124 ಐಷಾರಾಮಿ ವಾಹನ ಜೀವಿತಾವಧಿ ತೆರಿಗೆ ಪಾವತಿಸದೆ ನೋಂದಣಿ- ಸಿಐಡಿ ತನಿಖೆಗೆ ಶ್ರೀರಾಮುಲು
ಬೆಂಗಳೂರು, ಮಾ.25: ತೆರಿಗೆ ಪಾವತಿಸದೆ ಐಷಾರಾಮಿ ಕಾರುಗಳಿಂದ ಸರಕಾರಕ್ಕೆ ನಷ್ಟ ಉಂಟು ಮಾಡುವವರ ವಿರುದ್ಧ ಸಿಐಡಿ ತನಿಖೆ ನಡೆಸಲಾಗುವುದು ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ.
ಈ ಬಗ್ಗೆ ಇಂದು ವಿಧಾನ ಪರಿಷತ್ ಕಲಾಪದಲ್ಲಿ ವಿಷಯ ಪ್ರಸ್ತಾಪಿಸಿದ ಸಾರಿಗೆ ಸಚಿವರು, 2015 ರಿಂದ ಇಲ್ಲಿಯವರೆಗೂ 124 ಐಷಾರಾಮಿ ವಾಹನಗಳು ಜೀವಿತಾವಧಿ ತೆರಿಗೆ ಪಾವತಿಸದೆ ನೋಂದಣಿ ಮಾಡಿಕೊಂಡಿದ್ದಾರೆ. ನೋಂದಾಣಿ ಆದ ವಾಹನಗಳ ದಾಖಲಾತಿ ಕಾಣೆಯಾಗಿವೆ. ಇದರಿಂದಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಲು ಕಷ್ಟ ಸಾಧ್ಯವಾಗಿದೆ.
ಈ ರೀತಿ ತೆರಿಗೆ ಪಾವತಿಸದೆ ನೋಂದಣಿ ಮಾಡಿಕೊಂಡು ಸರಕಾರಕ್ಕೆ ತೆರಿಗೆ ನಷ್ಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವ ಸಲುವಾಗಿ ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು. ಅಥವಾ ಸಿಐಡಿಯಿಂದ ತನಿಖೆ ನಡೆಸಬೇಕು. ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಪ್ರಕಟಿಸುವುದಾಗಿ ತಿಳಿಸಿದರು.