ನನ್ನ ನಿಯಮ

ಸ್ನೇಹ ಬೆಸುಗೆ ಕಳಚಿ ಕರ್ತವ್ಯದ ಸಂಕೋಲೆಯೊಂದೇ ಉಳಿದಿದೆ ಎಂದು ಗೊತ್ತು…
ಅಗತ್ಯಕ್ಕಷ್ಟು ಮಾತು ಒಂದಿಷ್ಟು ಕಿರುನಗೆಯಿಂದ ನೀನೇನೂ ಮರೆ ಮಾಚಲಾರೆ…
ತೋರು ಮುಖದ ಹಿಂದಿರುವ ಅಂತರ್ಮುಖ ಅರಿಯಲಾರದಷ್ಡು ದಡ್ಡನೇನೂ ಅಲ್ಲ ನಾನು..
ಹತ್ತಿರವಾದಷ್ಟೇ ವೇಗವಾಗಿ ದೂರವಾಗುವುದು ಜಗದ ನಿಯಮ…
ದೂರವಾದಷ್ಟೂ ಅರಿವಿಗೆ ಹತ್ತಿರವಾಗುವುದು ನನ್ನ ನಿಯಮ…

=============

ನಿನ್ನ ನೋವುಗಳನ್ನು ಮನದ ದುಗುಡಗಳನ್ನು ನುಂಗಿ ಸುಮ್ಮನಿರು…
ಅದನ್ನು ಪಡೆಯವ ಹಕ್ಕು ಮಾತ್ರ ನಿನ್ನದು… ಹೇಳುವುದಲ್ಲ.ನಿನ್ನ ಕನಸುಗಳನ್ನು ಬದುಕಿನಾಸೆಗಳನ್ನು ಹೇಳದೇ ಸುಮ್ಮನಿರು…
ಅದನ್ನು ಕಾಣೋ ಹಕ್ಕು ಮಾತ್ರ ನಿನ್ನದು… ಪಡೆಯುವುದಲ್ಲ.ನಿನ್ನೊಳಗಿರುವ ಪ್ರೀತಿಗೆ ಕರಗಿ ಹೋಗೋ ಬಯಕೆಗೆ ಗೋಚರ ರೂಪ ಕೊಡದಿರು…
ಪ್ರೀತಿಸುವ ಹಕ್ಕು ಮಾತ್ರ ನಿನ್ನದು… ಅದ ಅನುಭವಿಸುವುದಲ್ಲ.
================
ನಿನ್ನ ಬದುಕಿಗೆ ಕಾರು ಬಂಗಲೆ ಬ್ಯಾಂಕ್ ಬ್ಯಾಲೆನ್ಸ್ ನಷ್ಟು Secure Feeling ನಾನು ಕೊಡಲಾರೆ ಎಂದು ನನಗೊತ್ತು..
ಆದರೆ ಪುಟ್ಟ ಮಗಳೊಬ್ಬಳು ತನ್ನ ತಂದೆಯ ಹೊಟ್ಟೆಯ ಮೇಲೆ ಮಲಗಿರುವಾಗ ಪಡೆಯುವ Secure Feel ನಿನಗ್ಯಾವತ್ತೂ ನನ್ನಲ್ಲಿತ್ತು.ದೊಡ್ಡವರ ಉಳ್ಳವರೊಂದಿಗೆ ನನಗೆ Standards ಇಲ್ಲದಿದ್ದರೂ…
ನಿನ್ನವರೆಲ್ಲರ ಎದುರು ನಿನ್ನ Standards ಉಳಿಸಿಕೊಳ್ಳುವಷ್ಟು Standards ನನ್ನಲ್ಲಿತ್ತು.ಅಳು ಕಾಳಿಗೊಂದು ಜನ ಮಾಡಿ ನಿನ್ನ ಮಹರಾಣಿಯಂತೆ ನೋಡಿಕೊಳ್ಳುವಷ್ಟು ಸುಖ ಸಂಪತ್ತಿಲ್ಲರದಿದ್ದರೂ…
ನಿನ್ನ ಮಾನಸಿಕವಾಗಿ ರಾಣಿ ಎಲಿಜಬೆತ್ ಗಿಂತಲೂ ಹೆಚ್ಚು ಸುಖವಾಗಿರಿಸುವಷ್ಟು ಹೃದಯ ಸಂಪತ್ತು ನನ್ನಲ್ಲಿತ್ತು.ನೋಡಿದರೆ ಅಪ್ಪಿ ಡ್ಯುಯೆಟ್ ಹಾಡಬೇಕೆನಿಸುವ ‌Handsome Figure ನನ್ನದಲ್ಲದಿದ್ದರೂ…
ನಿನ್ನನ್ಯಾವತ್ತೂ ನೋಯಿಸದಂತಹ Lovely Figure ನನ್ನಲ್ಲಿತ್ತು.ಭೌತಿಕ ವಸ್ತುಗಳೇ ಜೀವನದ ಸುಖದ ಮೂಲಗಳೆಂದು ನೀನೆಣಿಸಿದಾಗ…
ಅಭೌತಿಕ ವಸ್ತುಗಳಿಗೆ ನಾನೇನು ಉತ್ತರ ಕೊಡಲಿ.ಎಲ್ಲಾದರು ಇರು ಎಂತಾದರೂ ಇರು ಎಂದೆಂದಿಗೂ ನೀ ಸುಖವಾಗಿರು… ಹಳೆಯದಾಯಿತು.
ಎಲ್ಲಾದರು ಇರು ಎಂತಾದರೂ ಇರು ಎಂದೆಂದಿಗೂ ನೀ ನೀನೆ ಆಗಿರು…
=================
ನನ್ನ ಮೌನ ನಿನ್ನ ಮೇಲಿನ ಕೋಪವಲ್ಲ ನನ್ನ ಪ್ರೇಮದ ಮೂರ್ತ ರೂಪ…
ನನ್ನಾಶ್ರು ಬಿಂದು ನನ್ನೊಳಗಿನ ಹತಾಶೆಯಲ್ಲ ನನ್ನೊಲವ ತಿಳಿಸಲಾರದ ಬಡತನ…
======
ಪ್ರತಿಯೊಬ್ಬ ಒಳ್ಳೆಯ ಹುಡುಗಿಯ ಮದುವೆಯ ದಿನ ಒಬ್ಬನಾದರೂ ಭಗ್ನ ಪ್ರೇಮಿ ಇರುತ್ತಾನೆ… ಅಲ್ಲೆಲ್ಲೋ ಅಡುಗೆ ಕೆಲಸದಲ್ಲೋ…. ಬಡಿಸುವ ಕೆಲಸದಲ್ಲೋ… ಮತ್ತಾವುದೋ ಜವಬ್ದಾರಿ ನಿಭಾಯಿಸುತ್ತಲೋ… ತನ್ನೊಳಗಿನ ದುಃಖ ನುಂಗಿಕೊಂಡು ನಗುವ ಮುಖವಾಡ ದರಿಸಿ….

ಭಾವನೆಗಳ ವ್ಯಸನಿ

Leave a Reply

Your email address will not be published. Required fields are marked *

error: Content is protected !!