ಲಿಂಗ ಪೂಜೆ ಮಾಡುವವರೆಲ್ಲ ಹಿಂದೂಗಳು- ಪೇಜಾವರ ಶ್ರೀ
ಉಡುಪಿ: ರಾಜ್ಯದಲ್ಲಿ ವೀರಶೈವ- ಲಿಂಗಾಯತ ಚರ್ಚೆ ಹಿನ್ನೆಲೆ, ಲಿಂಗಾಯತರು ವೀರಶೈವರು ಬೇರೆ ಬೇರೆ ಅಲ್ಲ ಇಬ್ಬರೂ ಕೂಡ ಹಿಂದೂ ಧರ್ಮಕ್ಕೆ ಸೇರಿದವರು. ಅಣ್ಣ ತಮ್ಮಂದಿರನ್ನು ಒಟ್ಟಾಗಿ ಕೊಂಡೊಯ್ಯುವುದು ತಪ್ಪಾ? ವೀರಶೈವ ಲಿಂಗಾಯತರು ಒಟ್ಟಾದರೆ ಹೆಚ್ಚು ಶಕ್ತಿ ಬರುತ್ತದೆ.
ಹಿಂದೂ ಧರ್ಮದ ಹಿತದೃಷ್ಟಿಯಿಂದ ಒಂದಾಗಬೇಕು. 1956 ರ ನಂತರ ವೈಷ್ಣವ ಲಿಂಗಾಯತ ಅನ್ಯೋನ್ಯತೆಯಿದೆ. ಲಿಂಗಾಯತ ಹಿಂದೂ ಧರ್ಮ ಬೇರೆ ಅಲ್ಲ. ಎಲ್ಲರೂ ನಮ್ಮದು ಬೇರೆ ಬೇರೆ ಧರ್ಮ ಅಂದ್ರೆ ಹಿಂದೂಗಳು ಯಾರು? ಶಿವನನ್ನು ಒಪ್ಪುವವರೆಲ್ಲ, ಲಿಂಗ ಪೂಜೆ ಮಾಡುವವರೆಲ್ಲ ಹಿಂದೂಗಳು ಎಂದು ಪೇಜಾವರ ಶ್ರೀಗಳು ಉಡುಪಿಯಲ್ಲಿ ಹೇಳಿಕೆ ನೀಡಿದ್ದಾರೆ.
ಚರ್ಚೆಗೆ ಸಿದ್ಧ ಪೇಜಾವರ ಶ್ರೀ
ವೀರಶೈವ ಲಿಂಗಾಯತ ಧರ್ಮವು ಹಿಂದೂ ಧರ್ಮದಿಂದ ಪ್ರತ್ಯೇಕವಲ್ಲ ಎಂಬ ವಿಚಾರ ಕುರಿತು ಎರಡೂ ಕಡೆಯ ಮಠಾಧಿಪತಿಗಳ ಜೊತೆ ಈ ಬಗ್ಗೆ ಚರ್ಚೆಗೆ ಸಿದ್ಧ.
ಸ್ನೇಹ ಸಂವಾದ ಮಾಡಲು ನಾನು ತಯಾರಾಗಿದ್ದೇನೆ. ಸಂವಾದವು ಶಾಂತ ವಾತಾವರಣದಲ್ಲಿ ಸೌಹಾರ್ದದಿಂದ ನಡೆಯಬೇಕು. ಬೆಂಗಳೂರಿನಲ್ಲಿ ನಮ್ಮ ಆಶ್ರಮ ವಾದ ಪೂರ್ಣಪ್ರಜ್ಞ ವಿದ್ಯಾಪೀಠಲ್ಲಾಗಲೀ ಅಥವಾ ಬೇರೆ ಜಾಗದಲ್ಲಾಗಲೀ ಜುಲೈ 28 ರೊಳಗೆ ಇಬ್ಬರಿಗೂ ಅನುಕೂಲದ ದಿನದಲ್ಲಿ ಈ ಸಂವಾದವನ್ನು ಮಾಡಬಹುದು.
ಜುಲೈ 28 ರ ನಂತರವಾದರೆ ನಾವು ಮೈ ಸೂರಿನಲ್ಲಿ ಚಾತುರ್ಮಾಸ್ಯ ವ್ರತವನ್ನು ಕೈಗೊಳ್ಳುವುದರಿಂದ ಅಲ್ಲಿಯೇ ಏರ್ಪಾಡು ಮಾಡಬುದು. ಪತ್ರಿಕಾಗೋಷ್ಠಿಯ ಮೂಲಕ ಎಲ್ಲರಿಗೂ ಆಹ್ವಾನ ಕೊಡುತ್ತೇನೆ. ಸಂವಾದದಲ್ಲಿ ಆಕ್ರೋಶ, ವಿರುದ್ಧ ಘೋಷಣೆಗೆ ಅವಕಾಶ ಇರಬಾರದು. ಶಾಂತ ವಾತಾವರಣದಲ್ಲಿ ಮುಕ್ತ ಮನಸ್ಸಿನಿಂದ ಚರ್ಚೆ ಮಾಡೋಣ ಎಂದು ಪೇಜಾವರ ಶ್ರೀಗಳು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.