಂಚಣಿದಾರರ ಸಂಘದ ಅಧ್ಯಕ್ಷ ಲೋಕನಾಥ ಶೆಟ್ಟಿ, ಶಿಕ್ಷಣ ಸಂಪನ್ಮೂಲದ ಸಮನ್ವಯಾಧಿಕಾರಿ ರಾಧಾಕೃಷ್ಣ ಭಟ್ ಅವರು ಅತಿಥಿಯಾಗಿ ಭಾಗವಹಿಸಿದ್ದರು. ಸಂಘದ ಉಪಾಧ್ಯಕ್ಷರಾದ ಹೇಮಂತ್ ಕುಮಾರ್,ಮಂಜುನಾಥ್ ಕೆ.ಎಚ್,.ಗಾಯತ್ರಿ ರವೀಂದ್ರ ಕಂಬಳಿ,ಖಜಾಂಚಿ ಬಸಯ್ಯ ಅಲೆಮಟ್ಟಿ,ರಾಜ್ಯ ಪರಿಷತ್ ಸದಸ್ಯ ಜೆ.ಜನಾರ್ದನ ವೇದಿಕೆಯಲ್ಲಿದ್ದರು.
ಇದೇವೇಳೆ ನಿವೃತ್ತ ಸರಕಾರಿ ನೌಕರರನ್ನು,ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ವೈದ್ಯಾಧಿಕಾರಿ ಸುರೇಂದ್ರ ನಾಯಕ್ ಹಾಗೂ ರಾಮಕೃಷ್ಣ ಪುತ್ತರಾಯ ಅವರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಉಮಾನಾಥ ರೈ ಮೇರಾವು ಸಭಾಧ್ಯಕ್ಷತೆ ವಹಿಸಿದ್ದರು ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್ ವಂದಿಸಿದರು. ಜಯರಾಮ್ ನಿರ್ವಹಿಸಿದರು. ಇದಕ್ಕು ಮೊದಲು ಪ್ರವೀಣ್ ಬೆಳ್ತಂಗಡಿಯವರು ಸರಕಾರಿ ನೌಕರರಿಗೆ ಕಾನೂನಿನ ಮಾಹಿತಿ ನೀಡಿದರು.