ಕೃಷಿ ಭೂಮಿಯಲ್ಲಿ ತೃಪ್ತಿ ಕಂಡ ಯುವ ಮನಸ್ಸು
ಕೃಷಿಯಿಂದ ದೂರ ಸರಿಯುತ್ತಿರುವ ಇತ್ತೀಚಿನ ದಿನಗಳಲ್ಲಿ, ಜನತೆಯನ್ನ ಕೃಷಿಯತ್ತ ಸೆಳೆಯಲು ಮತ್ತು ತಾನೂ ಕೃಷಿಯಲ್ಲಿ ತೊಡಿಸಿಕೊಳ್ಳಬೇಕೆಂಬ ಹಂಬಲದೊಂದಿಗೆ ವಿದೇಶದಲ್ಲಿರುವ ತನ್ನ ಉದ್ಯೋಗಕ್ಕೆ ಗುಡ್ ಬೈ ಹೇಳಿ ವಿಮಾನ ಹತ್ತಿಯೇ ಬಿಟ್ಟ ಯುವಕನ ಸಾಹಸಮಯ ಯಶೋಗಾಥೆ ಇದು .
ಬಂಟಕಲ್ಲ್ ಹೆರೂರಿನ ಹಿರಿಯ ಕೃಷಿಕರಾದ ಜಾನ್ ಹಾಗೂ ಜುಲಿಯಾನಾ ದಂಪತಿಗಳ ಸುಪುತ್ರ ವಿಜಯ್ ಧೀರಜ್ ಈ ಯಶೋಗಾಥೆಯ ಹೀರೊ . ಕಳೆದ ಜೂನ್ ತಿಂಗಳಲ್ಲಿ ತನ್ನೂರಾದ ಬಂಟಕಲ್ಲ್ ಗೆ ಆಗಮಿಸಿದ ವಿಜಯ್ , ತನ್ನ ತಂದೆಯು ಪೂರ್ವಜರ ಕಾಲಾದಿಂದ ಬಂದ ಕೃಷಿಯನ್ನು ಮುಂದುವರಿಸಿ ಕೊಂಡು ಹೋಗುತ್ತಿರುವುದನ್ನು ನೋಡಿ ತಾನೂ ಕೃಷಿ ಕಾಯಕ ಮುಂದುವರಿಸಿಕೊಂಡು ಹೋಗಬೇಕೆಂಬ ಆಸೆ ಹೊಂದಿದವರು.
ಈಗೀನ ಯುವ ಜನತೆ ಕೃಷಿ ಎಂದರೆ ಮಾರುದ್ದ ದೂರ ಹೋಗುವ ಕಾಲವಿದು .ಇದರ ಬಗ್ಗೆ ಒಂದಿನಿತು ಅರಿವಿರದ ವಿದ್ಯಾರ್ಥಿಗಳಿಗೆ ಕೃಷಿಯ ಅರಿವು ಮೂಡಿಸಬೇಕೆಂಬ ಉದ್ದೇಶದೊಂದಿಗೆ ವಿಜಯ್ ಧೀರಜ್, ಶಿರ್ವ ಡಾನ್ ಬಾಸ್ಕೋ ಆಂಗ್ಲ ಮಾಧ್ಯಮ ಶಾಲಾ ಸ್ಕೌಟ್ಸ್ ಮತ್ತು ಗೈಡ್ಸ್ ನ 50 ವಿದ್ಯಾರ್ಥಿಗಳಿಗೆ ಕೃಷಿಯ ಮಹತ್ವಮತ್ತು ಗದ್ದೆಗಿಳಿದು ನೇಜಿ ನೆಡುವ ಹಾಗೂ ಭತ್ತ ಬೆಳೆಯುವ ಪ್ರಾತ್ಯಕ್ಷಿಕೆ ನೀಡಿದರು.
