ಪ್ರಧಾನ ಮಂತ್ರಿ ಭಾರತೀಯ ಜನೌಷಧಿಯಲ್ಲಿ ನಾಲ್ಕು ರೂ.ಗೆ ಸ್ಯಾನಿಟೆರಿ ನ್ಯಾಪಕಿನ್

ಉಡುಪಿ: ಸ್ವತಂತ್ರ ದಿನಾಚರಣೆಯಂದು ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆಯ ವಿಶೇಷ ಯೋಜನೆಯಲ್ಲಿ ಇಂದು ಘೋಷಿಸಿದ, ನಾಲ್ಕು ರೂಪಾಯಿಗೆ ನಾಲ್ಕು ಸುವಿಧಾ ಸ್ಯಾನಿಟೆರಿ ನ್ಯಾಪಕಿನ್ ಪರಿಚಯ ಕಾರ್ಯಕ್ರಮ ಶಿರ್ವದಲ್ಲಿರುವ ಎಂ.ಎಸ್.ಆರ್ ಕಾಲೇಜನಲ್ಲಿ ಜರುಗಿತು.

ಕಾಲೇಜಿನ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಈ ಕಾರ್ಯಕ್ರಮದಲ್ಲಿ ಪರಿಯೋಜನೆಯ ಅಧಿಕಾರಿ ಡಾ. ಅನಿಲಾ ಅವರು ವಿದ್ಯಾರ್ಥಿಗಳಿಗೆ ಸುವಿಧಾ ಸ್ಯಾನಿಟರಿ ನ್ಯಾಪಕಿನ್ ವಿಶೇಷತೆಗಳನ್ನುವಿವರಿಸಿದರು. ಈ ವಿಶೇಷ ನ್ಯಾಪಿಕಿನ್ ಗಳು ಕೆಲವೇ ವಾರಗಳಲ್ಲಿ ಎಲ್ಲಾ ಜನೌಷಧಿಕೇಂದ್ರಗಳಲ್ಲಿ ಲಭ್ಯವಿದೆ ಎಂದು ಡಾ. ಅನಿಲಾ ಅವರು ಪ್ರಕಟಿಸಿದರು.

ಈ ಸಂಧರ್ಭದಲ್ಲಿ ಕಾಲೇಜಿನ ಪ್ರಿನ್ಸಿಪಾಲರಾದ ಡಾ.ನಯನಾ, ಉಪ-ಪ್ರಾನ್ಸುಪಾಲರಾದ ಡಾ.ಸಿ.ಕೆ.ಮಂಜುನಾಥ, ಸದ್ಗುರು ಸೌಹಾರ್ದ ಸಹಕಾರಿಯ ಅಧ್ಯಕ್ಷರಾದ ಡಾ.ಬಾ.ನಾ.ಶಾಂತಪ್ರಿಯ, ಶಿಕ್ಷಕವೃಂದ ಸದಸ್ಯರು ಹಾಜರಿದ್ದರು. ಈ ಕಾರ್‍ಯಕ್ರಮವನ್ನು ಉಡುಪಿ ಕಿನ್ನಮುಲ್ಕಿಯ ಸದ್ಗರು ಸಹಕಾರಿಯ ಪ್ರಧಾನಮಂತ್ರಿ ಭಾರತೀಯ ಜನೌಷಧಿಕೇಂದ್ರಆಯೋಜಿಸಿತ್ತು.

Leave a Reply

Your email address will not be published. Required fields are marked *

error: Content is protected !!