ಈಜಲು ತೆರಳಿದ ಯುವಕರು ಸಮುದ್ರಪಾಲು

ಮಂಗಳೂರು: ನಿಷೇಧಿತ ಸ್ಥಳದಲ್ಲಿ ಈಜಲು ತೆರಳಿದ ಇಬ್ಬರು ಯುವಕರು ಸಮುದ್ರಪಾಲಾಗಿರುವ ಘಟನೆ ಮಂಗಳೂರಿನ ಸಸಿಹಿತ್ಲುವಿನಲ್ಲಿ ನಡೆದಿದೆ.

ಕಾವೂರಿನ ಗುರುಪ್ರಸಾದ್ (28) ಹಾಗೂ ಬಜ್ಪೆಯ ಸಿದ್ಧಾರ್ಥ ನಗರದ ನಿವಾಸಿ ಸುಜಿತ್ (32) ಮೃತ ದುರ್ದೈವಿಗಳು, ಇವರೊಡನೆ ಈಜಲು ತೆರಳಿದ್ದ ಇನ್ನಿಬ್ಬರು ಯುವಕರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಮೃತ ಸುಚಿತ್ ಮಂಗಳೂರಿನಲ್ಲಿ ಐಟಿಐ ವಿದ್ಯಾರ್ಥಿಯಾಗಿದ್ದರೆ, ಗುರುಪ್ರಸಾದ್ ಕಾವೂರಿನಲ್ಲಿ ಕೆಲಸದಲ್ಲಿದ್ದನು. ಬಜ್ಪೆ ಮೂಲದ ಸೃಜನ್ ಹಾಗೂ ಕಾರ್ತಿಕ್ ಎಂಬುವವರನ್ನು ರಕ್ಷಣೆ ಮಾಡಲಾಗಿದ್ದು ಇದರಲ್ಲಿ ಸೃಜನ್ ತೀವ್ರ ಅಸ್ವಸ್ಥರಾಗಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಯುವಕರು ಸಮುದ್ರಪಾಲಾಗುತ್ತಿದ್ದದ್ದನ್ನು ಗಮನಿಸಿದ ಪುಟ್ಟ ಮಗುವೊಂದು ಬೊಬ್ಬೆ ಹಾಕಿದ್ದನ್ನು ಗಮನಿಸಿದ ಸ್ಥಳೀಯ ಗಂಗಾಂಧರ ಪುತ್ರನ್ ಸಾಹಸ ಮಾಡಿ ಇಬ್ಬರನ್ನು ರಕ್ಷಿಸಿದ್ದಾರೆ. ಸ್ಥಳೀಯರು ಹಲವು ಬಾರಿ ಅವರಿಗೆ ಎಚ್ಚರಿಕೆ ನೀಡಿದ್ದರೂ ಗಮನಿಸದೆ ಸಮುದ್ರಕ್ಕಿಳಿದು ಅಪಾಯಕ್ಕೆ ಸಿಕ್ಕಿ ಇಬ್ಬರು ಯುವಕರು ಪ್ರಾಣ ಕಳೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!