“ನಮ್ಮ ನಡೆ ಕೃಷಿಯ ಕಡೆ” ಎಂಬ ಧ್ಯೇಯದೊಂದಿಗೆ ಸ್ಥಳೀಯರನ್ನು ಜೊತೆಯಾಗಿಸಿ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಕೃಷಿಯ ಮಹತ್ವವನ್ನು ತಿಳಿಸಿ , ವಿಜಯ್, ಕೋಣಗಳಿಂದ ಉಳುಮೆಯ ಪ್ರಾತ್ಯಕ್ಷಿಕೆ ನಡೆಸಿ, ನಾಟಿ ಕಾರ್ಯ ಮಾಡುವ ಮಹಿಳೆಯರೊಂದಿಗೆ ವಿದ್ಯಾರ್ಥಿಗಳು ಗದ್ದೆಗಿಳಿದು ಅವರೊಂದಿಗೆ ನಾಟಿ ಮಾಡಿ ಸಂಭ್ರಮಿಸಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕಾಪು ಕ್ಷೇತ್ರದ ಮಾಜಿ ಶಾಸಕ ವಿನಯ್ ಕುಮಾರ್ ಸೊರಕೆ ವಿದ್ಯಾರ್ಥಿಗಳ ಉತ್ಸಾಹವನ್ನು ಮೆಚ್ಚಿಕೊಂಡು, ತಂತ್ರಜ್ಞಾನದ ಯುಗದಲ್ಲಿ ಕೃಷಿಯಿಂದ ದೂರ ಸರಿಯುತ್ತಿರುವ ವಿದ್ಯಾರ್ಥಿಗಳಿಗೆ ಕೃಷಿಗೆ ಪ್ರಾಧಾನ್ಯತೆ ನೀಡಲು ಕರೆ ಕೊಟ್ಟರು. ಬೇಸಾಯ ಮಾಡುವುದೇ ವ್ಯಾಯಾಮವಾಗಿದ್ದು, ಕೆಸರಿನಲ್ಲಿ ಶ್ರಮ ಪಡುವವರಿಗೆ ಯಾವುದೇ ರೋಗ ಬರುವುದಿಲ್ಲ. ವಿದೇಶದಲ್ಲಿ ಉದ್ಯೋಗದಲ್ಲಿದ್ದರೂ ಊರಿಗೆ ಮರಳಿ ಕೃಷಿಯನ್ನು ಉತ್ತೇಜಿಸುವ ಸಲುವಾಗಿ ವಿದ್ಯಾರ್ಥಿಗಳಿಗೆ ಮಾಹಿತಿ ತಿಳಿವಳಿಕೆ ನೀಡುತ್ತಿರುವ ವಿಜಯ್ ದೀರಜ್ ಡಿಸೋಜಾ ರವರ ಕಾರ್ಯ ಶಾಘ್ಲನೀಯ ಎಂದು ಹೇಳಿದರು.
ಶಿರ್ವ ಡಾನ್ ಬಾಸ್ಕೋ ಪ್ರಾಂಶುಪಾಲ ವಂದನೀಯ ಫಾ. ಮಹೇಶ್ ಡಿಸೋಜ ಮತ್ತು ಪಾಂಬೂರು ಹೋಲಿಕ್ರಾಸ್ ದೇವಾಲಯದ ಧರ್ಮಗುರು ವಂದನೀಯ ಫಾ. ಹೆನ್ರಿ ಮಸ್ಕರೇನಸ್ ವಿದ್ಯಾರ್ಥಿಗಳಿಗೆ ಕೃಷಿಯ ಬಗ್ಗೆ ಜಾಗೃತಿ ಮೂಡಿಸಿದರು ಮತ್ತು ಸಂಘಟಕರ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸ್ಕೌಟ್ಸ್ ಮತ್ತು ಗೈಡ್ಸ್ ಸಮವಸ್ತ್ರಧಾರಿ ವಿದ್ಯಾರ್ಥಿಗಳು ಶಿಸ್ತಿಗೆ ಹೆಸರಾಗಿದ್ದು, ಕೃಷಿಯಲ್ಲಿ ತೊಡಗುವ ಮೂಲಕ ವಿದ್ಯಾರ್ಥಿಗಳಿಗೆ ಆದರ್ಶರಾಗಿದ್ದಾರೆ. ಸ್ಥಳೀಯ ಕೃಷಿಕ ಮಹಿಳೆಯೊಂದಿಗೆ ನಾಟಿ ಕೆಲಸದೊಂದಿಗೆ ಹಾಡುಗಳನ್ನು ಹಾಡಿ ಸಂಭ್ರಮಿಸಿದರು. ಕೃಷಿ ಕುಟುಂಬದಲ್ಲಿ ತಯಾರಿಸಿದ ತಿಂಡಿ ತಿನಿಸುಗಳನ್ನು ಪ್ರೀತಿಯಿಂದ ಸ್ವೀಕರಿಸಿದರು. ಶಿಕ್ಷಕರಾದ ಉಮೇಶ್ ಮತ್ತು ರೇಷ್ಮಾ ವಿದ್ಯಾರ್ಥಿಗಳಿಗೆ ಜೊತೆಯಾಗಿದ್ದರು.
