‘ಕಾಂಗ್ರೆಸ್‌ ಡಿಎನ್‌ಎ ಪಾಕಿಸ್ತಾನ ಪರವಾಗಿದೆ’- ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್

ಭೋಪಾಲ್, ಜ 24 ಕಾಂಗ್ರೆಸ್‌ನ ಡಿಎನ್‌ಎ ಪಾಕಿಸ್ತಾನ ಪರವಾಗಿದೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಹೇಳಿದ್ದಾರೆ. ಸರ್ಜಿಕಲ್ ಸ್ಟ್ರೈಕ್ ಕುರಿತು ದಿಗ್ವಿಜಯ್ ಸಿಂಗ್ ಅವರ ಹೇಳಿಕೆಗೆ ಮಂಗಳವಾರ ತಿರುಗೇಟು ನೀಡಿದ ಅವರು, ಸರ್ಜಿಕಲ್ ಸ್ಟ್ರೈಕ್, ರಾಮನ ಅಸ್ತಿತ್ವದ ಬಗ್ಗೆ ಕಾಂಗ್ರೆಸ್‌ನವರು ಆಗಾಗ ಪುರಾವೆಗಳನ್ನು ಕೇಳುತ್ತಲೇ ಇರುತ್ತಾರೆ. ಭಾರತ್ ಜೋಡೋ ಯಾತ್ರೆ ವೇಳೆಯೂ ದಿಗ್ವಿಜಯ್ ಸಿಂಗ್ ಅದೇ ರೀತಿ ಮಾಡಿದ್ದಾರೆ. ಕಾಂಗ್ರೆಸ್ ಡಿಎನ್‌ಎ ಪಾಕಿಸ್ತಾನದ ಪರವಾಗಿರುವುದರಿಂದಲೇ ಅವರು ಹಾಗೆ ಕೇಳುತ್ತಿರುತ್ತಾರೆ ಎಂದರು.

ಸೈನಿಕರ ಮನೋಸ್ಥೈರ್ಯ ಕುಗ್ಗಿಸುವ ಪಾಪ ದಿಗ್ವಿಜಯ್ ಸಿಂಗ್ ಮಾಡುತ್ತಿದ್ದಾರೆ. ಪಾಕಿಸ್ತಾನದೊಂದಿಗೆ ನಿಂತಿದ್ದಾರೆ ಎಂಬುದನ್ನು ಅವರ ಹೇಳಿಕೆ ತೋರಿಸುತ್ತದೆ. ರಾಹುಲ್ ಗಾಂಧಿ ಕೂಡಾ ಸೇನೆಯ ಬಲದ ಬಗ್ಗೆ ಪ್ರಶ್ನಿಸುತ್ತಾರೆ. ನಿಜವಾದ ದೇಶಭಕ್ತಿ ಇದಲ್ಲ ಎಂದು ಕಿಡಿ ಕಾರಿದರು.ಭಾರತ್ ಜೋಡೋ ಯಾತ್ರೆಯಲ್ಲಿ ತುಕ್ಡೆ-ತುಕ್ಡೆ ಗ್ಯಾಂಗ್ ಸೇರಿಕೊಂಡಿದೆ. ದಿಗ್ವಿಜಯ್ ಸಿಂಗ್ ಮಧ್ಯಪ್ರದೇಶದಲ್ಲಿ ಸರ್ಕಾರ ನಡೆಸುತ್ತಿದ್ದ ವೇಳೆ ರಾಜ್ಯದಲ್ಲಿ ಸಿಮಿ ಸಂಘಟನೆಯ ಭದ್ರಕೋಟೆಯೇ ನಿರ್ಮಾಣವಾಗಿತ್ತು ಎಂದವರು ಇದೇ ವೇಳೆ ವಾಗ್ದಾಳಿ ನಡೆಸಿದರು.ನಿನ್ನೆ ನಡೆದ ಭಾರತ್ ಜೋಡೋ ಯಾತ್ರೆ ವೇಳೆ ಮಾತನಾಡಿದ್ದ ದಿಗ್ವಿಜಯ್ ಸಿಂಗ್, ಸರ್ಜಿಕಲ್ ಸ್ಟ್ರೈಕ್‌ಗಳ ಬಗ್ಗೆ ಮಾತನಾಡುವ ಕೇಂದ್ರ ನಾಯಕರು ಇದಕ್ಕೆ ಯಾವುದೇ ಪುರಾವೆಗಳನ್ನು ಒದಗಿಸಿಲ್ಲ. ಸುಳ್ಳಿನ ಮೇಲೆ ಮೋದಿ ಸರ್ಕಾರ ಆಡಳಿತ ನಡೆಸುತ್ತಿದೆ ಎಂದಿದ್ದರು.

Leave a Reply

Your email address will not be published. Required fields are marked *

error: Content is protected !!