ಟಿಕ್ ಟಾಕ್ ನೋಡಲು ಮೊಬೈಲ್ ನೀಡದಕ್ಕೆ ಯುವತಿ ನೇಣಿಗೆ ಶರಣು

ಬೆಂಗಳೂರು: ಇಲ್ಲಿನ ಹನುಮಂತ ನಗರದ ನಿವಾಸಿ ಪ್ರಿಯಾಂಕಾ(19) ಟಿಕ್ ಟಾಕ್ ವ್ಯಾಮೋಹಕ್ಕೆ ಬಲಿಯಾಗಿದ್ದಾಳೆ. ಸಂಜೆ ಶಾಲೆಯಿಂದ ಮನೆಗೆ ಬಂದ ಪ್ರಿಯಾಂಕಾ ತಾಯಿಯ ಮೊಬೈಲ್ ತೆಗೆದುಕೊಂಡು ತನ್ನ ಗೆಳತಿಗೆ ಮನೆಗೆ ಹೋಗಲು ರೆಡಿಯಾಗಿದ್ದವಳನ್ನು ನೋಡಿದ ತಾಯಿ ಮೊಬೈಲ್ ತೆಗೆದುಕೊಂಡು ಹೋಗಬೇಡ ಎಂದು ಬುದ್ಧಿವಾದ ಹೇಳಿದ್ದರು.

ಅದನ್ನು ಕೇಳದ ಮಗಳು ಇನ್ನೇನು ಗೆಳತಿ ಮನೆಗೆ ಹೋಗುತ್ತೆನೆಂದು ಹೋರಟ ಮಗಳ ಕೈಯಿಂದ ಮೊಬೈಲ್ ಅನ್ನು ಕಿತ್ತು ಇಟ್ಟುಕೊಂಡಿದ್ದರು. ಇದೇ ವಿಚಾರಕ್ಕೆ ಕೋಪಗೊಂಡ ಪ್ರಿಯಾಂಕಾ ಸ್ನೇಹಿತೆ ಮನೆಗೆ ಹೋಗದೆ ತನ್ನ ಕೋಣೆಗೆ ಹೋಗಿದ್ದಾಳೆ. ನಂತರ ತಾಯಿ ತಾನು ದೇವಸ್ಥಾನಕ್ಕೆ ಹೋಗುವುದಾಗಿ ಹೇಳಿ ಹೋಗಿ ಬರುವಷ್ಟರಲ್ಲಿ ಪ್ರಿಯಾಂಕಾ ನೇಣಿಗೆ ಶರಣಾಗಿದ್ದಾಳೆ. ಈ ಸಂಬಂಧ ಹನುಮಂತ ನಗರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!