ಪದವಿ ಶಿಕ್ಷಣದ ಬಳಿಕ ದುಬೈನಲ್ಲಿ ಹಲವಾರು ವರ್ಷ ಉದ್ಯೋಗದಲ್ಲಿದ್ದ ವಿಜಯ್ ಧೀರಜ್ ತನ್ನ ಪತ್ನಿ ರಿಚ್ಚಿ ಡಿಸೋಜ ತನ್ನ ಕೃಷಿ ಕಾರ್ಯಕ್ಕೆ ಅತಿ ದೊಡ್ಡ ಪ್ರೋತ್ಸಾಹ ನೀಡುತ್ತಿದ್ದಾರೆ ಎನ್ನುತ್ತಾರೆ. ಜಿಯಾ ಮತ್ತು ಜೋಯಿ ಮುದ್ದು ಮಕ್ಕಳ ಪ್ರೀತಿಯ ತಂದೆಯಾಗಿರುವ ವಿಜಯ್ ಧೀರಜ್ ರವರ ಪತ್ನಿ ರಿಚ್ಚಿ ಡಿಸೋಜ ರವರಿಗೆ ಪ್ರತಿಷ್ಠಿತ ಬೆಸ್ಟ್ ಟೀಚರ್ ಗಲ್ಫ್ ಅವಾರ್ಡ್ 2014 ರಲ್ಲಿ ಸಿಕ್ಕಿರುತ್ತದೆ.
ಕಾರ್ಯಕ್ರಮದಲ್ಲಿ ಶಿರ್ವ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ವಿಲ್ಸನ್ ಡಿಸೋಜ, ಶಾಲಾಡಳಿತ ಮಂಡಳಿಯ ಸದಸ್ಯ ಜೂಲಿಯಾನ್ ರೊಡ್ರಿಗಸ್, ಶಿರ್ವ ಗ್ರಾಮ ಪಂಚಾಯತ್ ಸದಸ್ಯ ಕೆಆರ್ ಪಾಟ್ಕರ್, ಹಿರಿಯರಾದ ವಿಠಲ ಶೆಟ್ಟಿ , ಸುಂದರ ಪೂಜಾರಿ, ವಿಜಯ ಶೆಟ್ಟಿ, ಸದಾನಂದ ಹೇರೂರು, ಜಾನ್ ಡಿಸೋಜಾ ಮತ್ತಿತರರು ಉಪಸ್ಥಿತರಿದ್ದರು.
ಕೃಷಿಯ ಬಗ್ಗೆ ಮಾಹಿತಿ ಗೊತ್ತಿಲ್ಲದ ವಿದ್ಯಾರ್ಥಿಗಳಿಗೆ ಕೃಷಿಯ ಬಗ್ಗೆ ಅರಿವು ಮೂಡಿಸಿ ರೈತರಿಗೆ ಬೆಂಬಲ ನೀಡುವ ಗೋಸ್ಕರ ಮತ್ತು ಅನ್ನದ ಮಹತ್ವ ಮತ್ತು ರೈತರ ಬಗ್ಗೆ ಅರಿವು ಮೂಡಿಸಲು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾಗಿ ವಿಜಯ್ ಧೀರಜ್ ತಿಳಿಸಿದರು.
Thank you Udupi Times.. Really appreciated on your article..