ಆಯುಷ್ಮಾನ್ ಭಾರತ್: ಜಾಥ ಕಾರ್ಯಕ್ರಮ

ಬಂಟ್ವಾಳ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ ಯ ಪಾಕ್ಷಿಕ ಆಚರಣೆಯ ಪ್ರಯುಕ್ತ ಜಾಥ ಕಾರ್ಯಕ್ರಮಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಚಾಲನೆ ನೀಡಿದರು.. 

ಬಂಟ್ವಾಳ ಸಮುದಾಯ ಆರೋಗ್ಯ ಕೇಂದ್ರದ ಅವರಣದಲ್ಲಿ    ಜಾಥಕ್ಕೆ ಶಾಸಕ ರಾಜೇಶ್ ನಾಯ್ಕ್ , ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ ಅವರು ಹಸಿರು ನಿಶಾನೆ ತೋರಿದರು.

ಬಳಿಕ ಜಾಥವು ಬಿ.ಸಿ.ರೋಡ್ ವೃತ್ತದವರೆಗೆ  ಸಾಗಿ ವಾಪಾಸ್ ಆಸ್ಪತ್ರೆ  ಅವರಣದಲ್ಲಿ ನಡೆಯಿತು ..  ಈ ಸಂದರ್ಭದಲ್ಲಿ ತಾಪಂ ಉಪಾಧ್ಯಕ್ಷ ಅಬ್ಬಾಸ್ ಆಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಮೀ ಸಿ .ಬಂಗೇರ, ತಾಲೂಕು ವೈದ್ಯಾಧಿಕಾರಿ ಡಾ! ದೀಪಾ ಪ್ರಭು,          ಆಸ್ಪತ್ರೆಯ ಆಡಳಿತಾಧಿಕಾರಿ ಡಾ! ಸದಾಶಿವ, ಪುರಸಭಾ ಇಂಜಿನಿಯರ್ ಡೋಮೆನಿಕ್ ಡಿಮೆಲ್ಲೋ , ಪುರಸಭಾ ಅಧಿಕಾರಿಗಳು, ತಾಲೂಕು ಆಸ್ಪತ್ರೆಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆ ಯರು, ವಿವಿಧ ಸ್ವಸಹಾಯ ಸಂಘ ದ ಸದಸ್ಯರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!