ಆಗ್ರಾರ : ಕೊಂಕಣಿ ಸಾಂಪ್ರದಾಯಿಕ ಹಾಡುಗಳ ತರಬೇತಿ
ಬಂಟ್ವಾಳ – ಮಾಂಡ್ ಸೊಭಾಣ್ ವತಿಯಿಂದ ನಡೆಸುವ ಕೊಂಕಣಿ ಸಾಂಪ್ರದಾಯಿಕ ಹಾಡುಗಳ ಎರಡು ಭಾನುವಾರಗಳ ತರಬೇತಿಯು, ಬಂಟ್ವಾಳದ ಆಗ್ರಾರ್ ಚರ್ಚ್ ಗಾಯನ ಮಂಡಳಿಯ ಸಹಕಾರದಲ್ಲಿ ಆರಂಭವಾಯಿತು.
ಚರ್ಚ್ ಸಭಾಂಗಣದಲ್ಲಿ ಸಪ್ಟೆಂಬರ್ 15 ರಂದು ನಡೆದ ಈ ಕಾರ್ಯಕ್ರಮವನ್ನು ಚರ್ಚ್ ಉಪಾಧ್ಯಕ್ಷ ಪಿಯುಸ್ ಎಲ್ ರಾಡ್ರಿಗಸ್ ಉದ್ಘಾಟಿಸಿದರು. ವೇದಿಕೆಯಲ್ಲಿ ಸಿ. ಐಡಾ, ವಿನ್ಸೆಂಟ್ ಕಾರ್ಲೊ, ಗಾಯನ ಮಂಡಳಿಯ ಅಧ್ಯಕ್ಷೆ ಕ್ಲೆಮೆಂಟಿನ್ ನೊರೊನ್ಹಾ ಮತ್ತು ಪ್ರೀತಾ ಸಿಕ್ವೇರಾ ಉಪಸ್ಥಿತರಿದ್ದರು. ಜಾಸ್ಮಿನ್ ಲೋಬೊ ಕಾರ್ಯಕ್ರಮ ನಿರೂಪಿಸಿದರು.
ನಂತರ ವಿಶ್ವ ಕೊಂಕಣಿ ಕಲಾರತ್ನ ಎರಿಕ್ ಒಝೇರಿಯೊ ತರಬೇತಿ ನೀಡಿದರು. ಸಾಂಪ್ರದಾಯಿಕ ಹಾಡುಗಳ ಹಿನ್ನಲೆ ವಿವರಿಸಿ, ಬಂಟವಾಳದ ಮಾಂಡೊ, ದೆಕ್ಣಿ ಹಾಡುಗಳು, ಗುಮಟೆ ಹಾಡುಗಳು ಹಾಗೂ ಹಿರಿಯ ಗಾಯಕರ ಅಮರ ಹಾಡುಗಳ ಸರಣಿಯನ್ನು ಕಲಿಸಿದರು. ಕಿಂಗ್‌ಸ್ಲಿ ನಜ್ರೆತ್, ಆಲ್ರೊನ್ ರಾಡ್ರಿಗಸ್, ಜೇಸನ್ ಲೋಬೊ, ಡಿಯೆಲ್ ಡಿಸೋಜ ಹಾಗೂ ಒಲಿಟಾ ಗುರುಪುರ ಇವರು ಸಹಕರಿಸಿದರು.