ಕಾರ್ಗಿಲ್ ವಿಜಯಕ್ಕೆ 20 ರ ಸಂಭ್ರಮ
ಅದು 1999 ರ ಮೇ ತಿಂಗಳು,ಉಭಯ ರಾಷ್ಟ್ರಗಳ ಗಡಿ ನಿಯಂತ್ರಣಾ ರೇಖೆಯಲ್ಲಿ ಪಾಕಿಸ್ತಾನವು ತನ್ನ ಸೇನೆ ಹಾಗೂ ಭಯೋತ್ಪಾದಕರ ಸಹಾಯದಿಂದ ಭಾರತದ ಗಡಿಯೊಳಗೆ ನುಸುಳಿತ್ತು.
ಸದಾ ಶಾಂತಿ ಮಂತ್ರ ಜಪಿಸುತ್ತಿದ್ದ ಭಾರತೀಯರ ತಾಳ್ಮೆ ಕೆದಕಿದ ಪಾಕಿಸ್ತಾನ,ಭಾರತದ “ಆಪರೇಷನ್ ವಿಜಯ” ಕ್ಕೆ ಧೂಳಿಪಟವಾಗಿತ್ತು..ಆರಂಭದಲ್ಲಿ ಕಾಶ್ಮೀರಿ ಉಗ್ರಗಾಮಿಗಳ ಕಡೆ ಬೊಟ್ಟು ಮಾಡಿದ ಪಾಕಿಸ್ತಾನ, ಎಂದಿನಂತೆ ತನ್ನ ಮೇಲಿನ ಆರೋಪ ತಳ್ಳಿಹಾಕಿತ್ತು.ಆದರೆ ಯುದ್ಧಾನಂತರ ನಡೆದ ಸಾವು ನೋವುಗಳ ಲೆಕ್ಕಾಚಾರದಲ್ಲಿ ಪಾಕಿಸ್ತಾನದ ಸೇನೆ ಯುದ್ಧದಲ್ಲಿ ಭಾಗಿಯಾದ ಬಗ್ಗೆ ದೃಢೀಕರಿಸಿತ್ತು.
ಕಾಶ್ಮೀರದ ಕಾರ್ಗಿಲ್ ನಲ್ಲಿ,ಸುಮಾರು 2 ತಿಂಗಳುಗಳ ಕಾಲ ನಡೆದ ಈ ಸಶಸ್ತ್ರ ಯುದ್ದದಲ್ಲಿ ನಮ್ಮ ಯೋಧರ ಬಲಿದಾನ ವ್ಯರ್ಥವಾಗಲಿಲ್ಲ.ಭೂಸೇನೆ ಹಾಗೂ ವಾಯುಪಡೆಯ ಸಹಾಯದಿಂದ ಪಾಕ್ ಆಕ್ರಮಿಸಿಕೊಂಡಿದ್ದ ಬಹುತೇಕ ನೆಲೆಗಳನ್ನು ಮರು ವಶಪಡಿಸಿಕೊಳ್ಳಲಾಯಿತು.
ಇದೇ ಜುಲೈ 26 ರಂದು ಕಾರ್ಗಿಲ್ ವಿಜಯಕ್ಕೆ 20 ರ ಸಂಭ್ರಮ..
ಹೌದು.. ‘ಕಾರ್ಗಿಲ್ ವಿಜಯ್ ದಿವಸ್’ ಎಂದೇ ಆಚರಿಸಲ್ಪಡುವ
ಅಂದು,ಹುತಾತ್ಮ ಯೋಧರ ಸಮಾಧಿಗೆ ಪುಷ್ಪನಮನ ಸಲ್ಲಿಸಿ ಅವರ ತ್ಯಾಗ,ಬಲಿದಾನ ನೆನೆಸಿ ಕೃತಜ್ಞತೆ ಸಲ್ಲಿಸೋಣ..
ರೂಪೇಶ್ ಜೆ.ಕೆ