ಕಾರ್ಕಳ: ಸ್ವಾತಂತ್ರ್ಯ ದಿನದಂದೇ ತರಗತಿ ನಡೆಸಿ ವಿವಾದಕ್ಕೀಡಾದ ಕ್ರೈಸ್ಟ್‌ಕಿಂಗ್ ಶಾಲೆ
ಕಾರ್ಕಳ : ಸ್ವಾತಂತ್ರ್ಯ ದಿನವು ರಾಷ್ಟ್ರೀಯ ಹಬ್ಬವಾಗಿದ್ದು ಈ ದಿನ ದೇಶಾದ್ಯಂತ ಎಲ್ಲಾ ಸರಕಾರಿ ಹಾಗೂ ಸರಕಾರೇತರ ಸಂಸ್ಥೆಗಳಿಗೆ ಸರಕಾರಿ ರಜೆ ಎಂದು ಘೋಷಣೆಯಾಗಿರುತ್ತದೆ. ಆದರೆ ಕಾರ್ಕಳದ ಖಾಸಗಿ ಆಂಗ್ಲಮಾಧ್ಯಮ ಶಾಲೆಯೊಂದರಲ್ಲಿ ಸ್ವಾತಂತ್ರ್ಯ ದಿನದಂದೇ ತರಗತಿಗಳನ್ನು ನಡೆಸಿರುವ ಘಟನೆ ನಡೆದಿದ್ದು, ಇದು ಭಾರೀ ವಿವಾದಕ್ಕೆ ಕಾರಣವಾಗಿದೆ.
ಕಾರ್ಕಳ ಕ್ರೈಸ್ಟ್‌ಕಿಂಗ್ ಖಾಸಗಿ ಆಂಗ್ಲಮಾಧ್ಯಮ ಶಾಲೆಯಲ್ಲಿ ಗುರುವಾರ ಬೆಳಗ್ಗೆ ಸ್ವಾತಂತ್ರೋತ್ಸವದ ಅಂಗವಾಗಿ ಧ್ವಜಾರೋಹಣ ಮಾಡಿ ಬಳಿಕ ಸಂಸ್ಥೆಯ ಮುಖ್ಯಸ್ಥರು ಶಾಲೆಗೆ ರಜೆ ನೀಡದೆ ತರಗತಿಗಳನ್ನು ನಡೆಸಲು ಮುಂದಾಗಿದ್ದರು. ಸ್ವಾತಂತ್ರ್ಯೋತ್ಸವದ ಮುನ್ನಾದಿನವೇ ಸ್ವಾತಂತ್ರ್ಯ ದಿನದಂದು ತರಗತಿಗಳನ್ನು ನಡೆಸಲಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಸೂಚನೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಶಾಲೆಗೆ ರಜೆ ಇದ್ದರೂ ಪಠ್ಯಪುಸ್ತಕದೊಂದಿಗೆ ಶಾಲೆಗೆ ಹಾಜರಾಗಿದ್ದರು. ಇತ್ತ ಸ್ವಾತಂತ್ರ್ಯ ದಿನದಂದು ತರಗತಿಗಳು ನಡೆಯುತ್ತಿರುವ ವಿಚಾರವನ್ನು ಗಮನಿಸಿದ ಕೆಲ ಸ್ಥಳೀಯರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತಂದಿದ್ದರು.
ಸ್ಥಳೀಯರಿಂದ ಬಂದ ದೂರಿನ ಹಿನ್ನೆಲೆಯಲ್ಲಿ ಶಿಕ್ಷಣಾಧಿಕಾರಿ ಶಶಿಧರ್ ಜಿ.ಎಸ್ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು ಎಂದು ತಿಳಿದು ಬಂದಿದೆ. ಈ ಕುರಿತು ಸಂಸ್ಥೆಯ ಮುಖ್ಯಸ್ಥರೊಂದಿಗೆ ಮಾಹಿತಿ ಪಡೆದ ಶಿಕ್ಷಣಾಧಿಕಾರಿಗಳು ತರಗತಿಗಳನ್ನು ನಿಲ್ಲಿಸುವಂತೆ ಸೂಚಿಸಿ ಶಿಕ್ಷಣ ಸಂಸ್ಥೆಗೆ ರಜೆ ನೀಡಲು ಸೂಚಿಸಿದರು. ಶಿಕ್ಷಣಾಧಿಕಾರಿಗಳ ಆದೇಶದ ಮೇರೆಗೆ ಸಂಸ್ಥೆಯ ಮುಖ್ಯಸ್ಥರು ಶಾಲೆಗೆ ರಜೆ ಘೋಷಿಸಿದ ಬಳಿಕ ವಿದ್ಯಾರ್ಥಿಗಳು ಮನೆಗೆ ತೆರಳಿದರು.
ಖಾಸಗಿ ಆಂಗ್ಲಮಾಧ್ಯಮ ಶಾಲೆಗಳು ಕೇವಲ ಕಾಟಾಚಾರಕ್ಕಾಗಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತವೆ ಎನ್ನುವ ಆರೋಪಗಳು ಕೇಳಿಬರುತ್ತಿದ್ದು, ಕಾರ್ಕಳ ತಾಲೂಕು ಆಡಳಿತದ ವತಿಯಿಂದ ನಡೆಯುವ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಸ್ಥಳೀಯ ಯಾವುದೇ ಖಾಸಗಿ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಪಥಸಂಚಲನದಲ್ಲಿ ಭಾಗವಹಿಸುವುದಿಲ್ಲ. ಕೇವಲ ಶಿಕ್ಷಣಕ್ಕಷ್ಟೇ ಪ್ರಾಧಾನ್ಯತೆ ನೀಡುವ ಖಾಸಗಿ ಶಿಕ್ಷಣ ಸಂಸ್ಥೆಗಳು ದೇಶಭಕ್ತಿಯನ್ನು ನಿರ್ಲಕ್ಷಿಸುವುದು ನಿಜಕ್ಕೂ ಖಂಡನೀಯ.
Ee article annu bhakta baredaddu 100% khachitha.
Idu pettkammigala lakshana.
Yess this is true
Yavude khasagi vidyasamsthe pathasanchalanadalli bhagavahisuvudilla yembudu tappu.Pathasanchalanadalli bhagavahisuva khasagi vidyasamsthe eruvaga ella endare tappallave.Nanage tilidiruva hage J C C English medium school na vidyarthigalu prathivarsha pathasanchalanadalli bhagavahisutta bandiddare