ಉದ್ಯೋಗ ಕೊಡಿಸುವುದಾಗಿ 25 ಲಕ್ಷ ರೂ.ವಂಚಿಸಿದ ಅಂಚೆ ಸಿಬ್ಬಂದಿ
ಕುಂದಾಫುರ: ಉಡುಪಿ ಅಂಚೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ಲಕ್ಷಾಂತರ ರೂಪಾಯಿ ವಂಚಿಸಿದ ಇಲಾಖೆಯ ಮಹಿಳಾ ಉದ್ಯೋಗಿ.
ಉಡುಪಿಯ ಮುಖ್ಯ ಅಂಚೆ ಕಛೇರಿಯಲ್ಲಿ ಕೆಲಸ ನಿರ್ವಹಿಸುವ ಆಶಾ ಕೊಕ್ಕರ್ಣಿ (27) ಉಡುಪಿಯ ಪ್ರಧಾನ ಅಂಚೆ ಕಛೇರಿಯಲ್ಲಿ ವಡೇರ ಹೋಬಳಿ ಪ್ರವೀಣ ಪೂಜಾರಿ (25)ಗೆ ಉದ್ಯೋಗ ಕೊಡಿಸುವುದಾಗಿ ಹೇಳಿ 25 ಲಕ್ಷ ರೂಪಾಯಿ ಹಣ ಪಡೆದು ವಂಚಿಸಿರುವುದಾಗಿ ಕುಂದಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರವೀಣ್ ಪೂಜಾರಿಗೆ ಮುಖ್ಯ ಅಂಚೆ ಕಛೇರಿಯಲ್ಲಿ ಖಾಯಂ ಉದ್ಯೋಗ ಕಲ್ಪಿಸಿ ಕೊಡುವುದಾಗಿ ಹೇಳಿದ ಆಶಾ ತನ್ನ ಬ್ಯಾಂಕ್ ಖಾತೆಗೆ 19,26,000 ಹಾಗೂ ಈಕೆಗೆ ಸಹಕರಿಸಿದ ಕೊಕ್ಕರ್ಣೆಯ ಲಕ್ಷ್ಮೀ ಎಂಬಾಕೆಯ ಬ್ಯಾಂಕ್ ಖಾತೆಗೆ 1000, ಉಡುಪಿಯ ಲಲಿತಾ ಆಚಾರ್ಯ ಖಾತೆಗೆ 11000, ಶುಭ ಬಂಗೇರ ಖಾತೆಗೆ 37000, ದಿವೇಶ್ ಬಾಬು ಖಾತೆಗೆ 25000 ರೂಪಾಯಿಗಳನ್ನು ಜಮಾ ಮಾಡಲು ಹೇಳಿದಂತೆ ತಾನು ಇವರ ಖಾತೆಗೆ ನಗದು ಹಾಕಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಈಗ ನನಗೆ ಉದ್ಯೋಗ ದೊರಕಿಸಿ ಕೊಡದೆ, ಹಣವನ್ನೂ ಹಿಂದೆಕ್ಕೆ ನೀಡದೆ ವಂಚಿಸಿದ್ದು, ಹಣವನ್ನು ಕೇಳಿದಕ್ಕೆ ಜೀವ ಬೆದರಿಕೆ ಒಡ್ಡಿದ್ದಾಗಿ ಪ್ರವೀಣ್ ಪೂಜಾರಿ ಕುಂದಾಪುರ ಠಾಣೆಗೆ ದೂರು ನೀಡಿದ್ದಾರೆ.