ಕಾರ್ಮಿಕರಿಗೆ ಗುಡ್ ನ್ಯೂಸ್, ಇಪಿಎಫ್ ಬಡ್ಡಿದರದಲ್ಲಿ ಏರಿಕೆ!
ನವದೆಹಲಿ: 2018-19ರ ಆರ್ಥಿಕ ವರ್ಷದಲ್ಲಿ ಕಾರ್ಮಿಕರ ಭವಿಷ್ಯ ನಿಧಿ (ಇಪಿಎಫ್) ಠೇವಣಿಗಳ ಮೇಲೆ ಶೇ. 8.65ರಷ್ಟು ಬಡ್ಡಿ ನೀಡುವ ಪ್ರಸ್ತಾವನೆಗೆ ಕೇಂದ್ರ ವಿತ್ತ ಸಚಿವಾಲಯ ಒಪ್ಪಿಗೆ ನೀಡಿದೆ.
ಲೆಕ್ಕಾಚಾರಗಳ ಪ್ರಕಾರ 3 ವರ್ಷಗಳಲ್ಲಿ ಬಡ್ಡಿ ಹೆಚ್ಚಳವಾಗುತ್ತಿರುವುದು ಇದೇ ಮೊದಲು. ೧೦೧೯ ರ ಫೆಬ್ರವರಿಯಲ್ಲಿ, ಇಪಿಎಫ್ಒ ಬಗ್ಗೆ ತೀರ್ಮಾನ ಕೈಗೊಳ್ಳುವ ಟಸ್ಟಿಗಳ ಕೇಂದ್ರೀಯ ಮಂಡಳಿ (ಸಿಬಿಟಿ), ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ನೇತೃತ್ವದಲ್ಲಿ ಸಭೆ ಸೇರಿ, 2018-19ರ ವಿತ್ತೀಯ ವರ್ಷದ ಇಪಿಎಫ್ ಠೇವಣಿಗಳ ಮೇಲಿನ ಬಡ್ಡಿದರವನ್ನು ಶೇ. 8.65ಕ್ಕೆ ಹೆಚ್ಚಿಸುವ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸುವ ನಿರ್ಧಾರ ತೆಗೆದುಕೊಳ್ಳಲಾಗಿತ್ತು.
ಸರಕಾರದ ನಿರ್ಧಾನ ಅನುಷ್ಠಾನಕ್ಕೆ ಬಂದರೆ ಶೇ. 8.8 ಇದ್ದ ಬಡ್ಡಿದರ ಶೇ. 8.65ಕ್ಕೆ ಏರಿಕೆಯಾದಂತೆ ಆಗುತ್ತದೆ.