ಆಂಧ್ರ ಟೊಮೆಟೊ ರಸಂ
ಟೊಮೊಟೊ ಇಂದ ವಿವಿಧ ರೀತಿಯ ಅಡುಗೆಗಳನ್ನು ತಯಾರಿಸುತ್ತೇವೆ ಹಾಗೆಯೆ ಟೊಮೊಟೊ ರಸಂ ನಮ್ಮ ಮಂಗಳೂರು ಹಾಗು ಉಡುಪಿಯಲ್ಲಿ ತುಂಬಾ ಪ್ರಸಿದ್ದಿ . ಹಾಗೆಯೆ ಆಂಧ್ರದಲ್ಲೂ ಈ ಟೊಮೊಟೊ ರಸಂ ಮಾಡುವ ವಿಧಾನ ಅತ್ಯಂತ ಸುಲಭವಾಗಿದ್ದುಅದರ ರುಚಿ ಕೂಡ ಅದ್ಬುತ ವಾಗಿರುತ್ತದೆ. ‘
ಆಂಧ್ರ ಟೊಮೆಟೊ ರಸಂ
ಬೇಕಾಗಿರುವ ಸಾಮಗ್ರಿಗಳು:
ಟೊಮಾಟೊ- 2 -3
ಜಜ್ಜಿದ ಬೆಳ್ಳುಳ್ಳಿ- 5 – 6
ಜೀರಿಗೆ-1 /2 ಚಮಚ
ಕಾಳು ಮೆಣಸು- 1 /2 ಚಮಚ
ಹುಣಸೆ ಹಣ್ಣಿನ ರಸ
ಒಗ್ಗರಣೆಗೆ- ಉದ್ದಿನ ಬೇಳೆ, ಸಾಸಿವೆ, ಕರಿಬೇವು, ಒಣಮೆಣಸು
ಮಾಡುವ ವಿಧಾನ–
ಒಂದು ಪಾನ್ ಗೆ ಎಣ್ಣೆ ಹಾಕಿ ಬಿಸಿ ಮಾಡಿ ಇದ್ದರಲ್ಲಿ ಒಗ್ಗರಣೆ ಮಾಡಿ ಇದಕ್ಕೆ ಜಜ್ಜಿದ ಬೆಳ್ಳುಳ್ಳಿ. ಕಟ್ ಮಾಡಿದ ಟೊಮಾಟೊ ಹಾಕಿ ಹುರಿದುಕೊಳ್ಳಿ.ಬೇಕಿದ್ದಲ್ಲಿ ಖಾರಕ್ಕೆ ಹಸಿ ಮೆಣಸು ಸೇರಿಸಬಹುದು. ನೀರು,ಉಪ್ಪು, ಬೆಲ್ಲ ಹಾಕಿ ಚೆನ್ನಾಗಿ ಕುದಿಸಿ ನಂತರ ಇಂಗಿನ ಒಗ್ಗರಣೆ ಕೊತ್ತಂಬರಿ ಸೊಪ್ಪು ಸೇರಿಸದರೆ ಘಮ ಘಮಿಸುವ ಅಂದ್ರ ರಸಂ ರೆಡಿ.
ಪವಿತ್ರ ರಾವ್
ಬ್ರಹ್ಮಾವರ