ಸುನಿಲ್ ಕುಮಾರ್ ಹೇಳಿಕೆಯ ಹಿಂದೆ ಖಾಸಗಿ ಬಸ್ ಮಾಫಿಯಾ ಲಾಭಿ- ಅನಿತಾ

ಖಾಸಗಿ ಬಸುಗಳಲ್ಲೂ ಮಹಿಳೆಯರಿಗೆ ಉಚಿತ ಪ್ರಯಾಣ ಅವಕಾಶ ನೀಡಬೇಕು ಎಂದು ಕಾರ್ಕಳ ಶಾಸಕ ಸುನಿಲ್ ಕುಮಾರ್ ಸರಕಾರವನ್ನು ಒತ್ತಾಯಿಸುತ್ತಿದ್ದಂತೆ, ಅವರ ಹೇಳಿಕೆ ಬೆಂಬಲಿಸಿ ರಾಜ್ಯ ಖಾಸಗಿ ಬಸ್ ಮಾಲಕರ ಸಂಘಗಳ ಒಕ್ಕೂಟದ ರಾಜ್ಯಾಧ್ಯಕ್ಷ ಮತ್ತು ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿಕೆಯು ಖಾಸಗಿ ಬಸ್ ಮಾಫಿಯಕ್ಕೆ ಲಾಭ ಮಾಡಿಕೊಡುವ ಹುನ್ನಾರ ಇದೆ ಎಂದು ಕಾರ್ಕಳ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಅನಿತಾ ಡಿಸೋಜ ಆರೋಪಿಸಿದ್ದಾರೆ.

ಕರಾವಳಿ ಸೇರಿದಂತೆ ರಾಜ್ಯದ ಕೆಲವೊಂದು ಜಿಲ್ಲೆಗಳಲ್ಲಿ ಖಾಸಗಿ ಬಸ್ ಸಂಚಾರ ಇದ್ದು, ಸರಕಾರಿ ಬಸ್ಸುಗಳಿಗೆ ಕೊಡುವ ಅನುಕೂಲ ಖಾಸಗಿ ಬಸ್ಸುಗಳಿಗೂ ಸರಕಾರ ನೀಡಬೇಕು. ಹಣದ ರೂಪದಲ್ಲಾದರೂ ಖಾಸಗಿ ಬಸ್ಸುಗಳಿಗೆ ಅನುಕೂಲ ಮಾಡಿಕೊಟ್ಟರೆ, ಮಹಿಳೆಯರ ಉಚಿತ ಪ್ರಯಾಣಕ್ಕೆ ನಾವು ಸಿದ್ಧ ಎಂದು ಬಸ್ಸು ಮಾಲಕರ ಸಂಘದ ರಾಜ್ಯಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಇತ್ತೀಚಿಗೆ ಹೇಳಿಕೆ ನೀಡಿದ್ದರು.

ಮಾಜಿ ಸಚಿವ, ಹಾಲಿ ಶಾಸಕ ಸುನಿಲ್ ಕುಮಾರ್ ಹೇಳಿಕೆ ಬೆನ್ನಲ್ಲೇ ಕುಯಿಲಾಡಿ ಸುರೇಶ್ ಕುಮಾರ್ ರವರ ಹೇಳಿಕೆ ಬಸ್ ಮಾಫಿಯಾಗೆ ಸರಕಾರದ ಪೆಟ್ರೋಲ್, ಡೀಸೆಲ್ ಸಬ್ಸಿಡಿ ಅಥವಾ ಉಚಿತ ಟಿಕೆಟ್ ಗಾಗಿ ಇಂತಿಷ್ಟು ಅನುದಾನವನ್ನು ಕೊಡಿಸಿ ಖಾಸಗಿ ಬಸ್ ಮಾಫಿಯಾಕ್ಕೆ ಲಾಭ ಮಾಡಿಕೊಡುವ ಲಾಭ ಮಾಡಿಕೊಡುವ ಹುನ್ನಾರದಿಂದಲೇ ಶಾಸಕ ಸುನಿಲ್ ಕುಮಾರ್ ಈ ಹೇಳಿಕೆ ನೀಡಿದ್ದಾರೆ ಎಂಬ ಸಂಶಯ ಮೂಡುತ್ತಿದೆ. ಶಾಸಕ ಸುನಿಲ್ ಕುಮಾರ್ ರವರಿಗೆ ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆ ತನ್ನ ಜಿಲ್ಲೆಯ ಜನರಿಗೂ ಸಿಗಬೇಕು ಎಂಬ ಪ್ರಾಮಾಣಿಕ ಕಾಳಜಿ ಇದ್ದಿದ್ದರೆ, ಕರಾವಳಿಯಲ್ಲಿ ಖಾಸಗಿಯಷ್ಟೇ ಪ್ರಮಾಣದ ಸರಕಾರಿ ಬಸ್ ಗಳು ಓಡಿಸುವಂತೆ ಸರಕಾರವನ್ನು ಒತ್ತಾಯಿಸುತ್ತಿದ್ದರು. ಜಿಲ್ಲೆಯ ಇಬ್ಬರು ಬಿಜೆಪಿ ನಾಯಕರುಗಳು ಖಾಸಗಿಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅಗ್ರಹಿಸುತ್ತಿರುವುದು ಜನಪರವಾದ ಕಾಳಜಿಯಿಂದ ಅಲ್ಲ. ಬದಲಾಗಿ ಇದರ ಹಿಂದೆ ದೊಡ್ಡ ಹುನ್ನಾರವೇ ಇದೆ ಎಂದು ಜನರು ಅರ್ಥ ಮಾಡಿಕೊಳ್ಳಬೇಕು.

ಚುನಾವಣಾ ಸಮಯದಲ್ಲಿ ಕಾಂಗ್ರೆಸ್ ಘೋಷಿಸಿದ ಗ್ಯಾರಂಟಿಗಳು ಈಗಾಗಲೇ ಜಾರಿಯಾಗಿದ್ದು, ಬಿಜೆಪಿ ಜಿಲ್ಲಾಧ್ಯಕ್ಷರು ಕೆಪಿಸಿಸಿ ಕಚೇರಿಯ ಮುಂದೆ ತಲೆ ಬೋಳಿಸಿ ಕುಳಿತುಕೊಳ್ಳಲು ಸಿದ್ದರಾಗಲಿ ಎಂದು ಅನಿತಾ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!