ಉಡುಪಿ ಜಿಲ್ಲಾಸ್ಪತ್ರೆಯ ನೀರಿನಲ್ಲಿ ಅಲ್ಕೋಹಾಲ್ ಪತ್ತೆ, ಬದುಕಿದ ನೂರಾರು ಕಂದಮ್ಮಗಳು!
ಉಡುಪಿ: ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ,ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಉಡುಪಿ ಇಲ್ಲಿಗೆ ವೈದ್ಯಕೀಯಾ ಪರೀಕ್ಷೆಗಾಗಿ ಸರಬರಾಜಾದ ನೀರಿನಲ್ಲಿ ಅಲ್ಕೋಹಾಲ್ ಪತ್ತೆ! ಆಸ್ಪತ್ರೆ ಹೆಸರು ಕೆಡಿಸಲು ದುರ್ಷ್ಕಮಿಗಳ ಸಂಚು. ಸಿಬ್ಬಂದಿಗಳ ಸಕಾಲಿಕ ಎಚ್ಚರಿಕೆಯಿಂದ ತಪ್ಪಿದ ನೂರಾರು ತಾಯಿ ಮಕ್ಕಳ ಜೀವಗಳು.
ಕಳೆದ ಮೇ ತಿಂಗಳ 13 ರಂದು ಆಸ್ಪತ್ರೆಗೆ ಅಜಿತ್ ಎಂಬವರು 6 ಕ್ಯಾನ್ ನೀರನ್ನು ವೈದ್ಯಕೀಯಾ ಪರೀಕ್ಷೆಗಾಗಿ ವಿತರಿಸಲು ತಂದಿದ್ದರು, ಅದರಲ್ಲಿ 3 ಕ್ಯಾನ್ ಮಾತ್ರ ಆಸ್ಪತ್ರೆ ಸಿಬ್ಬಂದಿಗಳು ಸ್ವೀಕರಿಸಿದ್ದು ಉಳಿದ 3 ಕ್ಯಾನ್ ನೀರಿನಲ್ಲಿ ಯಾವುದೇ ಕಂಪೆನಿಯ ಲೇಬಲ್, ಉತ್ಪಾದನ ದಿನಾಂಕವಿಲ್ಲ ಇಲ್ಲದ ಕಾರಣ ಆಸ್ಪತ್ರೆ ಸಿಬ್ಬಂದಿಗಳು ಹಿಂದಕ್ಕೆ ಕಳುಹಿಸಿದ್ದರು.
3 ಕ್ಯಾನ್ಗಳನ್ನು ಮಾತ್ರ ಸ್ಟೋರ್ ಪ್ರತಿನಿಧಿ ಗೋಕುಲ ಸ್ವೀಕರಿಸಿದ್ದರು. ಅದರಲ್ಲಿ 2 ಕ್ಯಾನ್ ಗಳು 2016 ರಲ್ಲಿ ತಯಾರಾಗಿದ್ದು ಅದನ್ನು ಸ್ವೀಕರಿಸಿ ಆಸ್ಪತ್ರೆಯ ಲ್ಯಾಬ್ನಲ್ಲಿ ಸಂಗ್ರಹಿಸಿ ಇಟ್ಟಿದ್ದರು. ಈ ಕ್ಯಾನ್ನಲ್ಲಿದ್ದ ನೀರನ್ನು ಜೂನ್ 4 ರಂದು ಶುದ್ಧೀಕರಿಸಿ ಭರ್ತಿ ಮಾಡುವಾಗ ಆಸ್ಪತ್ರೆಯ ನರ್ಸಿಂಗ್ ಸೂಪರ್ ವೈಸರ್ ಸಂದೇಶ ಮತ್ತು ನರ್ಸ ಡ್ರಾಯನ್ ಲ್ಯಾಬ್ ಕೊಠಡಿಯ ಹತ್ತಿರ ತಂದು ಸಿಲಿಂಡರ್ಗೆ ಅಳವಡಿಸಲು ತಯಾರು ಮಾಡಿದಾಗ ಕೆಲವು ಹನಿ ಕೈಗೆ ಬಿದ್ದಾಗ ಹಿಮದ ಅನುಭವ ಆಗಿತ್ತು, ಆಗ ಕೆಮಿಕಲ್ ನೀರಿನ ವಾಸನೆ ನೋಡಿದಾಗ ಅದರಲ್ಲಿ ಸ್ಪೀರಿಟ್ ವಾಸನೆ ಬಂದಿದ್ದು, ಇದರಿಂದ ಸಂಶಯಗೊಂಡ ಆಸ್ಪತ್ರೆಯ ಮುಖ್ಯಸ್ಥರು ಪರೀಕ್ಷೆಗಾಗಿ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿದ್ದರು.
ನಂತರ ಬಂದ ವರದಿಯಲ್ಲಿ ಈ ನೀರಿನಲ್ಲಿ 53.43% ಅಲ್ಕೋಹಾಲ್ ಇರುವುದು ಕಂಡು ಬಂದಿರುತ್ತದೆ. ಯಾರೋ ದುರ್ಷ್ಕಮಿಗಳು ಆಸ್ಪತ್ರೆಯ ಗೌರವ ಮತ್ತು ಹೆಸರನ್ನು ನಾಶಮಾಡುವ ದುರುದ್ದೇಶದಿಂದ ಪ್ರಾಣಹಾನಿ ಅಥವಾ ರೋಗಿಗಳಿಗೆ ಹಾನಿ ಉಂಟು ಮಾಡುವ ಪ್ರಯತ್ನ ಮಾಡಲು ಈ ಕೃತ್ಯವನ್ನು ಎಸಗಿರುವುದಾಗಿ ಆಸ್ಪತ್ರೆಯ ವ್ಯವಸ್ಥಾಪಕ ಪ್ರಶಾಂತ್ ಮಲ್ಯ ಉಡುಪಿ ನಗರ ಠಾಣೆಗೆ ದೂರು ನೀಡಿರುತ್ತಾರೆ.
ಪ್ರಕರಣವನ್ನು ಗಂಭೀರವಾಗಿ ಪಡೆದುಕೊಂಡ ಉಡುಪಿ ನಗರ ಠಾಣಾಧಿಕಾರಿ ಅನಂತಪದ್ಮಾನಾಭ ಇಂದು ಆಸ್ಪತ್ರೆಗೆ ಭೇಟಿ ನೀಡಿ ಸಿಬ್ಬಂದಿಗಳನ್ನು, ನೀರನ್ನು ಸರಬರಾಜು ಮಾಡಿದ ಅಜಿತ್ ವಿಚಾರಣೆಗೆ ಒಳಪಡಿಸಿದ್ದಾರೆ. ಹಾಗೂ 3 ತಿಂಗಳ ಆಸ್ಪತ್ರೆಯ ಸಿಸಿ ಟಿವಿಯ ದೃಶ್ಯವನ್ನು ತನಿಖೆಗಾಗಿ ತಮ್ಮ ವಶಕ್ಕೆ ಪಡೆದಿದ್ದಾರೆ.