ಕಟಪಾಡಿ: ಯುವ ಕೊರಿಯೋಗ್ರಾಫರ್ ಹ್ರದಯಾಘಾತಕಕ್ಕೆ ಬಲಿ

ಉಡುಪಿ: ಐದು ದಿನದ ಹಸುಗೂಸನ್ನು ಕೈಯಲ್ಲಿಡಿದುಕೊಂಡ ತಂದೆಗೆ ಹೃದಯಾಘಾತವಾಗಿ ಮೃತಪಟ್ಟ ಘಟನೆ ಕಟಪಾಡಿಯಲ್ಲಿ ನಡೆದಿದೆ. ಕೆಎಂಸಿ ಉದ್ಯೋಗಿ, ಕಟಪಾಡಿ ಕೆನರಾ ಬ್ಯಾಂಕ್ ಬಳಿಯ ನಿವಾಸಿ ರಾಜೇಶ್ ಸಾಲ್ಯಾನ್ (36) ಬುಧವಾರ ತನ್ನ ಐದು ದಿನದ ಮಗನನ್ನು ಹಿಡಿದುಕೊಂಡಿದ್ದರು, ಈ ಸಂದರ್ಭ ರಾಜೇಶ್‌ಗೆ ತೀವ್ರ ಎದೆ ನೋವು ಕಾಣಿಸಿಕೊಂಡು ಅಲ್ಲೇ ಕುಸಿದು ಬಿದ್ದರು. ತಕ್ಷಣ ಮನೆಯವರು ಆಸ್ಪತ್ರೆಗೆ ದಾಖಲಿಸಿದರೂ ಯಾವುದೇ ಚಿಕಿತ್ಸೆಗೆ ಸ್ಪಂದಿಸಿದೆ ಮೃತ ಪಟ್ಟರು ಎಂದು ಅವರ ಕುಟುಂಬದವರು ಹೇಳಿದ್ದಾರೆ.

ಆನಂದ್ ಕುಂದರ್ ಲಲಿತಾ ದಂಪತಿಗಳ ಪುತ್ರ ರಾಜೇಶ್ ಸಾಲ್ಯಾನ್‌ಗೆ ಒಂದೂವರೆ ವರ್ಷದ ಹಿಂದೆ ಮಂಗಳೂರಿನ ದೀಪಿಕಾ ಅವರೊಂದಿಗೆ ಮದುವೆಯಾಗಿತ್ತು.

ಕೇವಲ ಐದು ದಿನದ ಹಿಂದೆ ದೀಪಿಕಾ ಗಂಡು ಮಗುವಿಗೆ ಜನ್ಮ ನೀಡಿದ್ದರು. ರಾಜೇಶ್ ಡ್ಯಾನ್ಸರ್, ಕೊರಿಯೊಗ್ರಾಫರ್ ಕೂಡ ಅಗಿದ್ದರು. ಕೆಎಂಸಿಯಲ್ಲಿ ಉದ್ಯೋಗಿಯಾಗಿದ್ದರು.

Leave a Reply

Your email address will not be published. Required fields are marked *

error: Content is protected !!