ಬೆಳ್ತಂಗಡಿ: ಬಾಂಜಾರು ಮಲೆ ಮತಗಟ್ಟೆಯಲ್ಲಿ ಶೆ.100 ಮತದಾನ

ಬೆಳ್ತಂಗಡಿ ಏ.26: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ನೆರಿಯ ಗ್ರಾಮದ ಅತ್ಯಂತ ದುರ್ಗಮ ಪ್ರದೇಶವಾದ ಬಾಂಜಾರು ಮಲೆ ಮತಗಟ್ಟೆಯಲ್ಲಿ  ಶೇ. 100 ಮತದಾನವಾದ ದಾಖಲೆ ನಿರ್ಮಾಣವಾಗಿದೆ.

ಆದಿವಾಸಿ ಮಲೆಕುಡಿಯ ಸಮುದಾಯ ವಾಸಿಸುತ್ತಿರುವ ಬಾಂಜಾರು ಮಲೆ ಮತಗಟ್ಟೆ ಸಂಖ್ಯೆ 86ರಲ್ಲಿ 111 ಮಂದಿ ಮತದಾರರಿದ್ದು, ಎಲ್ಲರೂ ಮತದಾನ ಮಾಡುವ ಮೂಲಕ ಈ ದಾಖಲೆ ನಿರ್ಮಾಣವಾಗಿದೆ. ಇಲ್ಲಿ 51 ಮಂದಿ ಪುರುಷರು ಮತ್ತು 60 ಮಂದಿ ಮಹಿಳಾ ಮತದಾರರು ಇದ್ದು ಎಲ್ಲರೂ ಮತ ಚಲಾಯಿಸಿದ್ದಾರೆ. 

ಅನನ್ಯ ಮತಗಟ್ಟೆಯೆಂದು ಗುರುತಿಸಲಾಗಿದ್ದ ಬಾಂಜಾರು ಮಲೆ ಮತಗಟ್ಟೆಯಲ್ಲಿ ಶೇ 100 ಮತದಾನ ವಾಗುವಂತೆ ನೋಡಿಕೊಳ್ಳುವ ಉದ್ದೇಶದಿಂದ ಅಧಿಕಾರಿಗಳು ವಿಶೇಷ ಪ್ರಯತ್ನ ನಡೆಸಿದ್ದರು. ಇದರೊಂದಿಗೆ ಇಲ್ಲಿನ ಮತದಾರರೂ ಸ್ಪಂದಿಸಿ ಶೇ100 ಮತ ಚಲಾವಣೆಯಾಗುವ ಮೂಲಕ ದಾಖಲೆ ನಿರ್ಮಾಣವಾಗಿದೆ.

Leave a Reply

Your email address will not be published. Required fields are marked *

error: Content is protected !!