ಜನಪರ ಚಳವಳಿಗಳು ಶ್ರದ್ಧಾಂಜಲಿ ಆಚರಿಸುತ್ತಿದೆ : ಜಯನ್ ಮಲ್ಪೆ

ಉಡುಪಿ : ಸ್ವಾತಂತ್ರ್ಯ ಪೂರ್ವಕಾಲದ ಹೋರಾಟಗಳು, ಆಶೋತ್ತರಗಳು, ಸ್ವಾತಂತ್ಯಾದ ನಂತರದ ನಮ್ಮ ಸಂಘರ್ಷ, ನಿರೀಕ್ಷೆಗಳು ಮತ್ತು ಈ ಹೊತ್ತಿನ ವಾಸ್ತವತೆಗಳು ಒಂದು ಬಗೆಯ ತಲ್ಲಣಕ್ಕೆ ಮತ್ತು ಕಳವಳಕ್ಕೆ ಕಾರಣವಾಗಿ ಹತಾಶೆ ಆವರಿಸಿ ಬಹುತೇಕ ಜನಪರ ಚಳವಳಿಗಳು ಶ್ರದ್ಧಾಂಜಲಿ ಆಚರಿಸುತ್ತಿದೆ ಎಂದು ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ ಹೇಳಿದ್ದಾರೆ.

ಅವರು ಗುರುವಾರ ಉದ್ಯಾವಾರದ ಫ್ರಂಡ್ಸ್ ಸರ್ಕಲ್ ಉದ್ಯಾವರ ಇದರ ವಾರ್ಷಿಕೋತ್ಸವ ಮತ್ತು ಸ್ವಾತಂತ್ರೊತ್ಸವದ ಪ್ರಯುಕ್ತ ಹಾಲಿಮಾಬಿ ಸಭಾಂಗಣದಲ್ಲಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಮುಖ್ಯಅಥಿತಿಯಾಗಿ ಮಾತನಾಡುತ್ತಾ, ಹೊಸ ಆರೋಗ್ಯಕರ ಮತ್ತು ಎಲ್ಲರನ್ನೂ ಒಳಗೊಳ್ಳುವ ಸಮಾಜ ವ್ಯವಸ್ಥೆಯನ್ನು ನಿರ್ಮಿಸಲು,ವಿಶಾಲ ಚಳವಳಿ ಅತ್ಯಗತ್ಯ.ಆದರೆ ತತ್ವದ ಆಧಾರದಲ್ಲಿ ಚಳವಳಿ ರೂಪುಗೊಳ್ಳಬೇಕೇ ಹೊರತು, ಜನವಿಭಾಗಗಳನ್ನು ಆಧಾರವಾಗಿಸಿಕೊಂಡು ಚಳವಳಿ ಕಟ್ಟುವುದು ಸರಿಯಲ್ಲ ಎಂದ ಅವರು ರೈತ ಚಳವಳಿಯನ್ನು, ದಲಿತ ಚಳವಳಿಯನ್ನು, ಪರಿಸರ ಚಳವಳಿಯನ್ನು, ಮಹಿಳಾ ಚಳವಳಿಯನ್ನು, ಕಾರ್ವಿಕ ಚಳವಳಿಯನ್ನು, ಆದಿವಾಸಿ ಚಳವಳಿಯನ್ನು, ಅಸಂಘಟಿತ ಕಾರ್ಮಿಕ ಚಳವಳಿಯನ್ನು ಒಂದುಗೂಡಿಸಿ ಸಮಾಜವಾದಿ ಚಳವಳಿಯನ್ನು ರೂಪಿಸಬೇಕಿದೆ ಎಂದರು.

ಸಮಾರಂಭದ ಅದ್ಯಕ್ಷತೆಯನ್ನು ಸಂಘದ ನಿರ್ದೇಶಕರಾದ ಉದ್ಯಮಿ ಹಾಗೂ ಸಮಾಜ ಸೇವಕ ಉದ್ಯಾವಾರದ ಅಬ್ದುಲ್ ಜಲೀಲ್ ಸಾಹೇಬ್ ವಹಿಸಿದ್ದರು. ವೇದಿಕೆಯಲ್ಲಿಮಾಜಿ ಸಚಿವ ವಿನಯ ಕುಮಾರ್ ಸೊರಕೆ,ಕಲ್ಯಾಣಪುರ ಮಿಲಾಗ್ರೀಸ್ ಕಾಲೇಜಿನ ಪ್ರಾಂಶುಪಾಲರಾದ ವಿನ್ಸಂಟ್ ಆಳ್ವ, ಬ್ರಹ್ಮಾವರ ಎಸ್.ಎಮ್.ಎಸ್. ಕಾಲೇಜಿನ ಪ್ರಾಂಶುಪಾಲರಾದ ಅಭಿಲಾಷ್, ಎಸ್ ಉದ್ಯಾವರ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ಸುಗಂಧಿ ಶೇಖರ್, ಸಂಸ್ಥೆಯ ನಿರ್ದೇಶಕರುಗಳಾದ ಮಹಮ್ಮದ್ ನಯಾಜ್, ಶರತ್ ಕುಮಾರ್, ಚಂದ್ರಾವತಿ ಭಂಡಾರಿ ಮುಂತ್ತಾದವರು ಉಪಸ್ಥಿತರಿದ್ದರು.

ತಿಲಕ್‌ರಾಜ್ ಸ್ಯಾಲಿಯಾನ್ ಸ್ವಾಗತಿಸಿದರು ರಂಗಕರ್ಮಿ ಪ್ರಗತಿಪರ ಚಿಂತಕ ಉದ್ಯಾವರ ನಾಗೇಶ್ ಕುಮಾರ್ ಪ್ರಾಸ್ತವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಬಳಿಕ ನೂರಾರು ಮಕ್ಕಳಿಗೆ ಉಚಿತ ಬಟ್ಟೆ,ವಿದ್ಯಾರ್ಥಿ ವೇತನ ಹಾಗೂ ವೈದ್ಯಕೀಯ ನೆರವು ಹಂಚಲಾಯಿತು. ಬಳಿಕ ಮನರಂಜನ ಕಾರ್ಯಕ್ರಮ ಜರಗಿತು.

Leave a Reply

Your email address will not be published. Required fields are marked *

error: Content is protected !!