ಮಾರ್ಪಳ್ಳಿ ಬ್ರಹ್ಮಬೈದರ್ಕಳ ಗರೋಡಿಯ ವಾರ್ಷಿಕ ಮಹಾಸಭೆ

ಉಡುಪಿ: ಮಾರ್ಪಳ್ಳಿ ಬ್ರಹ್ಮಬೈದರ್ಕಳ ಗರೋಡಿಯ ವಾರ್ಷಿಕ ಮಹಾಸಭೆ ಭಾನುವಾರ ಗರೋಡಿಯ ಆವರಣದಲ್ಲಿ ನಡೆಯಿತು.

ಗರೋಡಿ ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷರಾದ ಸಂಜೀವ ಕೆ. ಪೂಜಾರಿ ದ್ವಾರಕ, ಬೈಲೂರು ಗುರಿಕಾರರಾದ ಬೈಲೂರು ದಿನೇಶ್ ಶೆಟ್ಟಿ, ಚಿಟ್ಪಾಡಿ ಮೇಲ್ಮನೆ ಸದಾನಂದ ಶೆಟ್ಟಿ, ನಾರಾಯಣ ಪೂಜಾರಿ ಕೊರಂಗ್ರಪಾಡಿ, ಉಪಾಧ್ಯಕ್ಷರುಗಳಾದ ಕಿರಣ್ ಕುಮಾರ್ ಬೈಲೂರು, ವಿಜಯ ಪೂಜಾರಿ ಬೈಲೂರು, ಸುಂದರ ಜೆ ಮಟ್ಟಿ ಬೈಲೂರು, ಸುಧಾಕರ ಡಿ ಪೂಜಾರಿ ಮಾರ್ಪಳ್ಳಿ, ಅರ್ಚಕ ಗರೋಡಿಮನೆ ಕೃಷ್ಣ ಸುವರ್ಣ, ಗರೋಡಿಅಭಿವೃದ್ಧಿ ಸಮಿತಿಯ ಕೋಶಾಧಿಕಾರಿ ಪ್ರಸಾದ್ ಜೆ ಶೆಟ್ಟಿ ಕೊರಂಗ್ರಪಾಡಿ ಗತ ವರ್ಷದ ಲೆಕ್ಕಪತ್ರವನ್ನು ಮಂಡಿಸಿದರು.

ಸಭೆಯಲ್ಲಿ ಕಳೆದ ವರ್ಷದ ಲೆಕ್ಕಪತ್ರವನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು. ನಂತರ ಇದೇ ಡಿಸೆಂಬರಲ್ಲಿ ನಡೆಯುವ ವಾರ್ಷಿಕ ನೇಮೋತ್ಸವನ್ನು ಆಚರಿಸುವ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಯಿತು ಕಾರ್ಯದರ್ಶಿ ಅಶೋಕ್ ಕುಮಾರ್ ಕೊರಂಗ್ರಪಾಡಿ ಪ್ರಸ್ತಾಪಿಸಿ ವಂದಿಸಿದರು. ಸಭೆಯಲ್ಲಿ ಸ್ಥಳ ವಂದಿಗರು ಗುರಿಕಾರರು ಕೂಡುಕಟ್ಟಿಗೆ ಸೇರಿದ ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!