ವಿದ್ಯಾರ್ಥಿಗಳು ಜೀವನದಲ್ಲಿ ಅಕ್ಷರಸ್ಥರಾದರೆ ಸಾಲದು, ಶಿಕ್ಷಿತರಾಗಬೇಕು:ಗಿಲ್ಬರ್ಟ್
ಉಡುಪಿ:ಉನ್ನತಿ ಕ್ಯಾರಿಯರ್ ಅಕಾಡೆಮಿ,ಉಡುಪಿ ವತಿಯಿಂದ ತನ್ನ ಕಛೇರಿಯಲ್ಲಿ ಇಂದು 73ನೇ ಸ್ವಾತಂತ್ರ ದಿನಾಚರಣೆ ಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಅಕಾಡೆಮಿಯ ವಿದ್ಯಾರ್ಥಿಗಳಿಂದ ದೇಶ ಭಕ್ತಿ ಗೀತೆ, ನೃತ್ಯ, ಸ್ವಾತಂತ್ರ ಸಂಗ್ರಾಮಕ್ಕೆ ಸಂಬಂಧಿಸಿದ ಕ್ವಿಜ್ ಸ್ಪರ್ಧೆ, ಕೋಲಾಜ್ ತಯಾರಿಸುವ ಸ್ಪರ್ಧೆ ಹೀಗೆ ಹತ್ತಾರು ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಯ್ತು.
ಈ ಕಾರ್ಯಕ್ರಮದಲ್ಲಿ ನಿವೃತ್ತ ಸೈನ್ಯಾಧಿಕಾರಿಗಳಾದ ಗಿಲ್ಬರ್ಟ್ ಬ್ರಗಾಂಝ ಅವರು ಭಾಗವಹಿಸಿ ಮಾತನಾಡುತ್ತಾ, “ಇಂದಿನ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಕೇವಲ ಅಕ್ಷರಸ್ಥರಾದರೆ ಸಾಲದು, ಬದಲಿಗೆ ಶಿಕ್ಷಿತರಾಗಬೇಕೆಂದು ತಿಳಿಸಿದರು. ಭಾರತೀಯ ಸೇನೆಯ ಸೇವೆ ಮಾಡುವ ಸಂದರ್ಭವನ್ನು ನೆನೆದು ಭಾವುಕರಾದ ಅವರು, ಯುವಕರೆಲ್ಲರೂ ಭಾರತೀಯ ಸೇನೆ ಸೇರುವ ಅವಕಾಶವನ್ನು ಪಡೆಯಲು ಮುಂದೆ ಬರಬೇಕೆಂದರು”. ಇದೇ ಸಂದರ್ಭದಲ್ಲಿ ಮಾತನಾಡಿದ ಉನ್ನತಿ ಅಕಾಡೆಮಿಯ ಸ್ಥಾಪಕರಾದ ಪ್ರೇಮ್ ಪ್ರಸಾದ್ ಶೆಟ್ಟಿ ಮಾತನಾಡಿ,” ನಮ್ಮ ದೇಶದ ಸ್ವತಂತ್ರೋತ್ಸವ ಆಚರಣೆ ನಮಗೆ ನಮ್ಮ ಸ್ವಾತಂತ್ರ ಹೋರಾಟಗಾರರನ್ನು ನೆನೆಯಲು ಒಂದು ಸದಾವಕಾಶ.ಅವರ ತ್ಯಾಗ ಬಲಿದಾನಗಳ ಬಗ್ಗೆ ಹಾಗೂ ದೇಶದ ಇತಿಹಾಸದ ಬಗ್ಗೆ ನಮ್ಮ ಯುವ ಜನತೆ ತಿಳಿದುಕೊಂಡು ಮುಂದಿನ ದಿನಗಳಲ್ಲಿ ಸತ್ಪ್ರಜೆಗಳಾಗಿ ಬದುಕಲು ಪ್ರೇರಣೆ ನೀಡಲು ಆಯೋಜಿಸಲಾಗಿದೆ’ ಎಂದರು. ಕಾರ್ಯಕ್ರಮದಲ್ಲಿ ಉನ್ನತಿ ಅಕಾಡೆಮಿಯ ನಿರ್ದೇಶಕಿ ಪೌರ್ಣಮಿ ಪ್ರೇಮ್ ಶೆಟ್ಟಿ, ಆಡಳಿತಾಧಿಕಾರಿ ರಾಘವೇಂದ್ರ, ಭರತ್ ಕುಮಾರ್, ತರಬೇತುದಾರರು, ಪೋಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.