ಶ್ರೀರಾಮ್ ಫೌಂಡೇಶನ್:ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ವಿತರಣೆ
ಉಡುಪಿ : ಶಿಕ್ಷಣಕ್ಕಾಗಿ 3೦೦೦ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವನ್ನು ನೀಡಿ ಪ್ರೋತ್ಸಾಹಿಸುತ್ತಿರುವ ಶ್ರೀರಾಮ್ ಫೌಂಡೇಶನ್ ಮತ್ತು ಶ್ರೀ ರಾಮ್ ಟ್ರಾನ್ಸಪೋಟ್ಸ್ ಕಂಪನಿಯು ಸಮಾಜದ ಅಭಿವೃದಿಗೆ ಕೈಜೊಡಿಸುತ್ತಿದೆ. ಅದರಲ್ಲೂ ಘನ ವಾಹನ ಚಾಲಕರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪ್ರೋತ್ಸಾಹ ನೀಡುತ್ತಿರುವುದು ಅಭಿನಂದನಾರ್ಹವೆಂದು ಉಡುಪಿ ಡಿವೈಎಸ್ಪಿ ಜೈಶಂಕರ್ ಹೇಳಿದರು.
ಹೆತ್ತವರೊಂದಿಗೆ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ವಿತರಣೆಯಿಂದ ಮಕ್ಕಳಿಗೆ ತಮ್ಮ ಹೆತ್ತವರು ಎಷ್ಟು ಕಷ್ಟಪಟ್ಟು ವಿದ್ಯೆ ಕಲಿಸಯತ್ತಾರೆ ಎನ್ನುವ ಅರಿವು ಅವರಿಗೆ ತಿಳಿಯುತ್ತದೆಂದು ಅವರು ಉಡುಪಿಯ ಲಯನ್ಸ್ ಭವನದಲ್ಲಿ ನಡೆದ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಸಂಸ್ಥೆಯು ವ್ಯವಹಾರದೊಂದಿಗೆ ಶಿಕ್ಷಣಕ್ಕಾಗಿ ಉತ್ತೇಜನ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಇದನ್ನು ಉನ್ನತ ಶಿಕ್ಷಣಕ್ಕೆ ವಿಸ್ತರಿಸಲಾಗುವುದೆಂದು ಕಂಪನಿಯ ಉಪಾಧ್ಯಕ್ಷ ಶರಶ್ಚಂದ್ರ ಭಟ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಉಡುಪಿ ವಕೀಲರ ಸಂಘದ ಪ್ರಧಾನ ಕಾಯದರ್ಶಿ ರೊನಾಲ್ಡ್ ಪ್ರವೀಣ್ ಕುಮಾರ್, ಉದ್ಯಾ ವರ ನಾಗೇಶ್ ಕುಮಾರ್, ಅಲೆವೂರು ಹರೀಶ್ ಕಿಣಿ, ಉಮೇಶ ನಾಯ್ಕ್ , ಕುಯಿಲಾಡಿ ಸುರೇಶ ನಾಯಕ್,ರಮೇಶ್ ಕೋಟ್ಯಾನ್, ಪ್ರಶಾಂತ್ ನೇಜಾರ್,ಶೇಕ್ ನಝೀರ್ ಕಾಪು,ಗಿರಿಧರ್ ಪ್ರಭು, ಉಪಸ್ಥಿತರಿದ್ದರು. ರೀಜಿನಲ್ ಬಿಸಿನೆಸ್ ಹೆಡ್ ಸದಾಶಿವ ಅಮೀನ್ ಸ್ವಾಗತಿಸಿ ,ಚೇತನ್ ಅರಸ್ ವಂದಿಸಿ,ದಯಾನಂದ್ ಉಪ್ಪೂರು ಕಾರ್ಯಕ್ರಮ ನಿರ್ವಹಿಸಿದರು. 259 ವಿದ್ಯಾ ರ್ಥಿಗಳಿಗೆ ವಿದ್ಯಾರ್ಥಿವೇತನವಿತರಿಸಲಾಯಿತು.