ಎ. ಜೆ. ಮಹಾವಿದ್ಯಾಲಯದ ಸ್ವರೋಗ ವಿಕಿರಣ ಮತ್ತು ಕೆಎಸ್ಸಿ ಎಜಿಒಐ ಜಂಟಿ ಕಾರ್ಯಕ್ರಮ
ಅರ್ಬುದ ರೋಗ ಈಗಿನ ಕಾಲದಲ್ಲಿ ಹೆಚ್ಚಾಗುತ್ತಿದೆ. ಇದರಿಂದ ಪ್ರಾಥಮಿಕ ಹಂತದಲ್ಲಿ ಪತ್ತೆ ಹಚ್ಚಿ ಸರಿಯಾದ ಚಿಕಿತ್ಸೆ ನೀಡುವುದರಿಂದ ಮುಂದಕ್ಕೆ ಅರ್ಬುದ ರೋಗವಾಗದ ಹಾಗೆ ತಡೆಗಟ್ಟಬಹುದು ಈ ನಿಟ್ಟಿನಲ್ಲಿ ನಮ್ಮ ಪ್ರಯತ್ನವೇ ಈ ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮ. ಎ. ಜೆ. ವೈದ್ಯಕೀಯ ಮಹಾವಿದ್ಯಾಲಯದ ಸ್ವರೋಗ Radiation and KSC AGOI ಜಂಟಿಯಾಗಿ ನಡೆಸಿಕೊಡುತ್ತಿರುವ ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ KSC – AGOI ( Karnataka State Chapter – Association Gynace of India ) ಅಧ್ಯಕ್ಷರಾದ ಡಾ. ಇಂದು ಕಲಾ ಎಸ್ ಭಾಗವಹಿಸುತ್ತಿದ್ದಾರೆ.
ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಮಣಿಪಾಲದ ಡಾ. ಶ್ರೀ ಗುರುವರೆ, ಬೆಂಗಳೂರಿನ ಡಾ. ಸುಂದರಿ ಹಾಗೂ ಮಂಗಳೂರಿನ ಮರಿಯಮ್ ಅಂಜುಮ್ ಇಫ್ತಿಕಾರ್ ಹಾಗೂ ಮತ್ತಿತ್ತರರು ಭಾಗವಹಿಸುತ್ತಿದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ ಅತಿಥಿಗಳ ಜೊತೆಗೆ ಮುಖ್ಯಸ್ಥರಾದ ಡಾ. ಪ್ರದೀಪ್ ಗಾಣಿಗ, ಡಾ. ಕಮಲಾಕ್ಷ ಶೆನಯ್, KMC Obscener ಡಾ. ವತ್ಸಲಾ ಕಾಮತ್ ಮತ್ತು ಡಾ. ಕವಿತಾ ಡಿಸೋಜ ಉಪಸ್ಥಿತರಿದ್ದಾರೆ. ಡಾ. ಅಮೃತ ಭಂಡಾರಿ ಸ್ವಾಗತಿಸಿದರು. ಡಾ. ವೀಣಾ ಭಗವಾನ್ ವಂದಿಸಿದರು. ಡಾ. ಪ್ರಮೋದಾ ಹಾಗೂ ಡಾ. ಸಮಂತಾ ಕಾರ್ಯಕ್ರಮ ನಿರ್ವಹಿಸಿದರು.