ಯುವಜನೋತ್ಸವ: ಮೂಢನಂಬಿಕೆ ಹೊಗಲಾಡಿಸಿ ನಿಜಗುಣಪ್ರಭು

ಉಡುಪಿ – ಭಾರತ ದೇಶವು ಬಹು ಸಂಸ್ಕೃತಿಯನ್ನು ಹೊಂದಿದ್ದು ನಾನು ಕ್ರೈಸ್ತ, ಹಿಂದು, ಮುಸ್ಲಿಂ ಆದರೂ ನಾನು ಭಾರತೀಯ ಎಂಬುದಾಗಿ ಶ್ರೀ ನಿಜಗುಣಪ್ರಭು ತೊಟಾಂದಾರ್ಯರು ತಿಳಿಸಿದರು, ಭೂಮಿಯ ಆರೈಕೆಯ ಮೂಲಕ ನವ ವಿಶ್ವದ ನಿರ್ಮಾಣ ಧ್ಯೇಯದೊಂದಿಗೆ ಕರ್ನಾಟಕ ರಾಜ್ಯ ಕಥೋಲಿಕ ಯುವಜನ ಆಯೋಗವು ತನ್ನ ೧೧ನೇ ಪ್ರಾಂತೀಯ ಯುವಜನೋತ್ಸವ ೨೦೧೯ನ್ನು ಬಳ್ಳಾರಿಯ ಆರೋಗ್ಯಮಾತಾ ಪುಣ್ಯಕ್ಷೇತ್ರದ ಆಧ್ಯಾತ್ಮ ಸಭಾಗಂಣದಲ್ಲಿ 24 ಅಕ್ಟೋಬರ್ ರಂದು ವಿದ್ಯುಕ್ತವಾಗಿ ಗಿಡಕ್ಕೆ ನೀರನ್ನು ಎರೆಯುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು

ಭಾರತದಲ್ಲಿರುವ ಮೂಢನಂಬಿಕೆಗಳನ್ನು ಹೊಗಲಾಡಿಸುವತ್ತ ಯುವಜನರು ಕಾರ್ಯಪ್ರವೃತ್ತರಾಗಬೇಕು ಹಾಗೂ ನಾನು ನೆಟ್ಟ ಮರ ನನ್ನ ಮುಂದೆ ಬೆಳೆಯಿತು ನಾನೇಕೆ ಬೆಳೆಯಲಿಲ್ಲ?ಎಂಬ ಪ್ರಶ್ನೆಯು ಪ್ರಶ್ನೆಯಾಗಿಯೇ ಉಳಿಯದೇ ಅದಕ್ಕೆ ತಕ್ಕ ಉತ್ತವರವನ್ನು ನಮ್ಮ ಜೀವನದಲ್ಲಿ ಕಂಡುಕೋಳ್ಳುವಂತಾಗವೇಕು. ಅತಂತ್ರ ತಲೆ, ಕುತಂತ್ರ ತಲೆ , ಪರತಂತ್ರ ತಲೆ, ಸ್ವತಂತ್ರ ತಲೆಯ ಅರಿವನ್ನು ನೀಡಿ ಯುವಜನರು ಯಾವಾಗಲೂ ಸ್ವತಂತ್ರ ಆಲೋಚನೆಯುಳ್ಳವರಾಗಿ ನವ ಸಮಾಜ ನಿರ್ಮಾಣ ಮಾಡುವತ್ತ ಗಮನಹರಿಸಬೇಕೆಂದು ತಿಳಿಸಿದರು.

ಕರ್ನಾಟಕ ರಾಜ್ಯ ಕಥೋಲಿಕ ಯುವಜನ ಆಯೋಗದ ಅಧ್ಯಕ್ಷರು ಹಾಗೂ ಬಳ್ಳಾರಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರು ಆಗಿರುವ ಹೆನ್ರಿ ಡಿಸೋಜರುವ, ,ಶ್ರೀ. ಮಹಾಂತ ಪ್ರಭು, ವೀರಭದ್ರಪ್ಪ, ವಿಧಾನ ಪರಿಷತ್ ಸದಸ್ಯರಾದ ಕೆ.ಸಿ. ಕೊಂಡಯ್ಯ, ಫಾದರ್ ಲೂರ್ದ ಮತ್ತು ಸಿಸ್ಟರ್ ಜೆಸ್ಸಿ ರೀಟಾ, ಶಾರದಮ್ಮ ಬಸವದಳ, ಫಾದರ್ ಪ್ರೇಮ್, ಸುಜಿತ್ ಅಂತೋನಿ, ಫಾದರ್ ಲೂರ್ದರಾಜ್, ಕರ್ನಾಟಕದ ೧೪ ಧರ್ಮಕ್ಷೇತ್ರದ ಯುವನಿರ್ದೇಶಕರು ಭಾಗವಹಿಸಿದ್ದರು. ಕುಮಾರಿ ದೀಪ್ತಿ, ನಿಶಿ ಕಾರ್ಯಕ್ರಮ ನಿರೂಪಿಸಿದರೆ, ಫಾದರ್ ಅಂತೋನಿ ದಾಸವರು ಸ್ವಾಗತಿಸದರು.

Leave a Reply

Your email address will not be published. Required fields are marked *

error: Content is protected !!