ಮಾದಕ ‌ವ್ಯಸನದಿಂದ ಯುವ ಶಕ್ತಿ ತಪ್ಪುದಾರಿಗೆ‌ ಇಳಿಯುತ್ತಿದೆ : ಮಧು ಟಿ.ಎಸ್

ಉಡುಪಿ: ಪ್ರತಿ ಮೂರು ನಿಮಿಷಕ್ಕೆ ಒಂದರಂತೆ ಅಪಘಾತದಿಂದಾಗಿ ಸಾವು ಸಂಭವಿಸುತ್ತಿದ್ದು ಇದು ಗಂಭಿರ ವಿಷಯವಾಗಿದೆ. ಈ ಅಫಘಾತಗಳಿಗೆ ಸಂಚಾರಿ ನಿಯಮಗಳ ಉಲ್ಲಂಘನೆ ಪ್ರಮುಖ ಕಾರಣವಾಗಿದೆ. ಪ್ರಾಯ ಪ್ರಬುದ್ಧರಾಗದ ಮಕ್ಕಳಿಗೆ ವಾಹನ ಚಾಲನೆಗೆ ಅವಕಾಶ ನೀಡುವುದು ಆಗಾಗ ಕಂಡುಬರುತ್ತದೆ ಇಂತಹ ಸಂದರ್ಭದಲ್ಲಿ ನಡೆಯುವ ಅಫಘಾತದ ಹೊಣೆಗಾರಿಕೆ  ಮಕ್ಕಳ ಪಾಲಕರ ಮೇಲೆ ಎಂದು ನ್ಯಾಯಾಲಯ ಅನೇಕ ಬಾರಿ ತೀರ್ಪು ನೀಡಿದೆ ಎಂದು ಮಲ್ಪೆ ಠಾಣಾಧಿಕಾರಿ ಮಧು ಟಿ.ಎಸ್. ಅವರು ರಸ್ತೆ ಸುರಕ್ಷತೆ ಮತ್ತು ಮಾದಕ ದೃವ್ಯ ವ್ಯಸನದ ಕುರಿತ  ಜಾಗೃತಿ ಕಾರ್ಯಕ್ರಮವನ್ನು ಸಾಲಿಹಾತ್ ಶಿಕ್ಷಣ ಸಂಸ್ಥೆಗಳು ಮತ್ತು ಮಲ್ಪೆ ಆರಕ್ಷಕ ಠಾಣೆ ಸಂಯುಕ್ತವಾಗಿ  ಗುರುವಾರ
ನಡೆದ ಕಾರ್ಯಕ್ರದಲ್ಲಿ ಭಾಗವಹಿಸಿ ಮಾತನಾಡಿದರು.
ವಿಧ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಠಾಣಾಧಿಕಾರಿ ಮಧು .  ಮಾದಕ ‌ದ್ರವ್ಯದಿಂದಾಗಿ ಯುವ ಶಕ್ತಿ ತಪ್ಪುದಾರಿಗೆ‌ ಇಳಿಯುತ್ತಾರೆಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಾಲಿಹಾತ್ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷರಾದ ಇದ್ರೀಸ್ ಹೂಡೆ ಸಮಾಜ ಮತ್ತು ದೇಶದ ಉಜ್ವಲ ಭವಿಷ್ಯದ ದೃಷ್ಟಿಯಿಂದ ವಿಧ್ಯಾರ್ಥಿಗಳು ಸಂಚಾರಿ ನಿಯಮಗಳ ಪಾಲನೆ ಮತ್ತು ಮಾದಕ ದೃವ್ಯಗಳ ವಿರುದ್ಧ ಜಾಗೃತಿ ಮೂಡಿಸುವಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು.
 
ಇಲ್ಲಿ ವ್ಯಕ್ತವಾದ ವಿಷಯಗಳನ್ನು ತಮ್ಮ ಮನೆಯವರೊಂದಿಗೆ ಹಂಚಿಕೊಳ್ಳಿ ಎಂದ ಅವರು ಒರ್ವ ಮನೆ ಮುಖ್ಯಸ್ಥ ಸಾವಿಗಿಡಾದರೆ ಅಥವಾ ತನ್ನ ದೈಹಿಕ ಶಕ್ತಿ ಕಳೆದುಕೊಂಡರೆ ಕುಟುಂಬ ದುಃಸ್ಥಿತಿಯ ಕಡೆಗೆ ಹೋಗುತ್ತದೆ, ಹಾಗೆಯೇ ತಂದೆ ತಾಯಿಯಂದಿರು ಮಕ್ಕಳನ್ನು ಅತೀವ ಪ್ರೀತಿಸುತ್ತಾರೆ, ಅವರಲ್ಲಿ ತಮ್ಮ ಭವಿಷ್ಯ ಕಾಣುತ್ತಾರೆ ಆ ಮಕ್ಕಳು ಅಪಘಾತ ಅಥವಾ ಮಾದಕ ದ್ರವ್ಯಗಳ ವ್ಯಸನಕ್ಕೆ ಬಲಿಯಾದರೆ ಅವರ ಪ್ರೀತಿ ಮತ್ತು ಭವಿಷ್ಯದ ಕನಸುಗಳು ನುಚ್ಚು ನೂರಾಗುತ್ತದೆ. ಸಮಾಜದ ಸಂತುಲನ ಬಿಗಡಾಯಿಸುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಾಲಿಹಾತ್ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಅಸ್ಲಮ್ ಹೈಕಾಡಿ, ಸಾಲಿಹಾತ್ ಪ್ರೌಢಶಾಲಾ ಮುಖ್ಯಸ್ಥೆ ಶ್ರಿಮತಿ ಸುನಂದಾ, ಹಿರಿಯ ಪ್ರಾಥಮಿಕ ಶಾಲಾ ಮುಖ್ಯಸ್ಥೆ ಶ್ರಿಮತಿ ಲವಿನಾ ಕ್ಲಾರ ಇನ್ನಿತರರು ಉಪಸ್ಥಿತರಿದ್ದರು. ಕಾರ್ಯಕ್ರಮ ಸಾಲಿಹಾತ್ ಸಭಾಂಗಣದಲ್ಲಿ ನಡೆಯಿತು.

Leave a Reply

Your email address will not be published. Required fields are marked *

error: Content is protected !!