ಸೊಳ್ಳೆ ನಿಯಂತ್ರಣ ಬಗ್ಗೆ ಉತ್ತರಿಸದ ವಿದ್ಯಾರ್ಥಿಗೆ ಮನಬಂದಂತೆ ಥಳಿಸಿದ ಶಿಕ್ಷಕ
ಉಡುಪಿ: ಸೊಳ್ಳೆ ನಿಯಂತ್ರಣದ ಪ್ರಶ್ನೆಗೆ ಸರಿಯಾಗಿ ಉತ್ತರಿಸದಕ್ಕೆ ಅಧ್ಯಾಪಕ ವಿದ್ಯಾರ್ಥಿಗೆ ಮನಬಂದಂತೆ ಥಳಿಸಿದ ಘಟನೆ ಕಟಪಾಡಿಯಲ್ಲಿ ಬುಧವಾರ ನಡೆದಿದೆ.
ಕಟಪಾಡಿ ಶಾಲೆಯ ದೈಹಿಕ ಶಿಕ್ಷಕ ಕಿರಣ್ ಕುಮಾರ್ 10 ನೇ ತರಗತಿಯಲ್ಲಿ ಸೊಳ್ಳೆ ನಿಯಂತ್ರಣದ ಪ್ರಶ್ನೆಗೆ ವಿದ್ಯಾರ್ಥಿಯೊಬ್ಬ ಪೆಟ್ರೊಲ್ ಸುರಿದರೆ ನಿಯಂತ್ರಿಸ ಬಹುದೆಂದು ಉತ್ತರಿಸಿದ್ದ. ಇದಕ್ಕೆ ಕೆಂಡಾಮಂಡಲವಾದ ಶಿಕ್ಷಕ ವಿದ್ಯಾರ್ಥಿಗೆ ತರಗತಿಯಲ್ಲಿ ಮನಬಂದಂತೆ ಥಳಿಸಿ, ನಂತರ ಶಿಕ್ಷಕ ಕೊಠಡಿಗೆ ಏಳೆದ್ಯೊದು ಅಲ್ಲೂ ಬೂಟ್ ಕಾಲಿನಲ್ಲಿ ಒದೆದಿದ್ದಾಗಿ ತಿಳಿದು ಬಂದಿದೆ.
ಇಂದು ವಿದ್ಯಾರ್ಥಿ ಪೋಷಕರು ಹಾಗೂ ಸ್ಥಳೀಯರು ಶಾಲಾ ಶಿಕ್ಷಕ ವೃಂದದವರಲ್ಲಿ ಈ ಬಗ್ಗೆ ವಿಚಾರಿಸಲು ಹೋಗಿದ್ದು ಅಲ್ಲಿ ಅಧ್ಯಾಪಕರ ವರ್ತನೆ ಅಸಮಾಧನ ವ್ಯಕ್ತಪಡಿಸಿದರು.
ಘಟನೆ ಬಗ್ಗೆ ಶಾಲಾ ಮುಖ್ಯ ಶಿಕ್ಷಕರು ,ಇತರ ಶಿಕ್ಷಕರು ಅಧ್ಯಾಪಕರಿಂದ ಆದ ತಪ್ಪಿಗೆ ಕ್ಷಮೆ ಕೇಳಿದ್ರು, ವಿದ್ಯಾರ್ಥಿಗೆ ಹಿಗ್ಗಾಮುಗ್ಗಾ ಥಳಿಸಿದ ಶಿಕ್ಷಕ ಮಾತ್ರ ಪೋಷಕರಲ್ಲಿ ಕ್ಷಮೆ ಕೇಳಿಲ್ಲ ಇದರಿಂದ ಸ್ಥಳೀಯರು ಅಧ್ಯಾಪಕರ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದರು.
ಶಾಲಾ ಆಡಳಿತ ಮಂಡಳಿಯು ಇಂದು ಬೆಳಿಗ್ಗೆ ಅಧ್ಯಾಪಕರಿಂದ ಆದ ತಪ್ಪಿಗೆ ಇನ್ನು ಮುಂದೆ ಇಂತಹ ಅಮಾನುಷ ರೀತಿಯಾಗಿ ವಿದ್ಯಾರ್ಥಿಗಳನ್ನು ನಡೆಸಿಕೊಳ್ಳುವುದಿಲ್ಲ ಎಂಬ ಕ್ಷಮಾಪನ ಪತ್ರ ಬರೆಕೊಟ್ಟ ಹಿನ್ನೆಲೆಯಲ್ಲಿ ಪ್ರಕರಣ ಸುಖಾಂತ್ಯವಾಗಿದೆಂದು ಸ್ಥಳೀಯರು ತಿಳಿಸಿದ್ದಾರೆ.